ರೈಲ್ವೆ ಮೈಸೂರು ವಿಭಾಗದ `ಸ್ವಚ್ಛತಾ ಪಾಕ್ಷಿಕ’ಕ್ಕೆ ಚಾಲನೆ
ಮೈಸೂರು

ರೈಲ್ವೆ ಮೈಸೂರು ವಿಭಾಗದ `ಸ್ವಚ್ಛತಾ ಪಾಕ್ಷಿಕ’ಕ್ಕೆ ಚಾಲನೆ

September 17, 2021

ಮೈಸೂರು, ಸೆ.16(ಆರ್‍ಕೆಬಿ)- ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಇಂದು 15 ದಿನಗಳ ಸ್ವಚ್ಛತಾ ಪಖ್ವಾಡ (ಪಾಕ್ಷಿಕ) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮೈಸೂರಿನ ವಿಭಾಗೀಯ ಕಚೇರಿ ಆವರಣದ ಆಂಪಿ ಥಿಯೇಟರ್‍ನಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಅಧಿಕಾರಿ, ಸಿಬ್ಬಂದಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು. ಪಾಕ್ಷಿಕ ಆಚರಣೆ ವೇಳೆ ಅತ್ಯಂತ ಯಶಸ್ವಿಯಾಗಿ ಅಭಿಯಾನ ಕೈಗೊಳ್ಳುವಂತೆ ಸಲಹೆ ನೀಡಿದರು.

ಸೆ.30ರವರೆಗೆ ನಡೆಯುವ ಸ್ವಚ್ಛತಾ ಪಾಕ್ಷಿಕ ಸಂದರ್ಭದಲ್ಲಿ ರೈಲ್ವೆ ನಿಲ್ದಾಣ ಗಳು, ರೈಲ್ವೆ ಕಾಲೋನಿ, ರೈಲುಗಳಲ್ಲಿ ಸ್ವಚ್ಛತೆಯ ಮೇಲೆ ವಿಶೇಷ ಗಮನ ಕೇಂದ್ರೀಕರಿಸಲಾಗುವುದು. ಈ ಸಂದರ್ಭ ದಲ್ಲಿ ರೈಲು ಬಳಕೆದಾರರೊಂದಿಗೆ ಸ್ವಚ್ಛತೆ ಕುರಿತ ಸಂವಾದ, ಸ್ವಚ್ಛ ಕಾರ್ಯಾ ಗಾರ, ಸ್ವಚ್ಛ ಆಹಾರ, ನೀರು, ಶೌಚಾ ಲಯಗಳು ಹಾಗೂ ಅಂತರ ವಿಭಾಗದ ಸ್ಪರ್ಧೆಗಳು ಇತ್ಯಾದಿ ಸ್ವಚ್ಛತಾ ವಿಚಾರಗಳನ್ನು ಆಯ್ಕೆ ಮಾಡಲಾಗಿದೆ. ಕೋವಿಡ್ ಮಾರ್ಗಸೂಚಿಗಳ ಪಾಲನೆಯೊಂದಿಗೆ ಚಟುವಟಿಕೆ ಕೈಗೊಳ್ಳಲಾಗುವುದು. ನಿಲ್ದಾಣಗಳು ಹಾಗೂ ರೈಲುಗಳಲ್ಲಿ ಶುಚಿತ್ವವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಪ್ರಯಾಣಿಕರಿಂದ ಪ್ರತಿಕ್ರಿಯೆ ಪಡೆದು ಪರಿಶೀಲಿಸಿ, ಅಗತ್ಯವಿದ್ದೆಡೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳನ್ನು ಬಳಸಿಕೊಂಡು ಜಾಗೃತಿ ಅಭಿಯಾನ, ‘ಸ್ಕೌಟ್ಸ್ ಮತ್ತು ಗೈಡ್ಸ್’ ನಿಂದ ಬೀದಿ ನಾಟಕ, ಪ್ರಯಾಣಿಕರನ್ನು ಪ್ರೇರೇಪಿಸಲು ಮತ್ತು ಒಳಗೊಳ್ಳುವಂತೆ ಮಾಡಲು ಆಡಿಯೋ, ವೀಡಿಯೋ ತುಣುಕುಗಳು ಮತ್ತು ಪ್ರಯಾಣಿ ಕರು ಮತ್ತು ಇತರರ ಪಾಲ್ಗೊಳ್ಳುವಿಕೆ ಇತ್ಯಾದಿ ಇರಲಿದೆ ಎಂದರು. ಈ ಸಂದರ್ಭದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ.ದೇವಸಗಾಯಂ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಮಂಜುನಾಥ ಕನಮಡಿ ಇತರರು ಉಪಸ್ಥಿತರಿದ್ದರು.

Translate »