ಡಿ.ಕೆ.ಶಿವಕುಮಾರ್ ಹೆಸರಲ್ಲಿ ವಂಚನೆ ಪೂರ್ಣಿಮಾ ಸವದತ್ತಿ ಉಚ್ಚಾಟನೆ
ಮೈಸೂರು

ಡಿ.ಕೆ.ಶಿವಕುಮಾರ್ ಹೆಸರಲ್ಲಿ ವಂಚನೆ ಪೂರ್ಣಿಮಾ ಸವದತ್ತಿ ಉಚ್ಚಾಟನೆ

March 1, 2021

ಹುಬ್ಬಳ್ಳಿ,ಫೆ.28-ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಅವರನ್ನು ಪಕ್ಷದಿಂದ ಉಚ್ಚಾ ಟನೆ ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ಅವರ ಕಪ್ಪು ಹಣದಿಂದ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತೇನೆ ಎಂದು ಜನರನ್ನು ನಂಬಿಸಿ ಅವರಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದ ಪೂರ್ಣಿಮಾ ಬಳಿಕ ಪರಾರಿಯಾಗಿದ್ದರು. ತನಗೆ ಹತ್ತು ಸಾವಿರ ರೂ. ನೀಡಿದರೆ ಸಾಲ ನೀಡುವೆ ಎಂದು ನಂಬಿಸಿ ವಂಚಿಸುತ್ತಿದ್ದ ಪೂರ್ಣಿಮಾ ವಿರುದ್ಧ ಹಲವರು ಪೆÇಲೀಸರಿಗೆ ದೂರು ಸಲ್ಲಿಸಿದ್ದರು. ಪೂರ್ಣಿಮಾ ಸವದತ್ತಿ ಕೇವಲ ಡಿಕೆಶಿ ಹೆಸರು ಮಾತ್ರವೇ ಅಲ್ಲದೆ ಶಾಸಕರಾದ ಪ್ರಕಾಶ್ ಅಬ್ಬಯ್ಯ ಹೆಸರು ಬಳಸಿ ಸಹ ವಂಚಿಸಿದ್ದರು ಎನ್ನಲಾಗಿದ್ದು “ನಾನು ಕೆಪಿಸಿಸಿ ಕಚೇರಿಯಿಂದ ಕರೆ ಮಾಡಿದ್ದೇನೆ, ನನಗೆ ಹತ್ತು ಸಾವಿರ ನೀಡಿದರೆ ಡಿಕೆಶಿ ಅವರ ಕಪ್ಪು ಹಣದಿಂದ ನಿಮಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತೇನೆ” ಎಂದು ಪೂರ್ಣಿಮಾ ಸವದತ್ತಿ ಜನರಿಗೆ ನಂಬಿಸುತ್ತಿದ್ದರು ಎಂದು ತಿಳಿದುಬಂದಿದೆ.

Translate »