ಆಯುರ್ವೇದ ಸಮರ್ಥ ಬಳಕೆಯಿಂದ ರೋಗ-ರುಜಿನದಿಂದ ಮುಕ್ತ
ಮೈಸೂರು

ಆಯುರ್ವೇದ ಸಮರ್ಥ ಬಳಕೆಯಿಂದ ರೋಗ-ರುಜಿನದಿಂದ ಮುಕ್ತ

January 19, 2021
  • ಆಯುಷ್ ಸೇವಾ ಗ್ರಾಮ ಯೋಜನೆಯಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಅಭಿಮತ
  • ಜಯಪುರ ಹೋಬಳಿಯ ಸೋಲಿಗರ ಕಾಲೋನಿಯಲ್ಲಿ ಆಯುರ್ವೇದ ಅರಿವು ಕಾರ್ಯಕ್ರಮ

ಮೈಸೂರು,ಜ.18(ಪಿಎಂ)- ಆಯು ರ್ವೇದದ ಸಮರ್ಥ ಬಳಕೆಯಿಂದ ಕೊರೊನಾ ರೀತಿಯ ಸಾಂಕ್ರಾಮಿಕ ರೋಗ ಸೇರಿದಂತೆ ಅನೇಕ ರೋಗ-ರುಜಿನಗಳಿಂದ ಮುಕ್ತರಾಗಬಹುದು ಎಂದು ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

2020-21ನೇ ಸಾಲಿನ ಟಿಎಸ್‍ಪಿ ಹಾಗೂ ಆಯುಷ್ ಸೇವಾ ಗ್ರಾಮ ಯೋಜನೆ ಯಡಿ ಆಯುಷ್ ಇಲಾಖೆ ದತ್ತು ಪಡೆದಿ ರುವ ಚಾಮುಂಡೇಶ್ವರಿ ಕ್ಷೇತ್ರ ಜಯಪುರ ಹೋಬಳಿಯ ಸೋಲಿಗರ ಕಾಲೋನಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಯುರ್ವೇದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪುರಾತನ ಕಾಲದ ಆಯು ರ್ವೇದವು ನಮ್ಮ ಆರೋಗ್ಯ ರಕ್ಷಣೆಗೆ ಸಹ ಕಾರಿ. ಆಯುರ್ವೇದದ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಮಟ್ಟದಲ್ಲಿ ಈ ರೀತಿ ಯೋಜನೆಗಳ ಮೂಲಕ ಅರಿವು ಮೂಡಿಸುತ್ತಿರುವುದು ಅತ್ಯಂತ ಶ್ಲಾಘನೀಯ. ರೋಗ ಮುಕ್ತ ಗ್ರಾಮ ವನ್ನಾಗಿ ಮಾಡಲು ಅಧಿಕಾರಿಗಳೊಡನೆ ಗ್ರಾಮಸ್ಥರ ಸಹಕಾರ ಅತ್ಯಂತ ಅವಶ್ಯ. ಹೀಗಾಗಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು. ಇದೇ ವೇಳೆ ಗ್ರಾಮ ಸ್ಥರಿಗೆ ಆರೋಗ್ಯಕರ ಆಹಾರ ಪದ್ಧತಿ ಬಗ್ಗೆ ಮಾಹಿತಿ ನೀಡಲಾಯಿತು. ಜೊತೆಗೆ ಗ್ರಾಮಸ್ಥರಿಗೆ ಔಷಧಿಯುಕ್ತವಾದ ಗಿಡಗಳನ್ನು ವಿತರಿಸಿ, ಆಯುಷ್ ಇಲಾಖೆ ನಿರ್ದೇಶಿ ಸಿದ ಎಲ್ಲಾ ಕ್ರಮಗಳನ್ನು ಪಾಲಿಸುವಂತೆ ತಿಳಿಸಿ ಕೊಡಲಾಯಿತು.

ಏನಿದು ಯೋಜನೆ: `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ, ಆಯಷ್ ಸೇವಾ ಗ್ರಾಮ ಯೋಜನೆಯಡಿ ಗ್ರಾಮ ದತ್ತು ಪಡೆದು ಆಯುರ್ವೇದದ ಬಗ್ಗೆ ಅರಿವು ಮೂಡಿಸಲಾಗುವುದು. ನಮ್ಮ ಇಲಾಖೆ ಈ ಯೋಜನೆಯಡಿ ಸೋಲಿಗರ ಕಾಲೋನಿ ದತ್ತು ಪಡೆದಿದೆ. ಸದರಿ ಗ್ರಾಮ ದಲ್ಲಿ 93 ಕುಟುಂಬಗಳಿವೆ. ಈ ಎಲ್ಲಾ ಕುಟುಂಬಗಳ ಆರೋಗ್ಯ ಸೇರಿದಂತೆ ನಾನಾ ಆಯಾಮಗಳಲ್ಲಿ ಸಮೀಕ್ಷೆ ನಡೆಸಲಾಗು ವುದು. ಯೋಗಾಭ್ಯಾಸದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಟಿಎಸ್‍ಪಿಯಡಿ ಸೋಲಿಗರ ಕಾಲೋನಿ ಒಂದೇ ಗ್ರಾಮ ಸದ್ಯ ದತ್ತು ಪಡೆ ದಿರುವುದು. ಎಸ್‍ಸಿಪಿ ಅಡಿ ನಂಜನಗೂಡು ತಾಲೂಕು ದೇಬೂರು ಗ್ರಾಮ ದತ್ತು ಪಡೆಯಲಾಗಿದೆ. ಆಯುರ್ವೇದದ ಮೂಲಕ ಗ್ರಾಮಸ್ಥರ ಆರೋಗ್ಯ ಕಾಯ್ದು ಕೊಳ್ಳುವಂತೆ ಮಾಡುವುದು ಇದರ ಉದ್ದೇಶ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಪ್ರೇಮಕುಮಾರಿ, ಮಹದೇವಸ್ವಾಮಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ, ಮುಖಂಡರಾದ ಉದ್ಬೂರು ಮಹದೇವಸ್ವಾಮಿ, ಮುತಾ ಲಿಬ್, ಗ್ರಾಪಂ ಸದಸ್ಯರಾದ ಮಾವಿನಹಳ್ಳಿ ಸಂದೀಪ್, ಲಕ್ಷ್ಮೀ, ಚಿಕ್ಕಣ್ಣ, ಮೂರ್ತಿ, ಉಪ ತಹಶೀಲ್ದಾರ್ ಕುಬೇರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

 

 

Translate »