ಚಾಮುಂಡಿಬೆಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಂದ   ಜನತಾ ಜಲಧಾರೆ ಯಾತ್ರಾರಥಕ್ಕೆ ಪೂಜೆ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಜನತಾ ಜಲಧಾರೆ ಯಾತ್ರಾರಥಕ್ಕೆ ಪೂಜೆ

April 13, 2022

ಮೈಸೂರು,ಏ.12(ಎಂಟಿವೈ)- ರಾಜ್ಯ ದಲ್ಲಿ ಎಲ್ಲಾ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಆಗ್ರ ಹಿಸಿ ಜೆಡಿಎಸ್ ಏ.16ರಿಂದ `ಜನತಾ ಜಲ ಧಾರೆ ಯಾತ್ರೆ’ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಚಾಮುಂಡಿಬೆಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಯಾತ್ರಾ ರಥಕ್ಕೆ ಪೂಜೆ ಸಲ್ಲಿಸಿದರು.

ಚಾಮುಂಡಿಬೆಟ್ಟದಲ್ಲಿ ನಾಡದೇವಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಜಲಧಾರೆ ವಾಹನಕ್ಕೂ ಪೂಜೆ ಸಲ್ಲಿಸಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪತ್ರಕರ್ತರೊಂದಿಗೆ ಮಾತನಾಡಿ, ಜೆಡಿಎಸ್‍ನಿಂದ ನಡೆಸುತ್ತಿ ರುವ ಜನತಾ ಜಲಧಾರೆ ಯಾತ್ರೆ ಕಾಂಗ್ರೆಸ್ ನಡೆಸಿದ ಮೇಕೆದಾಟು ಪಾದಯಾತ್ರೆಗೆ ಪರ್ಯಾಯವಲ್ಲ. ಅವರದ್ದು ಷೋಗಾಗಿ ನಡೆಸಿದ ಪಾದಯಾತ್ರೆ. ಅವರು ನೇರವಾಗಿ ರಾಜಕೀಯ ಯಾತ್ರೆ ಅಂತಾ ಹೇಳಲಿಲ್ಲ. ನಮ್ಮ ಯಾತ್ರೆ ಜನರ ಮುಂದೆ ಸಮಸ್ಯೆ ಬಿಚ್ಚಿ ಡಲು ನಡೆಸುತ್ತಿದ್ದೇವೆ.

ಮುಂಬರುವ ಚುನಾವಣೆಗಾಗಿ ಸಿದ್ಧತೆ ಮಾಡಿಕೊಳ್ಳಲು ಜಲಧಾರೆ ಯಾತ್ರೆ ನಡೆಸಲಾಗು ತ್ತಿದೆ. ಈ ಯಾತ್ರೆಯೊಂದಿಗೆ ರಾಜ್ಯದಲ್ಲಿ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸುತ್ತಿ ದ್ದೇವೆ. ಪ್ರಚಾರ ನಡೆಸುವ ಬಗ್ಗೆ ನೇರವಾಗಿ ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಈ ಬಾರಿ ಕನ್ನಡಿಗರ ಬಹುಮತದ ಸರ್ಕಾರ ಬರಬೇಕು. ಯಾವ ಪP್ಷÀದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅಲ್ಲದೆ, ಕೇವಲ 30 ಅಥವಾ 40 ಸ್ಥಾನ ಪಡೆಯುವುದಕ್ಕಾಗಿ ಈ ಹೋರಾಟ ಮಾಡುತ್ತಿಲ್ಲ. ಪೂರ್ಣ ಪ್ರಮಾಣದಲ್ಲಿ ಬಹುಮತದ ಸರ್ಕಾರ ತರಲು ಈ ಹೋರಾಟ ನಡೆಸಲಾಗುತ್ತಿದೆ. ನಮ್ಮದು ವಿಚಾರ ಆಧರಿತ ಹೋರಾಟ. ಧರ್ಮ-ಧರ್ಮಗಳ ನಡುವೆ ಬೆಂಕಿ ಇಟ್ಟು ಮತ ಕೇಳುತ್ತಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ನಮ್ಮ ಹೋರಾಟ ಎಂದು ತಿಳಿಸಿದರು.

ನನ್ನ ಮಾತಲ್ಲ; ನನ್ನ ಕೆಲಸಗಳು ಮಾತನಾಡುತ್ತವೆ ಎಂದು ಹೇಳಿದ್ದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದ ಹೆಚ್‍ಡಿಕೆ, ನಿಮ್ಮ ಯಾವ ಕೆಲಸ ಮಾತನಾಡುತ್ತಿದೆ? ರಾಯಚೂರಿನಲ್ಲಿ ಯಾವ ಕಾರಣಕ್ಕೆ ತಲವಾರ್ ಹಂಚಿz್ದÁರೆ? ಅವರನ್ನು ನೀವು ಬಂಧಿಸಿದ್ದೀರಾ? ಮೌನಿ ಬಸವರಾಜ ಬೊಮ್ಮಾಯಿ ಅವರೇ. ರಾಯಚೂರಿನಲ್ಲಿ ಲವ್ ಕೇಸರಿ ವಿಚಾರ ಪ್ರಸ್ತಾಪವಾಗಿದೆ. ಯಾವುದೇ ಪ್ರೀತಿಯಲ್ಲಿ ಬಾಂಧವ್ಯ ಮುಖ್ಯ. ಪರಸ್ಪರ ಪ್ರೀತಿಸುವವರಿಗೆ ತೊಂದರೆ ಕೊಡಬಾರದು. ಅವರು ಯಾವ ಧರ್ಮದವರೇ ಆಗಿರಲಿ. ಅವರನ್ನು ನಿಯಂತ್ರಿಸುವ ಕೆಲಸ ಮಾಡಬಾರದು ಎಂದು ಹೇಳಿದರು.

ತಲೆ ಒಡೆಯಲು ಕಾಯುತ್ತಿದ್ದೀರಾ: ಕಲ್ಲಂಗಡಿ ಒಡೆದಾಗ ತೋರಿದ ಅನುಕಂಪ, ತಲೆ ಒಡೆದಾಗಲೂ ತೋರಿಸಿ ಎಂದು ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಸಿ.ಟಿ.ರವಿ ವಿರುದ್ಧ ಹರಿಹಾಯ್ದ ಅವರು, ನಿಮ್ಮ ಮಾತಿನ ಅರ್ಥ ಏನು?, ತಲೆ ಒಡೆಯಲು ಕಾಯುತ್ತಿದ್ದೀರಾ ನೀವು? ರಾಜ್ಯದಲ್ಲಿ ತಲೆ ಒಡೆಯುತ್ತಾ ಇರುತ್ತೇವೆ ಅಂತಾನಾ? ನೀವು ತಲೆ ಒಡೆಯುತ್ತಿರಿ. ನಾವು ಸಾಂತ್ವನ ಹೇಳಬೇಕಾ ಎಂದು ಪ್ರಶ್ನಿಸಿದರು.

ಹಾಸನದಲ್ಲಿ ನಿರ್ಬಂಧ ಹೇರಲ್ಲ: ಹಾಸನ ಜಿ¯್ಲÉಯಲ್ಲಿ ಯಾವ ಜಾತ್ರೆಯಲ್ಲೂ ಮುಸ್ಲಿಂಮರಿಗೆ ನಿರ್ಬಂಧ ಹೇರುವುದಕ್ಕೆ ಅವಕಾಶ ಕೊಡುವುದಿಲ್ಲ. ಚೆನ್ನಕೇಶವ ಜಾತ್ರೆಯಲ್ಲಿ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ಖುದ್ದು ಶಾಸಕ ಹೆಚ್.ಡಿ.ರೇವಣ್ಣ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಹೇಳಿz್ದÉೀನೆ. ನಿರ್ಬಂಧ ತೆರವು ಮಾಡಿಸಿ ಅವ ರಿಗೆ ವ್ಯಾಪಾರಕ್ಕೆ ಅವಕಾಶ ಕೊಡಿಸುತ್ತೇನೆ. ಹಾಸನ ಜಿ¯್ಲÉ ಮಾತ್ರ ಅಲ್ಲ, ಎಲ್ಲ ಜಿ¯್ಲÉಗ ಳಲ್ಲೂ ನಿರ್ಬಂಧ ತೆರವಿಗೆ ನನ್ನ ಹೋರಾಟ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅದು ಬಾಯಿ ತಪ್ಪಿ ಆಡಿದ ಮಾತಲ್ಲ. ಅದು ಸಿದ್ದರಾಮಯ್ಯ ತಮ್ಮ ಮನಸ್ಸಿನ ಮಾತನ್ನು ನೇರವಾಗಿ ಹೇಳಿz್ದÁರೆ ಎಂದು ಲೇವಡಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಸಾ.ರಾ.ಮಹೇಶ್, ಕೆ.ಮಹದೇವ್, ಅಶ್ವಿನ್‍ಕುಮಾರ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಮೇಯರ್‍ಗಳಾದ ಎಂ.ಜೆ.ರವಿ ಕುಮಾರ್, ಲಿಂಗಪ್ಪ, ಜಿ.ಪಂ ಮಾಜಿ ಸದಸ್ಯ ಸಿ.ಜೆ.ದ್ವಾರಕೀಶ್, ಪಾಲಿಕೆ ಸದಸ್ಯರಾದ ಶೋಭಾ ಮೋಹನ್, ಎಸ್‍ಬಿಎಂ ಮಂಜು, ಪ್ರೇಮಾಶಂಕರೇಗೌಡ, ಮುಖಂಡರಾದ ಕೆ.ವಿ.ಮಲ್ಲೇಶ್, ಎಂ.ಎನ್.ರಾಮು, ಸೋಮು ಹಾಗೂ ಇನ್ನಿತರರು ಇದ್ದರು.

Translate »