ಎಸಿಬಿ ಹೆಸರಲ್ಲಿ ಅಧಿಕಾರಿಗಳಿಗೆ ವಂಚನೆ: ಇಬ್ಬರ ಬಂಧನ
ಮೈಸೂರು

ಎಸಿಬಿ ಹೆಸರಲ್ಲಿ ಅಧಿಕಾರಿಗಳಿಗೆ ವಂಚನೆ: ಇಬ್ಬರ ಬಂಧನ

May 28, 2022

ಮೈಸೂರು, ಮೇ ೨೭- ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳ ಹೆಸರಿನಲ್ಲಿ ರಾಜ್ಯಾ ದ್ಯಂತ ವಿವಿಧ ಇಲಾಖೆಗಳ ನೌಕರರಿಗೆ ಕರೆ ಮಾಡಿ, ಎಸಿಬಿ ದಾಳಿಯಿಂದ ತಪ್ಪಿಸಿಕೊಳ್ಳಬೇಕೆಂ ದರೆ ಹಣ ನೀಡಬೇಕೆಂದು ಬೆದರಿಸಿ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ ಇಬ್ಬರು ವಂಚಕ ರನ್ನು ಎಸಿಬಿ ವಿಶೇಷ ತನಿಖಾ ತಂಡ ಬಂಧಿಸಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಸದಲಗಾ ಗ್ರಾಮದ ಮುರಿಗೆಪ್ಪ ನಿಂಗಪ್ಪ ಕುಂಬಾರ(೫೬) ಮತ್ತು ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಮುಗುಲಿ ಗ್ರಾಮದ ರಜನಿಕಾಂತ್(೪೬) ಬಂಧಿತರಾಗಿದ್ದು, ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ನೌಕರರಿಗೆ ಕರೆಮಾಡಿ ಹಣ ಪಡೆಯಲಾಗುತ್ತಿದೆ ಎಂಬ ಆರೋಪದಡಿ ರಾಜ್ಯಾದ್ಯಂತ ಅನೇಕ ಪ್ರಕರಣಗಳು ದಾಖಲಾದ ಹಿನ್ನೆಲೆ ಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಬಾಗಲಕೋಟೆ ಜಿಲ್ಲೆ ಎಸ್ಪಿ ಲೋಕೇಶ್ ಜಗಲಾಸರ್ ಹಾಸನ ಜಿಲ್ಲಾ ಎಸ್ಪಿ ಆರ್. ಶ್ರೀನಿವಾಸಗೌಡ, ಎಸಿಬಿ ಉತ್ತರ ವಲಯ ಬೆಳಗಾವಿ ಎಸ್ಪಿ ಬಿ.ಎಸ್. ನೇಮಗೌಡ ಮತ್ತು ಎಸಿಬಿ ದಕ್ಷಿಣ ವಲಯ ಮೈಸೂರು ಎಸ್ಪಿ ವಿ.ಜೆ. ಸಜೀತ ಹಾಗೂ ಸಿಬ್ಬಂದಿಗಳನ್ನೊಳ ಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಇಬ್ಬರು ಆರೋಪಿಗಳನ್ನು ಹಾಸನದಲ್ಲಿ ಶುಕ್ರವಾರ ಬಂಧಿಸಿ ಅವರಿಂದ ಕೆಲವು ಸಿಮ್ ಕಾರ್ಡ್ಗಳು ಹಾಗೂ ಮೊಬೈಲ್ ಗಳನ್ನು ವಶಪಡಿಸಿ ಕೊಂಡಿದೆ. ಆರೋಪಿ ಮುರಿಗೆಪ್ಪ ನಿಂಗಪ್ಪ ಕುಂಬಾರ, ರಾಜ್ಯಾದ್ಯಂತ ಸುಮಾರು ೪೦ ಪ್ರಕರಣಗಳಲ್ಲಿ ಭಾಗಿ ಯಾಗಿದ್ದಾನೆ. ಮತ್ತೋರ್ವ ಆರೋಪಿ ರಜನಿಕಾಂತ್ ಆರಕ್ಕೂ ಹೆಚ್ಚು ಇಂತಹ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಇವರಿಬ್ಬರ ವಿರುದ್ಧ ಕೆಲವು ಪ್ರಕರಣಗಳು ತನಿಖಾ ಹಂತದಲ್ಲಿದ್ದು, ಮತ್ತೆ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತ ದಲ್ಲಿದೆ. ಕೆಲವು ಪ್ರಕರಣಗಳಲ್ಲಿ ಈ ಆರೋಪಿಗಳ ಬಂಧನಕ್ಕೆ ವಾರಂಟ್ ಹೊರಡಿಸಲಾಗಿದೆ ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.

ಈ ಆರೋಪಿಗಳು ಬೇರೆ ಬೇರೆ ಹೆಸರಿನಲ್ಲಿ ಸಿಮ್ ಕಾರ್ಡ್ ಮತ್ತು ಮೊಬೈಲ್ ಖರೀದಿಸಿ ವಿವಿಧ ಇಲಾಖೆಗಳ ಸರ್ಕಾರಿ ನೌಕರರಿಗೆ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಎಸಿಬಿ ದಾಳಿ ಮಾಡುವುದಾಗಿ ಹೆದರಿಸಿ ವಿವಿಧ ವ್ಯಕ್ತಿಗಳ ಖಾತೆಗಳಿಗೆ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿ ಕೊಳ್ಳುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ವಿವರವಾದ ತನಿಖೆ ಮುಂದುವರೆದಿದೆ. ಅನೇಕ ಸರ್ಕಾರಿ ನೌಕರರಿಗೆ ಈ ಆರೋಪಿಗಳು ವಂಚಿಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದು, ಈ ರೀತಿ ವಂಚನೆ ಗೊಳಗಾದ ಸರ್ಕಾರಿ ನೌಕರರು, ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡು ವಂತೆ ಎಸಿಬಿ ಮನವಿ ಮಾಡಿದೆ. ಅಲ್ಲದೇ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಹೆದರಿಸಿ ಹಣ ಕೇಳಿ ದೂರವಾಣ ಕರೆಗಳು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ಹಾಗೂ ಎಸಿಬಿ ಅಧಿಕಾರಿಗಳ ಗಮನಕ್ಕೆ ತರುವಂತೆ ಎಸಿಬಿ ಪ್ರಕಟಣೆ ಕೋರಿದೆ.

Translate »