ಗೌಡರೇ, ತೃತೀಯ ರಂಗದ ನೇತೃತ್ವ ವಹಿಸಿ…
ಮೈಸೂರು

ಗೌಡರೇ, ತೃತೀಯ ರಂಗದ ನೇತೃತ್ವ ವಹಿಸಿ…

May 27, 2022

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಭೇಟಿಯಾದ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಮನವಿ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಭೇಟಿ ಮಾಡಿ, ಚರ್ಚಿಸಿದರು. ಚಿತ್ರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಇದ್ದಾರೆ.

ಬೆಂಗಳೂರು,ಮೇ ೨೬ (ಕೆಎಂಶಿ)-ಬಿಜೆಪಿ, ಕಾಂಗ್ರೆಸ್‌ಗೆ ಪರ್ಯಾಯವಾಗಿ ತೃತೀಯ ರಂಗ ಸ್ಥಾಪಿಸಿ, ಅದರ ನಾಯಕತ್ವ ವಹಿಸಿಕೊಳ್ಳುವಂತೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಮನವಿ ಮಾಡಿದ್ದಾರೆ.

ದೇವೇಗೌಡರನ್ನು ಗುರುವಾರ ಅವರ ನಿವಾಸದಲ್ಲಿ ಭೇಟಿ ಮಾಡಿ, ಸುಮಾರು ೨ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿ, ಪರ್ಯಾಯ ರಂಗ ರಚಿಸಲು ತಮ್ಮ ಬೆಂಬಲ ಬೇಕು ಎಂದು ಮನವಿ ಮಾಡಿಕೊಂಡರು. ರಾಷ್ಟçದಲ್ಲಿ ಪ್ರಾದೇಶಿಕ ಪಕ್ಷಗಳೇ ಬಹು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣ ಹಿಡಿದಿವೆ. ಈ ಪ್ರಾದೇಶಿಕ ಪಕ್ಷಗಳು ಒಂದೇ ಸೂರಿನಡಿ ಸೇರಿ ಈ ರಾಷ್ಟಿçÃಯ ಪಕ್ಷಗಳ ಜೊತೆ ಹೋರಾಟ ನಡೆಸಬೇಕು. ಇತ್ತೀಚಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸುವಹುನ್ನಾರ ನಡೆದಿದೆ. ನಾವು ಒಂದಾಗದಿದ್ದರೆ, ಮುಂದೆ ನಮಗೆ ತೊಂದರೆ. ಯಾವುದೇ ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡದೇ, ನಮ್ಮನ್ನು ನಾವು ಭದ್ರ ಮಾಡಿಕೊಳ್ಳಲು ತೃತೀಯ ರಂಗದ ಅವಶ್ಯಕತೆ ಇದೆ. ಈ ಹಿಂದೆ ಕಾಂಗ್ರೆಸ್, ಬಿಜೆಪಿ ಪಕ್ಷಗಳ ವಿರುದ್ಧ ಇತರ ಪಕ್ಷಗಳನ್ನು ಒಗ್ಗೂಡಿಸಿ, ಆಡಳಿತ ನಡೆಸಿದ ಅನುಭವ ನಿಮ ಗಿದೆ. ನೀವು ಮತ್ತೆ ತೃತೀಯ ರಂಗಕ್ಕೆ ಚಾಲನೆ ನೀಡಬೇಕು. ಈಗಾಗಲೇ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ಡಿಎಂಕೆ, ತೃಣಮೂಲ, ಎಎಪಿ ಅಲ್ಲದೆ, ಸಮಾಜವಾದಿ ಪಕ್ಷ, ಎಡಪಂಥೀಯ ಪಕ್ಷಗಳ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದೇನೆ. ಅವರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನೀವು ನಾಯಕತ್ವ ವಹಿಸಿಕೊಂಡು ತೃತೀಯ ರಂಗಕ್ಕೆ ಚಾಲನೆ ನೀಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಂದೇ ಸೂರಿನಡಿ ನಾವೆಲ್ಲ ಸ್ಪರ್ಧಿಸೋಣ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಗೌಡರು ನೀವು ನಡೆಸುತ್ತಿರುವ ಸಂಘಟನೆಗೆ ನನ್ನ ಬೆಂಬಲವಿದೆ. ಎಲ್ಲರನ್ನೂ ಒಗ್ಗೂಡಿಸಿ, ಮುಂದಿನ ದಿನಗಳಲ್ಲಿ ಒಂದೆಡೆ ಸೇರಿ, ಚರ್ಚೆ ಮಾಡೋಣ ಎಂದಿದ್ದಾರೆ. ಮಾತುಕತೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉಪಸ್ಥಿತರಿದ್ದರು.

 

ನಮಗೆ ಉಜ್ವಲ್ ಹಿಂದೂಸ್ತಾನ್ ಬೇಕಿದೆ ಕೇಂದ್ರದ ಕಾರ್ಯ ವೈಖರಿಗೆ ಕೆಸಿಆರ್ ಕಿಡಿ
ಬೆಂಗಳೂರು, ಮೇ ೨೬- ಉಜ್ವಲ್ ಹಿಂದೂಸ್ತಾನ್ ನಮಗೆ ಬೇಕಿದೆ. ಜನರು ಈ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ (ಕೆಸಿಆರ್) ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಕುಟುಕಿದ್ದಾರೆ.

ದೇವೇಗೌಡರ ಜೊತೆ ರಾಜಕೀಯ ವಿದ್ಯಮಾನಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಯುವಶಕ್ತಿ ಇದ್ದರೂ, ದೇಶದಲ್ಲಿಹಲವು ಸಂಪನ್ಮೂಲಗಳಿದ್ದರೂ ಇವತ್ತಿಗೂ ಹಲವು ಸಮಸ್ಯೆ ಬಗ್ಗೆ ಚರ್ಚೆಯಾಗಿಲ್ಲ. ದೇಶದಲ್ಲಿ ರೈತರು, ದಲಿತರು, ಆದಿವಾಸಿಗಳು ಕಷ್ಟದಲ್ಲಿದ್ದಾರೆ. ಭರವಸೆಗಳನ್ನು ಸಾಕಷ್ಟು ಕೊಡಬಹುದು. ಆದರೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ. ಯುವಕರಿಗೆ ಉದ್ಯೋಗ ಕೊಟ್ರಾ?. ದೇಶದಲ್ಲಿ ಎಲ್ಲವೂ ಸಮಸ್ಯೆಗಳೇ ಎಂದು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ ಅತೀ ಶೀಘ್ರದಲ್ಲೇ ಬದಲಾವಣೆ ಯಾಗಲಿದೆ. ಎರಡು, ಮೂರು ತಿಂಗಳು ಕಾಯಿರಿ ಎಂದರು. ಕರ್ನಾಟಕದ ರಾಜಕೀಯ ಕೂಡ ಗೊತ್ತಿದೆ. ಕರ್ನಾಟಕದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಬರುತ್ತಿದೆ. ಕುಮಾರಸ್ಚಾಮಿ ಸಿಎಂ ಆಗಿದ್ದವರು. ಭಾರತ ಬದಲಿಸುವ ಕೆಲಸ ಆಗಲಿದೆ. ಆ ನಿಟ್ಟಿನಲ್ಲಿ ನಾವು ಪ್ರಯತ್ಮ ನಡೆಸುತ್ತಿದ್ದೇವೆ ಎಂದರು. ದೇಶದ ಸರ್ಕಾರ, ಸಮಸ್ಯೆಗಳ ಬಗ್ಗೆ ದೇವೇಗೌಡರ ಜೊತೆ ಸುದೀರ್ಘ ಚರ್ಚೆ ಮಾಡಿದ್ದೇವೆ. ದೇಶದಲ್ಲಿ ಬದಲಾವಣೆ ತರಬೇಕಿದೆ ಎಂದರು.

Translate »