ನಂಜನಗೂಡು, ಮೇ 25(ರವಿ)-ಮಳವಳ್ಳಿಯ ಸೋಂಕಿತ ಸಿಡಿಪಿಓ ಭೇಟಿ ಯಿಂದ ಸೀಲ್‍ಡೌನ್ ಮಾಡಲಾಗಿರುವ ತಾಲೂಕಿನ ಹೆಳವರಹುಂಡಿ ಹಾಗೂ ಅಂಜ ನಾಪುರ ಗ್ರಾಮಗಳಿಗೆ ಮಾಜಿ ಸಂಸದ ಆರ್.ಧ್ರುವನಾರಾಯಣ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಭೇಟಿ ನೀಡಿ, ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಈ ವೇಳೆ ಮಾತನಾಡಿದ ಆರ್.ಧ್ರುವ ನಾರಾಯಣ್, ಗ್ರಾಮಸ್ಥರಿಗೆ ಸೀಲ್‍ಡೌನ್ ಸಮಯದಲ್ಲಿ ತೊಂದರೆಯಾಗದಂತೆ ದಿನಸಿ, ತರಕಾರಿ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಅಗತ್ಯ ಸೇವೆ ಒದಗಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಆರೋಗ್ಯ ಸೇವೆಯನ್ನೂ ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕೊರೊನಾದಿಂದಾಗಿ ಆತಂಕ ಪಡುವ ಅಗತ್ಯವಿಲ್ಲ. ಸೋಂಕು ನಿಯಂತ್ರಿಸಲು ಜಿಲ್ಲಾಡ ಳಿತ ಸನ್ನದ್ಧವಾಗಿದೆ. ಸೀಲ್‍ಡೌನ್ ಸಮಯ ದಲ್ಲಿ ಜನತೆ ಅನಗತ್ಯವಾಗಿ ಮನೆಯಿಂದ ಹೊರÉ ಬಾರದೆ ಸಹಕರಿಸಬೇಕು. ವೈಯ ಕ್ತಿಕ ಸ್ವಚ್ಛತೆ ಕಾಪಾಡಿಕೊಂಡು, ಆರೋ ಗ್ಯದ ಬಗ್ಗೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಕೊರೊನಾದಿಂದ ಮುಕ್ತ ಗೊಂಡಿದ್ದ ನಂಜನಗೂಡಿಗೆ ಮಳವಳ್ಳಿ ಸೋಂಕಿತನಿಂದಾಗಿ ಮತ್ತೊಂದು ಬಾರಿ ಆತಂಕ ಎದುರಾಗಿದೆ. ಇದರಿಂದ ಗ್ರಾಮಸ್ಥರು ಎದೆ ಗುಂದಬೇಕಿಲ್ಲ. ನಿಮ್ಮೊಂದಿಗೆ ಕಾಂಗ್ರೆಸ್ ಪಕ್ಷವಿದೆ. ಜಿಲ್ಲಾಡಳಿತವೂ ಸಕಲ ಸನ್ನದ್ಧ ವಾಗಿದೆ ಎಂದು ಧೈರ್ಯ ತುಂಬಿದರು.
ಇದೇ ಸಂದರ್ಭದಲ್ಲಿ ಮಾಜಿ ಜಿಪಂ ಉಪಾಧ್ಯಕ್ಷ ಮಡುವಿನಹಳ್ಳಿ ಶಂಕರಪ್ಪ, ಟಿಎ ಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಅರಗು ಮತ್ತು ಬಣ್ಣ ನಿಗಮದ ಮಾಜಿ ಅಧ್ಯಕ್ಷ ವೆಂಕಟೇಶ್, ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಕೆ.ಮಾರುತಿ, ಮುಖಂಡರಾದ ಗೋವಿಂದರಾಜು, ಕಳಲೆ ರಾಜೇಶ್ ಇದ್ದರು.