ಚಾಮರಾಜನಗರ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರ ದುರಂತ ಸಾವು
ಚಾಮರಾಜನಗರ

ಚಾಮರಾಜನಗರ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರ ದುರಂತ ಸಾವು

March 9, 2020

ಚಾಮರಾಜನಗರ, ಮಾ.8- ಪ್ರತ್ಯೇಕ ಪ್ರಕರಣ ಗಳಲ್ಲಿ ಜಿಲ್ಲೆಯಲ್ಲಿ ನಾಲ್ವರು ದುರಂತ ರೀತಿ ಸಾವ ನ್ನಪ್ಪಿರುವ ಬಗ್ಗೆ ವರದಿಯಾಗಿದೆ. ತಾಲೂಕಿನ ದೊಡ್ಡರಾಯಪೇಟೆಯಲ್ಲಿ ಗೃಹಿಣಿ ಯೊಬ್ಬರು ಆತ್ಮಹತ್ಯೆ ಮಾಡಿಕೊಂಡರೆ, ಚಾ.ನಗರ ದಲ್ಲಿ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬನ ಹತ್ಯೆ ನಡೆದಿದ್ದು, ಗುಂಡ್ಲು ಪೇಟೆ ತಾಲೂಕಿನ ಬೆಳಚಲವಾಡಿಯಲ್ಲಿ ತಾಯಿ, ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗೃಹಿಣಿ ಆತ್ಮಹತ್ಯೆ: ನೇಣು ಬಿಗಿದುಕೊಂಡು ತಮ್ಮ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತಿ ಪೊಲೀಸರಿಗೆ ಹೇಳಿಕೆ ನೀಡಿದರೆ, ಮಹಿಳೆ ತವರಿ ನವರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೊಲೀ ಸರಿಗೆ ದೂರು ನೀಡಿದ್ದಾರೆ.

ತಾಲೂಕಿನ ದೊಡ್ಡರಾಯಪೇಟೆ ಗ್ರಾಮದ ನಿವಾಸಿ ಮಹೇಶ್‍ಗೌಡರ ಪತ್ನಿ ಕಮಲಮ್ಮ(57) ಸಾವನ್ನಪ್ಪಿ ದವರು. ಇವರ ಪತಿ ಮಹೇಶ್‍ಗೌಡ, ತಮ್ಮ ಪತ್ನಿಗೆ ಆಗಾಗ್ಗೆ ಅನಾರೋಗ್ಯ ಕಾಡುತ್ತಿತ್ತು. ಇದರಿಂದ ಮನ ನೊಂದಿದ್ದ ಆಕೆ ಶನಿವಾರ ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಆಕೆಯನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ರಾಮಸಮುದ್ರ ಪೊಲೀಸ್ ಠಾಣೆಗೆ ವಿವರಣೆ ನೀಡಿದ್ದಾರೆ.

ಈ ಮಧ್ಯೆ ಕಮಲಮ್ಮ ಅವರ ಸಹೋದರ ಪಣ್ಯದಹುಂಡಿ ಗ್ರಾಮದ ನಿವಾಸಿ ಶಿವದತ್ತ, ತನ್ನ ಅಕ್ಕನ ಸಾವು ಸಂಶಯಾಸ್ಪದವಾಗಿದೆ. ನಮ್ಮ ಅಕ್ಕ-ಭಾವನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಪತಿಯ ಹಿಂಸೆಯಿಂದಲೇ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಮ ಸಮುದ್ರ ಠಾಣೆಗೆ ದೂರು ನೀಡಿದ್ದಾರೆ.

ಒಟ್ಟಾರೆ ಈ ಎರಡೂ ದೂರುಗಳ ಹಿನ್ನೆಲೆಯಲ್ಲಿ ಕಮಲಮ್ಮ ಅವರ ಸಾವು ಸಂಶಯಾಸ್ಪದವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ರಾಮಸಮುದ್ರ ಠಾಣೆ ಎಸ್‍ಐ ಸುನೀಲ್ ತನಿಖೆ ಕೈಗೊಂಡಿದ್ದಾರೆ. ಭಾನುವಾರ ಬೆಳಿಗ್ಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕಮಲಮ್ಮ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ದೇಹವನ್ನು ವಾರಸು ದಾರರಿಗೆ ಹಸ್ತಾಂತರಿಸಲಾಯಿತು.

ಕುಡಿದ ಮತ್ತಿನಲ್ಲಿ ವ್ಯಕ್ತಿ ಹತ್ಯೆ: ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲ್ಲಿ ಅಂತ್ಯ ವಾಗಿರುವ ಘಟನೆ ನಗರದ ಸಂಪಿಗೆ ರಸ್ತೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ಚಾಮರಾಜನಗರ ನಾಯ ಕರ ಬೀದಿ ನಿವಾಸಿ ಮಲ್ಲೇಶ್ (37) ಹತ್ಯೆಗೀಡಾದ ವ್ಯಕ್ತಿ. ಪ್ರಕರಣ ಸಂಬಂಧ ಟಿ.ನರಸೀಪುರ ತಾಲೂಕಿನ ಆಲಂ ಬಾಡಿ ಗ್ರಾಮದ ನಿವಾಸಿ ಪ್ರಸಾದ್‍ನನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ವಿವರ: ಪ್ರಸಾದ್ ಮತ್ತು ಮಲ್ಲೇಶ್ ಶನಿವಾರ ರಾತ್ರಿ ನಗರದ ಸಂಪಿಗೆ ರಸ್ತೆಯಲ್ಲಿರುವ ರಾಜರಾಜೇ ಶ್ವರಿ ಬಾರ್‍ನಲ್ಲಿ ಮದ್ಯ ಸೇವಿಸಿ ಹೊರ ಬರುವಾಗ ಯಾವುದೋ ವಿಷಯಕ್ಕೆ ಇವರಿಬ್ಬರ ನಡುವೆ ಜಗಳ ಆರಂಭವಾಗಿದೆ. ಕುಡಿದ ಮತ್ತಿನಲ್ಲಿ ಪ್ರಸಾದ್ ಮಲ್ಲೇಶ್‍ನನ್ನು ರಸ್ತೆಗೆ ತಳ್ಳಿದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿ ಪ್ರಸಾದ್‍ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಜೆ.ಮೋಹನ್ ಹಾಗೂ ಇನ್ಸ್‍ಪೆಕ್ಟರ್ ಕೆ.ಎಂ.ಮಂಜು ಪರಿಶೀಲನೆ ನಡೆಸಿದರು. ಬಳಿಕ ದೂರು ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿದ್ದಾನೆ.

ತಾಯಿ, ಮಗ ನೇಣಿಗೆ ಶರಣು: ಕಿರಿಯ ಮಗ ವಿವಾಹಿತೆಯೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಅವಮಾನ ತಾಳಲಾರದೆ ತಾಯಿ ಮತ್ತು ಹಿರಿಯ ಮಗ ಇಬ್ಬರೂ ಮನನೊಂದು ನೇಣಿಗೆ ಶರಣಾ ಗಿರುವ ಘಟನೆ ನಡೆದಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.ತಾಲೂಕಿನ ಬೆಳಚಲವಾಡಿ ಗ್ರಾಮದ ಮಹ ದೇವಮ್ಮ(40) ಮತ್ತು ಅವರ ಹಿರಿಯ ಮಗ ಸಿದ್ದ ರಾಜು (26) ನೇಣಿಗೆ ಶರಣಾದ ದುರ್ದೈವಿಗಳು.

ಘಟನೆ ವಿವರ: ಮೃತ ಮಹದೇವಮ್ಮ ಅವರ ಕಿರಿಯ ಮಗ ನಂಜುಂಡಿ, ಕಳೆದ 3 ದಿನಗಳ ಹಿಂದೆ ಅದೇ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಪರಾರಿಯಾಗಿದ್ದ. ಇದರಿಂದ ವಿವಾಹಿತ ಮಹಿಳೆಯ ಕಡೆಯವರು ನಿನ್ನ ಮಗ ಎಲ್ಲಿ ದ್ದಾನೆ ತಿಳಿಸು ಎಂದು ಗಲಾಟೆ ಮಾಡಿದ್ದರು. ಇದರಿಂದ ಅವಮಾನ ತಾಳದೆ ಶನಿವಾರ ರಾತ್ರಿ ಮನೆಯ ತೊಲೆಗೆ ಒಂದೇ ಸೀರೆಯಲ್ಲಿ ಇಬ್ಬರೂ ನೇಣುಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಪೆÇಲೀ ಸರು ತಿಳಿಸಿದ್ದಾರೆ. ಈ ಬಗ್ಗೆ ಮೃತ ಮಹದೇವಮ್ಮ ಅವರ ಸಹೋದರ ರಾಮಕೃಷ್ಣ ಪೆÇಲೀಸರಿಗೆ ದೂರು ನೀಡಿ ಮಹಿಳೆಯ ಕಡೆಯವರು ಗÀಲಾಟೆ ಮಾಡಿದ್ದರಿಂದ ಅವಮಾನ ಮತ್ತು ಅವರ ಕಿರುಕುಳ ತಾಳಲಾರದೇ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರ ಸಾವಿಗೆ ಪರಾರಿಯಾಗಿರುವ ಮಹಿಳೆಯ ಕಡೆಯ ವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬೇಗೂರು ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಯಲ್ಲಿ ಕಾರ್ಯ ಪ್ರವೃತ್ತರಾದ ಪೆÇಲೀಸರು ಘಟನೆಗೆ ಕಾರಣರಾದ ವಿವಾಹಿತ ಮಹಿಳೆಯ ಅತ್ತೆ ಜಯಮ್ಮ, ಮಗ ಕೀರ್ತಿ, ಸೊಸೆ ಚಂದ್ರಮ್ಮ, ಅಳಿಯ ಸ್ವಾಮಿ ಎಂಬುವವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ತೆರಳಿದ ಬೇಗೂರು ಠಾಣೆ ಎಸ್‍ಐ ಲೋಕೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಶವಗಳನ್ನು ವಶಕ್ಕೆ ಪಡೆದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೊಪ್ಪಿಸಿದ್ದಾರೆ.

Translate »