ಕೊರೊನಾ ಸಂಕಷ್ಟ: ಸಂಭ್ರಮದ ಜನ್ಮದಿನ ಕೈಬಿಟ್ಟ ಸಂಸದ ಶ್ರೀನಿವಾಸ ಪ್ರಸಾದ್
ಮೈಸೂರು

ಕೊರೊನಾ ಸಂಕಷ್ಟ: ಸಂಭ್ರಮದ ಜನ್ಮದಿನ ಕೈಬಿಟ್ಟ ಸಂಸದ ಶ್ರೀನಿವಾಸ ಪ್ರಸಾದ್

August 6, 2020

ಮೈಸೂರು, ಆ.5(ಪಿಎಂ)- ಇಡೀ ಜಗತ್ತು ಕೊರೊನಾ ಸಂಕಷ್ಟದಲ್ಲಿ ಸಿಲುಕಿ ರುವ ಹಿನ್ನೆಲೆಯಲ್ಲಿ ಸಂಭ್ರಮದ ಜನ್ಮದಿನ ಆಚರಿಸಿಕೊಳ್ಳದೇ ಇರಲು ಸಂಸದ ವಿ. ಶ್ರೀನಿವಾಸ ಪ್ರಸಾದ್ ನಿರ್ಧರಿಸಿದ್ದಾರೆ. ಈ ಸಂಬಂಧ ಸಮಾನತೆ-ಸ್ವಾಭಿಮಾನ-ಸ್ವಾವ ಲಂಬನೆ ಪ್ರತಿಷ್ಠಾನ ಪತ್ರಿಕಾ ಪ್ರಕಟಣೆ ನೀಡಿದೆ.

ಪ್ರತಿಷ್ಠಾನದ ಸಂಸ್ಥಾಪಕರು, ಮಹಾ ಪೋಷಕರೂ ಆದ ಸಂಸದ ವಿ.ಶ್ರೀನಿ ವಾಸ ಪ್ರಸಾದ್ ಅವರ ಜನ್ಮದಿನವಾದ ಆ.6ರಂದು ಯಾವುದೇ ರೀತಿಯ ಸಭೆ-ಸಮಾರಂಭ ಇರುವುದಿಲ್ಲ. ಜೊತೆಗೆ ಅಂದು ಅವರು ಯಾರನ್ನೂ ಭೇಟಿ ಮಾಡುವುದಿಲ್ಲ. ಇದನ್ನು ಸಂಸದರೇ ಸ್ಪಷ್ಟಪಡಿಸಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮುಳ್ಳೂರು ನಂಜಂಡಸ್ವಾಮಿ ತಿಳಿಸಿದ್ದಾರೆ.

ಹುಟ್ಟುಹಬ್ಬದ ಅಂಗವಾಗಿ ಪ್ರತಿಷ್ಠಾನ ದಿಂದ ವಿವಿಧ ಕಾರ್ಯಕ್ರಮ ಆಯೋಜಿ ಸುವ ಬಗ್ಗೆ ವಿ.ಶ್ರೀನಿವಾಸ ಪ್ರಸಾದ್ ಅವರ ಸಲಹೆ ಕೋರಿದಾಗ, `ಕೊರೊನಾ ಸೋಂಕಿ ನಿಂದ ಜಗತ್ತಿನಾದ್ಯಂತ ಜನತೆ ಸಂಕಷ್ಟಕ್ಕೆ ಸಿಲುಕಿ, ಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿ ಯಲ್ಲಿ ಅದ್ಧೂರಿ, ಆಡಂಬರದ ಜನ್ಮದಿನೋ ತ್ಸವ ಆಚರಿಸಿಕೊಳ್ಳಲು ನನ್ನ ಆತ್ಮಸಾಕ್ಷಿ ಒಪ್ಪು ವುದಿಲ್ಲ. ಅಲ್ಲದೇ ಅಂದು ಯಾರನ್ನೂ ಭೇಟಿ ಮಾಡುವುದಿಲ್ಲ’ ಎಂದೂ ತಿಳಿಸಿದ್ದಾರೆ.

ಹೀಗಾಗಿ ಪ್ರಸಾದ್ ಅವರ ಹಿತೈಷಿಗಳು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಶುಭಾಶಯ ಕೋರಲು ಭೇಟಿ ಮಾಡುವ ಪ್ರಯತ್ನ ಮಾಡಬಾರದು. ಯಾವುದೇ ಫ್ಲೆಕ್ಸ್, ಬ್ಯಾನರ್ ಹಾಕಬಾರದು ಎಂದು ಮುಳ್ಳೂರು ನಂಜುಂಡಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »