ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ೮೦ನೇ ಜನ್ಮದಿನ ವಿಜೃಂಭಣೆ ಆಚರಣೆ
ಮೈಸೂರು

ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ೮೦ನೇ ಜನ್ಮದಿನ ವಿಜೃಂಭಣೆ ಆಚರಣೆ

May 27, 2022

ಕಿರಿಯ ಶ್ರೀಗಳಾದ ಶ್ರೀದತ್ತ ವಿಜಯಾನಂದ ತೀರ್ಥರಿಂದ ಪ್ರತ್ಯಕ್ಷ ಪಾದಪೂಜೆ
ಮೈಸೂರು,ಮೇ ೨೬(ಪಿಎಂ)- ದೇಶ-ವಿದೇಶಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು, ನಾನಾ ಗಣ್ಯರ ನಡುವೆ ಮೈಸೂರಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ೮೦ನೇ ಜನ್ಮದಿನಾ ಚರಣೆ ಗುರುವಾರ ವಿಜೃಂಭಣೆಯಿAದ ನೆರವೇರಿತು.

ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಆಶ್ರಮದ ನಾದ ಮಂಟಪದಲ್ಲಿ ಹಮ್ಮಿಕೊಂಡಿದ್ದ ದತ್ತಪೀಠದ ಸಂಸ್ಥಾ ಪಕರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಜನ್ಮದಿನೋತ್ಸವದಲ್ಲಿ ಶ್ರೀಗಳ ಪ್ರತ್ಯಕ್ಷ ಪಾದಪೂಜೆ ಸೇರಿ ದಂತೆ ವಿವಿಧ ಪೂಜಾ ಕೈಂಕರ್ಯಗಳು ಅಪಾರ ಭಕ್ತ ಸಮೂಹದ ನಡುವೆ ವೈಭವದಿಂದ ಜರುಗಿತು.
ಸ್ವಾಮೀಜಿಯವರಿಗೆ ಆಶ್ರಮದ ಕಿರಿಯ ಶ್ರೀಗಳಾದ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಪಾದಪೂಜೆ ನೆರವೇರಿಸಿದರು. ಭಕ್ತ ಸಮೂಹದ ಭಕ್ತಿಯ ಜೈಕಾರ ದೊಂದಿಗೆ ಸ್ವಾಮೀಜಿಯವರು ಪಾದಪೂಜೆಯನ್ನು ಸ್ವೀಕರಿಸಿದರು. ದತ್ತಾತ್ರೇಯರಿಗೆ ಪ್ರಿಯವಾದ ಔದುಂಬರ ವೃಕ್ಷದಿಂದ ಸಿದ್ಧಪಡಿಸಿರುವ ಸಿಂಹಾಸನದಲ್ಲಿ ಆಸೀನ ರಾಗಿದ್ದ ಸ್ವಾಮೀಜಿಯವರ ಪಾದಗಳಿಗೆ ಆಶ್ರಮದ ವಿಧಿ ವಿಧಾನಗಳಂತೆ ಕಿರಿಯ ಶ್ರೀಗಳು
ಪೂಜೆ ಕೈಂಕರ್ಯ ನೆರವೇರಿಸಿದರು. ಚಿನ್ನ, ವಜ್ರ, ವೈಡೂರ್ಯ, ಮುತ್ತು, ರತ್ನ, ಸ್ವರ್ಣ ಅರ್ಪಣೆ, ವಿವಿಧ ಬಗೆಯ ಪುಷ್ಪಗಳಿಂದ ಕಿರಿಯ ಶ್ರೀಗಳು ಅತ್ಯಂತ ಭಕ್ತಿಭಾವದಿಂದ ಪಾದಪೂಜೆ ನೆರವೇರಿಸಿದರು. ಅಲ್ಲದೆ, ಸ್ವಾಮೀಜಿಯವರಿಗೆ ಮಹಾಮಂಗಳಾರತಿ ನೆರವೇರಿಸಿ, ವಂದಿಸಿದರು. ಸಿಂಹಾಸನದಲ್ಲಿ ಆಸೀನರಾಗಿದ್ದ ಸ್ವಾಮೀಜಿಯವರು, ಚಿನ್ನಾಭರಣಗಳನ್ನು ತೊಟ್ಟು, ಅವಧೂತ ದತ್ತಪೀಠದ ವಜ್ರದ ಕಿರೀಟ ಧಾರಣೆ ಮೂಲಕ ಭಕ್ತರಿಗೆ ದರ್ಶನ ನೀಡುತ್ತಿದ್ದಂತೆ ಕರತಾಳ ಹಾಗೂ ಜೈಕಾರದೊಂದಿಗೆ ಭಕ್ತಾದಿಗಳು ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದರು. ಇದೇ ವೇಳೆ ಶ್ರೀ ಚಾಮುಂಡೇಶ್ವರಿ ದೇವಿ, ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ, ದುರ್ಗಾದೇವಿ ಸೇರಿದಂತೆ ವಿವಿಧ ದೇವಾಲಯಗಳಿಂದ ತಂದ ತೀರ್ಥವನ್ನು ಸ್ವಾಮೀಜಿಯವರಿಗೆ ನೀಡಲಾಯಿತು. ಅಲ್ಲದೆ, ಭಕ್ತರು ಶ್ರೀಗಳಿಗೆ ನಾನಾ ರೀತಿಯ ಆಭರಣಗಳನ್ನು ಕೊಡುಗೆಯಾಗಿ ಸಮರ್ಪಿಸಿದರು.

ಗ್ರಂಥ ಬಿಡುಗಡೆ: `ಗೀತಾ ಸ್ವರಪ್ರಸ್ಥಾರ’ (ಭಗವದ್ಗೀತೆಗೆ ಸ್ವಾಮೀಜಿಯವರ ಸವಿಸ್ತಾರ ವ್ಯಾಖ್ಯಾನ), `ಶ್ರೀಮದ್ಭಗವದ್ಗೀತ’ (ಭಗವದ್ಗೀತೆಗೆ ಸ್ವಾಮೀಜಿಯವರ ಸರಳಾನುವಾದ) ಶೀರ್ಷಿಕೆಯ ಮೂರು ಗ್ರಂಥಗಳನ್ನು (ತೆಲುಗು ಭಾಷೆ) ಇದೇ ವೇಳೆ ಶ್ರೀಗಳು ಬಿಡುಗಡೆ ಮಾಡಿದರು. ಎರಡು ಸಾವಿರ ಪುಟಗಳಲ್ಲಿ ಮೂರು ಸಂಪುಟಗಳಾಗಿ ಈ ಗ್ರಂಥಗಳನ್ನು ಹೊರತರಲಾಗಿದೆ. ಶ್ರೀಗಳು ವಜ್ರ ಕಿರೀಟ ಧಾರಣೆ ಮೂಲಕ ಭಕ್ತರಿಗೆ ದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ನಟ ದರ್ಶನ್ ಶ್ರೀಗಳಿಗೆ ಗೌರವ ಸಮರ್ಪಿಸಿ, ಆಶೀರ್ವಾದ ಪಡೆದರು.

ಬೃಹತ್ ಕೇಕ್: ಶ್ರೀಗಳ ಜನ್ಮದಿನದ ಪ್ರಯುಕ್ತ ಭಕ್ತರ ಕೋರಿಕೆಯಂತೆ ಬೃಹತ್ ಕೇಕ್ ಕತ್ತರಿಸಿದ ಸ್ವಾಮೀಜಿಯವರು, ಭಕ್ತರಿಗೆ ದರ್ಶನ ಕರುಣ ಸಿದರು. ವಿಶೇಷ ವಿನ್ಯಾಸದ ಪೇಟೆ ಧರಿಸಿದ ಶ್ರೀಗಳು, `ಹ್ಯಾಪಿ ಬರ್ತ್ ಡೇ ಅಪ್ಪಾಜಿ’ ಎಂದು ಆಂಗ್ಲ ಭಾಷೆಯಲ್ಲಿ ಬರೆದಿದ್ದ ಬೃಹತ್ ಕೇಕ್ ಕತ್ತರಿಸಿದರು. ಈ ವೇಳೆ `ಹ್ಯಾಪಿ ಬರ್ತ್ ಡೇ ಟು ಯು ಅಪ್ಪಾಜಿ’ ಎಂಬ ನಾದ ಸಂಗೀತವೂ ಮಂಗಳ ವಾದ್ಯಗಳಿಂದ ಮೊಳಗಿತು. ಜೊತೆಗೆ ಭಕ್ತರು ಹಷೋದ್ಘಾರ ಮುಗಿಲು ಮುಟ್ಟಿತು. ವಿವಿಧ ಕ್ಷೇತ್ರದ ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತ ಸಮೂಹದ ನಡುವೆ ಶ್ರೀಗಳ ಜನ್ಮದಿನ ಅತ್ಯಂತ ಸಂಭ್ರಮ-ಸಡಗರದಿAದ ಜರುಗಿತು. ಮಾಜಿ ಮೇಯರ್ ಸಂದೇಶ್‌ಸ್ವಾಮಿ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಸೇರಿದಂತೆ ಮತ್ತಿತರರ ಪ್ರಮುಖರು ಹಾಜರಿದ್ದರು.

Translate »