ನಾಳೆ ಉಚಿತ ರಕ್ತದಾನ ಶಿಬಿರ, ವಿಷ್ಣು ಸೇವಾ ಪ್ರಶಸ್ತಿ ಪ್ರದಾನ
ಮೈಸೂರು

ನಾಳೆ ಉಚಿತ ರಕ್ತದಾನ ಶಿಬಿರ, ವಿಷ್ಣು ಸೇವಾ ಪ್ರಶಸ್ತಿ ಪ್ರದಾನ

September 17, 2021

ಮೈಸೂರು ಸೆ.16(ಆರ್‍ಕೆಬಿ)- ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದ ಅಂಗವಾಗಿ ಅಗ್ರಹಾರದ ಡಾ.ವಿಷ್ಣು ಸೇನಾ ಸಮಿತಿ (ವಿಷ್ಣುವರ್ಧನ್ ಅಭಿ ಮಾನಿಗಳ ಸಂಘ)ಯಿಂದ ಸೆ.18ರಂದು ರಕ್ತದಾನ, ಕೇಕ್ ಕತ್ತರಿಸುವುದು, ಹಿರಿಯ ವಿಷ್ಣು ಅಭಿಮಾನಿಗಳಿಗೆ ಸೇವಾ ಪ್ರಶಸ್ತಿ ಪ್ರದಾನ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ ತಿಳಿಸಿದರು
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಎದುರಿನ ಡಾ.ವಿಷ್ಣುವರ್ಧನ್ ಉದ್ಯಾನದಲ್ಲಿ ಸೇಂಟ್ ಜೋಸೆಫ್ ಆಸ್ಪತ್ರೆಯ ಸಹಯೋಗದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ ಯವರೆಗೆ ರಕ್ತದಾನ ಶಿಬಿರ ಆಯೋಜಿ ಸಿದ್ದು, ವಿಷ್ಣು ಅಭಿಮಾನಿಗಳು, ಸಾರ್ವ ಜನಿಕರು ಸ್ವಯಂ ಇಚ್ಛೆಯಿಂದ ರಕ್ತದಾನ ಮಾಡುವ ಮೂಲಕ ಕೋವಿಡ್-19 ಸಂದರ್ಭದಲ್ಲಿ ಉಂಟಾಗಿರುವ ರಕ್ತದ ಕೊರತೆ ನೀಗಿಸಲು ನೆರವಾಗುವಂತೆ ಮನವಿ ಮಾಡಿದರು.

ಅದೇ ದಿನ ಉದ್ಯಾನವನದಲ್ಲಿ ಕೇಕ್ ಕಟ್ ಮಾಡುವ ಮೂಲಕ ಸಿಹಿ ವಿತರಿಸಿ, ವಿಷ್ಣುವರ್ಧನ್ ಜನ್ಮದಿನ ಆಚರಿಸಲಾಗು ವುದು. ಮೈಸೂರಿನ ಅಗ್ರಹಾರದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸ ಲಾಗುವುದು ಎಂದರು.

ಅಂದು ಬೆಳಗ್ಗೆ 11 ಗಂಟೆಗೆ ವಿಷ್ಣು ವರ್ಧನ ಉದ್ಯಾನವನದಲ್ಲಿ ವಿಷ್ಣು ವರ್ಧನ್ ಹಿರಿಯ ಅಭಿಮಾನಿಗಳಾದ ಚಾಮರಾಜನಗರದ ಇಂದೂಶೇಖರ್, ಎಚ್.ಡಿ.ಕೋಟೆ ಮಾದಾಪುರದ ಸಿದ್ದ ರಾಜು, ತಿ.ನರಸೀಪುರದ ಶಿವು, ಮಂಡ್ಯ ಹೊಸಳ್ಳಿಯ ರಾಮಕೃಷ್ಣ, ಬನ್ನೂರಿನ ಮಹೇಂದ್ರ ಸಿಂಗ್ ಕಾಳಪ್ಪ, ದೂರ ಸೋಮಶೇಖರ್, ಬೆಳಗೊಳ ಬಿ.ಪಿ. ಪ್ರಕಾಶ್, ಎಚ್.ಡಿ.ಕೋಟೆಯ ಸಮೀ ವುಲ್ಲಾ, ಮೈಸೂರಿನ ಮುಬಾರಕ್, ಸಿದ್ದಪ್ಪ ಚಿನ್ನಬೆಳ್ಳಿ ಅವರಿಗೆ ಡಾ.ವಿಷ್ಣುವರ್ಧನ್ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗು ವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೆಂಟ್ ಜೋಸೆಫ್ ಆಸ್ಪತ್ರೆಯ ಡಾ.ರಜನಿ, ಮುಖಂಡರಾದ ವಿಕ್ರಂ ಅಯ್ಯಂಗಾರ್, ನವೀನ್ ಕೆಂಪಿ, ಹರೀಶ್ ಇತರರು ಉಪಸ್ಥಿತರಿದ್ದರು.

Translate »