ಟಾಟಾ ಸನ್ಸ್ ಮಾಜಿಅಧ್ಯಕ್ಷ ಸೈರಸ್ ಮಿಸ್ತ್ರಿಅಪಘಾತದಲ್ಲಿ ನಿಧನ
News

ಟಾಟಾ ಸನ್ಸ್ ಮಾಜಿಅಧ್ಯಕ್ಷ ಸೈರಸ್ ಮಿಸ್ತ್ರಿಅಪಘಾತದಲ್ಲಿ ನಿಧನ

September 5, 2022

ಮುಂಬೈ, ಸೆ.4- ಟಾಟಾ ಸನ್ಸ್‍ನ ಮಾಜಿಅಧ್ಯಕ್ಷ ಸೈರಸ್ ಮಿಸ್ತ್ರಿ ಅವರುರಸ್ತೆ ಅಪ ಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಅಹಮದಾಬಾದ್ ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗಅವರಕಾರುಡಿವೈಡರ್‍ಗೆಡಿಕ್ಕಿ ಹೊಡೆದಿದೆ.

ಭಾನುವಾರ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಸೂರ್ಯ ನದಿಯ ಸೇತುವೆಯ ಮೇಲೆ ಈ ಅವಘಡ ಸಂಭವಿಸಿದೆ ಎಂದು ಪೆÇಲೀ ಸರು ತಿಳಿಸಿದ್ದಾರೆ. ಕಾರು ಚಾಲಕ ಸೇರಿದಂತೆಅವರೊಂದಿಗೆ ಪ್ರಯಾಣಿಸುತ್ತಿದ್ದಇನ್ನಿಬ್ಬರುಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳು ಗಳನ್ನು ಗುಜರಾತ್‍ನಆಸ್ಪತ್ರೆಗೆರವಾನಿಸ ಲಾಗಿದೆ. ರತನ್‍ಟಾಟಾಅವರ ನಂತರ ಸಂಘ ಟಿತಅಧ್ಯಕ್ಷರಾಗಿಆಯ್ಕೆಯಾದ ಸೈರಸ್ ಮಿಸ್ತ್ರಿ ಅವರನ್ನು ಭಾರತದಅತ್ಯಂತಉನ್ನತ ಮಟ್ಟದ ಸಂಸ್ಥೆ ಟಾಟಾ ಸನ್ಸ್‍ನಿಂದ 2016 ರಲ್ಲಿ ತೆರವುಗೊಳಿಸಲಾಗಿತ್ತು.

ಸೈರಸ್ ಮಿಸ್ತ್ರಿ ಅವರ ನಿಧನಕ್ಕೆ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಸೇರಿದಂತೆ ಹಲವು ಗಣ್ಯರುಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ವಿನಾಶಕಾರಿ ಸುದ್ದಿ. ನನ್ನ ಸಹೋದರ ಸೈರಸ್ ಮಿಸ್ತ್ರಿ ನಿಧನರಾಗಿರುವುದನ್ನು ನಂಬಲು ಆಗುತ್ತಿಲ್ಲ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸುಪ್ರಿಯಾ ಸುಳೆ ಟ್ವೀಟ್ ಮಾಡಿದ್ದಾರೆ. ಟಾಟಾ ಸನ್ಸ್‍ನಅಧ್ಯಕ್ಷ ಸೈರಸ್ ಮಿಸ್ತ್ರಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರಉಪಮುಖ್ಯಮಂತ್ರಿದೇವೇಂದ್ರ ಫಡ್ನವೀಸ್‍ತನಿಖೆಗೆ ಆದೇಶಿಸಿದ್ದಾರೆ.
ಪಾಲ್ಘರ್‍ನಲ್ಲಿ ನಡೆದಅಪಘಾತದಲ್ಲಿ ಸೈರಸ್ ಮಿಸ್ತ್ರಿ ಸಾವಿನ ಬಗ್ಗೆ ತಿಳಿದು ಅಘಾತ, ನೋವು ಉಂಟಾಗಿದೆಎಂದುದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಡಿಜಿಪಿ ಜೊತೆ ಮಾತನಾಡಿದ್ದು, ಪ್ರಕರಣದ ಬಗ್ಗೆ ವಿಸ್ತೃತತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಗೃಹ ಸಚಿವರೂಆಗಿರುವ ಫಡ್ನವೀಸ್‍ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಸೈರಸ್ ಮಿಸ್ತ್ರಿ ಕುಟುಂಬಕ್ಕೆದೇವೇಂದ್ರ ಫಡ್ನವೀಸ್ ಸಂತಾಪ ಸೂಚಿಸಿದ್ದಾರೆ. ಸೈರಸ್ ಮಿಸ್ತ್ರಿ ಇದ್ದಕಾರಿನ ಚಾಲಕ ಅತಿ ವೇಗವಾಗಿ ಚಾಲನೆ ಮಾಡುತ್ತಿದ್ದಎಂದು ಪಾಲ್ಘರ್ ಪೆÇಲೀಸರು ಹೇಳಿದ್ದಾರೆ. ಚಾಲಕ ಅತಿ ವೇಗವಾಗಿದ್ದರ ಪರಿಣಾಮವಾಗಿ ನಿಯಂತ್ರಣ ಕಳೆದುಕೊಂಡಿ ದ್ದರಿಂದಅಪಘಾತ ಸಂಭವಿಸಿದೆ ಎಂದು ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Translate »