ಮೈಸೂರು, ಜೂ.24(ಪಿಎಂ)- ಮಾಜಿ ಪ್ರಧಾನಿಗಳೂ ಆದ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ರಾಜ್ಯದಿಂದ ಅವಿರೋಧ ವಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವುದಕ್ಕೆ ಮೇಯರ್ ತಸ್ನೀಂ ಸೇರಿದಂತೆ ಜೆಡಿಎಸ್‍ನ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯಸಭೆಯಲ್ಲಿ ದೇಶದ ಹಾಗೂ ಕರ್ನಾಟಕ ರಾಜ್ಯದ ಪರವಾಗಿ ಧ್ವನಿ ಎತ್ತಲು ಸಮರ್ಥ ನಾಯಕನ ಅಗತ್ಯವಿತ್ತು. ಅದೀಗ ನೆರವೇರಿದ್ದು, ಹೆಚ್.ಡಿ.ದೇವೇಗೌಡ ಅವರು ನಾಡು-ನುಡಿ, ನೆಲ-ಜಲದ ವಿಷಯ ಬಂದಾಗ ರಾಜಕಾರಣಿ ಎಂಬು ದನ್ನು ಮರೆತು ಮಣ್ಣಿನ ಮಗನಾಗಿ ಹೋರಾಡುತ್ತಾರೆ. ಅವರಿಗೆ ಆರೋಗ್ಯ, ಆಯಸ್ಸು ಹಾಗೂ ಹೆಚ್ಚಿನ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಶಾಸಕ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಶ್ರೀಕಂಠೇ ಗೌಡ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಅಜೀಜ್ (ಅಬ್ದುಲ್ಲಾ), ಕರ್ನಾಟಕ ಅಲ್ಪಸಂಖ್ಯಾತರ ನಿಗಮದ ಮಾಜಿ ಅಧ್ಯಕ್ಷ ಜಫ್ರುಲ್ಲಾಖಾನ್, ಮಾಜಿ ಮೇಯರ್‍ಗಳಾದ ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಪಕ್ಷದ ಮುಖಂಡರಾದ ಸೈಯ್ಯದ್ ರಹಮತ್ ಉಲ್ಲಾ, ನಸ್ರುದ್ದೀನ್, ಕೆ.ವಿ.ಮಲ್ಲೇಶ್, ಹ್ಯಾಶಿಂ ಅಲಿಖಾನ್, ಸಲೀಮ್ ಸೇರಿದಂತೆ ಪಕ್ಷದ ಮುಖಂಡರು ದೇವೇಗೌಡರಿಗೆ ಅಭಿನಂದನೆ ಸಲ್ಲಿಸಿದ್ದಾರೆ.