ನಾಲ್ಕನೇ ಅಲೆ ತಡೆಗೆ ಒಂದೇ ಉಪಾಯ: ಲಸಿಕೆ ತಪ್ಪದೇ ಪಡೆಯಿರಿ
News

ನಾಲ್ಕನೇ ಅಲೆ ತಡೆಗೆ ಒಂದೇ ಉಪಾಯ: ಲಸಿಕೆ ತಪ್ಪದೇ ಪಡೆಯಿರಿ

April 13, 2022

ಬೆಂಗಳೂರು, ಏ.12 (ಕೆಎಂಶಿ)-ಸಂಭಾವ್ಯ ನಾಲ್ಕನೇ ಅಲೆ ತಡೆಗೂ ಲಸಿಕೆ ಒಂದೇ ಉಪಾಯ. ಅದನ್ನು ವಿಳಂಬ ಮಾಡದೇ ಪಡೆಯಿರಿ ಎಂದು ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ|| ಕೆ. ಸುಧಾಕರ್ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್-ಜುಲೈ ಪ್ರಾರಂಭವಾಗಿ ಸೆಪ್ಟೆಂಬರ್‍ವರೆಗೆ ನಾಲ್ಕನೇ ಅಲೆ ಇರ ಬಹುದು ಎಂದು ತಜ್ಞರು ತಿಳಿಸಿದ್ದಾರೆ. ಅದರೆ, ಅದನ್ನು ಎದುರಿಸಿ ನಿಯಂತ್ರಿಸಲು ಕರ್ನಾಟಕ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.

ನಾಲ್ಕನೇ ಅಲೆಗೆ ಆತಂಕ ಪಡುವ ಅಗತ್ಯವಿಲ್ಲ. ವಿಶ್ವದ 8 ದೇಶಗಳಲ್ಲಿ ಹೆಚ್ಚು ಕಾಣಿಸುತ್ತಿದ್ದು, ಅಲ್ಲಿಂದ ಬಂದವರಿಗೆ ತಪಾಸಣೆ ಮಾಡಲಾಗುತ್ತಿದೆ ಎಂದರು.
ಮಾಸ್ಕ್ ಹಾಕುವುದು ಅತ್ಯಗತ್ಯ. ಅದರಲ್ಲಿ ಸಡಿಲಿಕೆ ಇಲ್ಲ ಎಂದ ಅವರು, ನಾಲ್ಕನೇ ಅಲೆಗೆ ಹೆದರಬೇಕಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. 6ರಿಂದ 12 ವರ್ಷದ 5 ಸಾವಿರ ಮಕ್ಕಳಿಗೆ ಲಸಿಕೆ ಕೊಟ್ಟಿಲ್ಲ. ಅವರ ಸ್ಕ್ರೀನಿಂಗ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಇವತ್ತು ಕೋವಿಶೀಲ್ಡ್ ಕೋವ್ಯಾಕ್ಸಿನ್ ಸೇರಿ ಒಟ್ಟು 10 ಲಸಿಕೆಗಳು ಲಭ್ಯವಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕೊಡಲಾ ಗುತ್ತಿದೆ. ಡಿಎನ್‍ಎ ವ್ಯಾಕ್ಸಿನ್ ನಮ್ಮಲ್ಲಿ ಮಾತ್ರ ಲಭ್ಯವಿದೆ. ವಿವಿಧ ಕಂಪೆನಿ ಗಳ ಲಸಿಕೆಗಳ ಉತ್ಪಾದನೆ ನಡೆದಿದೆ ಎಂದು ತಿಳಿಸಿದರು.

ಅಮೇರಿಕದಲ್ಲಿ ಲಸಿಕೆ ಉತ್ಪಾದನೆ ಆಯಿತು. ಭಾರತ ಅಲ್ಲಿಂದ ಲಸಿಕೆ ಪಡೆಯಬಯಸಿತ್ತು. ಲಸಿಕೆಯಿಂದ ಸಮಸ್ಯೆ ಆದರೆ ನಾವು ಹೊಣೆಗಾರರಲ್ಲ ಎಂದು ಅಮೇರಿಕ ತಿಳಿಸಿತ್ತು. ಆದರೆ, ನಮ್ಮ ಸರ ಕಾರವು ಜನರ ಜೀವದೊಂದಿಗೆ ಚೆಲ್ಲಾಟ ಆಡಲು ಸಿದ್ಧವಿರಲಿಲ್ಲ ಎಂದು ವಿವರಿಸಿದರು.

ಇಲ್ಲಿನವರೆಗೂ 185 ಕೋಟಿ 90 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ. ಮುಂದುವರಿದ ದೇಶ ಅಮೇರಿಕದಲ್ಲೂ ಲಸಿಕೆ ಪಡೆಯಲು ಜನರು ಹಿಂದೆ ಮುಂದೆ ನೋಡು ತ್ತಿದ್ದಾರೆ. ಒಕ್ಕೂಟ ವ್ಯವಸ್ಥೆ ಇರುವ ದೇಶ ಇದಾಗಿದ್ದು, ವಿವಿಧ ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಆಡಳಿತ ನಡೆಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಯಿಂದ ಕೋವಿಡ್ ನಿಯಂತ್ರಣ ಸಾಧ್ಯವಾಗಿದೆ ಎಂದರು.

ಕರ್ನಾಟಕದಲ್ಲಿ 10.54 ಕೋಟಿ ಲಸಿಕೆ ಕೊಡಲಾಗಿದೆ. ಶೇ. 98 ರಷ್ಟು ಎರಡನೇ ಡೋಸ್ ಲಸಿಕೆ ನೀಡಿಕೆ ಸಾಧ್ಯ ವಾಗಿದೆ ಎಂದ ಅವರು, ಕೋವಿಡ್ ಕುರಿತಂತೆ ಉದಾಸೀನತೆ ಸಲ್ಲದು. 32 ಲಕ್ಷ ಜನರು ಎರಡನೇ ಡೋಸ್ ಪಡೆಯಬೇಕಿದೆ. ಪ್ರಿವೆಂಟಿವ್ ಡೋಸ್ ಕೂಡ ಪಡೆಯಬೇಕು. ವೈರಸ್ ಬೇರೆ ಪ್ರಭೇದದ ಮೂಲಕ ಬರಬಹುದು ಎಂದು ಎಚ್ಚರಿಸಿದರು. ಕೋವಿಡ್ ಅನ್ನು ಸಮರ್ಥವಾಗಿ ಸೆಣಸಲು ಲಸಿಕೆ ಒಂದೇ ಉಪಾಯ. ಭಾರತವೊಂದರಲ್ಲೇ ಉಚಿತವಾಗಿ ಲಸಿಕೆ ಸಿಗುತ್ತಿದೆ. ಬೇರೆ ದೇಶಗಳಲ್ಲಿ ಸಾವಿ ರಾರು ರೂಪಾಯಿ ವೆಚ್ಚ ಮಾಡಿ ಲಸಿಕೆ ಪಡೆ ಯುತ್ತಿದ್ದಾರೆ ಎಂದು ವಿವರ ನೀಡಿದರು.

Translate »