ಮೈಸೂರು,ಆ.5(ಆರ್‍ಕೆ)-ತೀವ್ರ ಉಸಿರಾಟದ ತೊಂದರೆ ಯಿಂದ ಬಳಲುತ್ತಿರುವ ಕೊರೊನಾ ಸೋಂಕಿತರಿಗೆ ಉಚಿತ ವಾಗಿ ಆಕ್ಸಿಜನ್ ಸಿಲಿಂಡರ್ ಪೂರೈಸಲು ಯುನೈಟೆಡ್ ವಿಷನ್ ವೆಲ್‍ಫೇರ್ ಅಂಡ್ ಚಾರಿಟಬಲ್ ಟ್ರಸ್ಟ್ ಮುಂದೆ ಬಂದಿದೆ.
ಮೈಸೂರಿನ ಸುಭಾಷ್‍ನಗರದಲ್ಲಿರುವ ಮೆಸ್ಕೋ ಕೈಗಾ ರಿಕಾ ತರಬೇತಿ ಕೇಂದ್ರದ ಆವರಣದಲ್ಲಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿಸ್ಟ್ರಿಕ್ಟ್ ವೆಕ್ಟರ್ ಬಾಂಡ್ ಡಿಸೀಸ್ ಕಂಟ್ರೋಲ್ ಆಫೀಸರ್(ಡಿವಿಬಿಸಿಓ) ಡಾ.ಚಿದಂಬರ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉಚಿತವಾಗಿ ಆಕ್ಸಿಜನ್ ಪೂರೈಸುವ ಸೇವೆಗೆ ಬುಧವಾರ ಬೆಳಿಗ್ಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಅತೀ ಕಡಿಮೆ ಅವಧಿ ಯಲ್ಲಿ ಸುಲಭವಾಗಿ ಹರಡುವ ಕೊರೊನಾ ರೋಗದಿಂದ ದೂರವಿರಲು ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ‘ಜೀವ ಮೊದಲು-ಜೀವನ ಎರಡನೆಯದು’ ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬರೂ ಆದ್ಯತೆ ಮೇರೆಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲೇಬೇಕು ಎಂದರು.
ನೆಗಡಿ, ಕೆಮ್ಮು, ಜ್ವರಗಳಂತಹ ಲಕ್ಷಣ ಕಂಡು ಬಂದಲ್ಲಿ ತಕ್ಷಣ ತಪಾಸಣೆ ಮಾಡಿಸಿಕೊಂಡು ಮಾಸ್ಕ್ ಧರಿಸಿ, ಆಗಿಂದಾಗ್ಗೆ ಕೈಗಳನ್ನು ಸಾಬೂನಿನಿಂದ ತೊಳೆದುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್-19 ಸೋಂಕು ಹರಡದಂತೆ ಎಚ್ಚರ ವಹಿಸಿ ಎಂದೂ ಡಾ.ಚಿದಂಬರ ಸಲಹೆ ನೀಡಿದರು.
ಯುನೈಟೆಡ್ ವಿಷನ್ ವೆಲ್‍ಫೇರ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಕ್ಸಿಜನ್ ಸಿಲಿಂಡರ್‍ಗಳನ್ನು ಪೂರೈಸುವ ಸೇವೆ ಆರಂಭಿಸಿದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಕೊರೊನಾ ಸೋಂಕಿತರು ಕರೆ ಮಾಡಿದರೆ ವೈದ್ಯಕೀಯ ಹಿನ್ನೆಲೆ ತಿಳಿದಿರುವ ಟ್ರಸ್ಟಿನ ನಾಲ್ವರು ಸ್ವಯಂ ಸೇವಕರು ರೋಗಿಗಳಿರುವ ಸ್ಥಳಕ್ಕೆ ತೆರಳಿ ಪಲ್ಸ್ ಆಕ್ಸಿ ಮೀಟರ್ ನಿಂದ ಪರೀಕ್ಷಿಸಿ ಅಗತ್ಯವಿದೆ ಎಂಬುದು ಖಾತರಿಯಾದರೆ ಅಂತಹವರಿಗೆ ಆಕ್ಸಿಜನ್ ಅಳವಡಿಸಿ ಒಂದು ವಾರಗಳ ವರೆಗೆ ಮಾನಿಟರ್ ಮಾಡುವರು ಎಂದು ಟ್ರಸ್ಟಿ ಆರ್.ಎಂ.ಖಾನ್ ಘೋರಿ ತಿಳಿಸಿದರು. ಭದ್ರತಾ ಠೇವಣಿಯಾಗಿ 5 ಸಾವಿರ ರೂ. ಗಳನ್ನು ಮೊದಲು ನೀಡಬೇಕು, ನಂತರ ಅವರಿಗೆ ಪೂರ್ಣ ಹಣವನ್ನು ಮರು ಪಾವತಿಸಲಾಗು ವುದು. ಅಲ್ಲಿಯವರೆಗೆ ಟ್ರಸ್ಟ್‍ನಿಂದ ಉಚಿತ ಆಕ್ಸಿಜನ್ ಸೇವೆ ಒದಗಿಸಲಾಗುವುದು. ಅಗತ್ಯ ಬಿದ್ದವರು ದಿನದ 24 ಗಂಟೆ ಸಕ್ರಿಯವಾಗಿರುವ ಹಾಟ್‍ಲೈನ್ 9448625857, ಇತರ ಮೊಬೈಲ್ ನಂ. 9535831973, 8867243937ಗೂ ಕರೆ ಮಾಡಿ ಸೇವೆ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಅನಿಸ್ ಖಾನ್ ಘೋರಿ ಅವರು ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ಟ್ರಸ್ಟ್‍ನಲ್ಲಿ ಡಾ.ಜಾವಿದ್ ನಯೀಮ್ ಅವರು ಸೇವೆ ಸಲ್ಲಿಸುತ್ತಿ ದ್ದಾರೆ. ಇಂದು ನಡೆದ ಕಾರ್ಯಕ್ರಮದಲ್ಲಿ ಮೊಹಮದ್ ಅಸಾದುಲ್ಲಾ, ಪ್ರೊ.ನೂರ್ ಅಹಮದ್, ಅಹಮದ್ ನದೀಮ್, ಗುಲ್ಮಾರ್ ಪರ್ವಿನ್, ಡಾ.ಬುಶ್ರಾ, ಡಾ.ಶಬೀನಾ, ಸಿದ್ದಿಖ್ ಅಹಮದ್, ಮಾಜಿ ಮೇಯರ್ ಆರಿಫ್ ಹುಸೇನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.