ಜನರಿದ್ದಲ್ಲಿಗೇ ತೆರಳಿ ಪರೀಕ್ಷೆ ನಡೆಸುತ್ತಿರುವ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟಿಂಗ್ ತಂಡಗಳು
ಮೈಸೂರು

ಜನರಿದ್ದಲ್ಲಿಗೇ ತೆರಳಿ ಪರೀಕ್ಷೆ ನಡೆಸುತ್ತಿರುವ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟಿಂಗ್ ತಂಡಗಳು

August 6, 2020

ಮೈಸೂರು, ಆ.5(ಪಿಎಂ)- ಕೊರೊನಾ ನಿಗ್ರಹ ಕ್ಕಾಗಿ ಮೈಸೂರು ಜಿಲ್ಲೆಯಲ್ಲಿ ಸಂಚಾರಿ ರ್ಯಾಪಿಡ್ ಆ್ಯಂಟಿ ಜೆನ್ ಟೆಸ್ಟಿಂಗ್(ಆರ್‍ಎಟಿ) ತಂಡಗಳು ಕಾರ್ಯ ನಿರ್ವ ಹಿಸುತ್ತಿದ್ದು, ಹೆಚ್ಚು ಸೋಂಕಿತರು ಪತ್ತೆಯಾಗುತ್ತಿರುವ ಪ್ರದೇಶಗಳಿಗೇ ತೆರಳಿ ಸ್ಥಳದಲ್ಲೇ ಟೆಸ್ಟಿಂಗ್ ನಡೆಸುತ್ತಿವೆ.

ಮೈಸೂರು ನಗರದಲ್ಲಿ 8 ಹಾಗೂ ಪ್ರತಿ ತಾಲೂಕಿ ನಲ್ಲಿ ಕನಿಷ್ಠ 10 ತಂಡಗಳಂತೆ ಆರ್‍ಎಟಿ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ರ್ಯಾಪಿಡ್ ಟೆಸ್ಟಿಂಗ್ ಮಾಡಲಾಗುತ್ತಿದೆ. ರೋಗ ಲಕ್ಷಣಗಳಿದ್ದ ಕಾರಣಕ್ಕೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‍ನಲ್ಲಿ ಮೂಗಿನ ದ್ರವದ ಪರೀಕ್ಷೆ ನಡೆಸಿದಾಗ ನೆಗೆಟಿವ್ ಫಲಿತಾಂಶ ಬಂದರೆ, ಬಳಿಕ ಆರ್‍ಟಿ-ಪಿಸಿಆರ್ ಅಂದರೆ, ಶಂಕಿತರ ಮೂಗು ಮತ್ತು ಗಂಟಲು ದ್ರವ ತೆಗೆದು ಪರೀಕ್ಷೆ ಮಾಡಲಾಗುವುದು.

ಕೆಆರ್ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆ (ಕೋವಿಡ್ ಆಸ್ಪತ್ರೆ) ಹೊರತಾಗಿ ಯಾವುದೇ ಸ್ಥಳದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆ ಸ್ಥಿರವಾಗಿ ನಡೆಯುತ್ತಿಲ್ಲ. ಪರಿ ಸ್ಥಿತಿಗೆ ಅನುಗುಣವಾಗಿ ರ್ಯಾಪಿಡ್ ಟೆಸ್ಟಿಂಗ್ ತಂಡ ಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಮೈಸೂರು ನಗರ ಹಾಗೂ ತಾಲೂಕಿನ ಆರ್‍ಎಟಿ ತಂಡಗಳು ಮೇಲ್ವಿಚಾರಕರ ನಿರ್ದೇಶನದಂತೆ ವಿವಿಧ ಪ್ರದೇಶ ಗಳಿಗೆ ತೆರಳಿ ಕಾರ್ಯ ನಿರ್ವಹಿಸುತ್ತಿವೆ.

ಈ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ಬುಧವಾರ ಮಾತನಾಡಿದ ಜಿಲ್ಲಾ ರೋಗವಾಹಕ ಆಶ್ರಿತ ರೋಗ ಗಳ ನಿಯಂತ್ರಣಾಧಿಕಾರಿ ಹಾಗೂ ರ್ಯಾಪಿಡ್ ಟೆಸ್ಟಿಂಗ್ ತಂಡಗಳ ಮೇಲ್ವಿಚಾರಕ ಡಾ.ಎಸ್.ಚಿದಂಬರ, ಆರ್‍ಎಟಿ ತಂಡಗಳು ಪಾಸಿಟಿವ್ ಪ್ರಕರಣಗಳ ಸಂಖ್ಯೆಯ ಆಧಾರ ಪ್ರದೇಶದಿಂದ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ತಂಡ ಯಾವ ಪ್ರದೇಶಕ್ಕೆ ಸ್ಥಳಾಂತರ ವಾಗುತ್ತದೆ ಎಂಬುದನ್ನು ಆಯಾಯ ಪ್ರದೇಶದ ಜನತೆಗೆ 2 ದಿನ ಮುಂಚಿತವಾಗಿ ಮಾಹಿತಿ ನೀಡಲಾಗುವುದು. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರ ಸಹಾಯ ಪಡೆಯಲಾಗುವುದು. ಸಿಬ್ಬಂದಿ ಮತ್ತು ಕಿಟ್‍ಗಳ ಲಭ್ಯತೆ ಹಾಗೂ ಪರಿಸ್ಥಿತಿ ಆಧರಿಸಿ ತಂಡಗಳ ರಚನೆಯಲ್ಲಿಯೂ ಬದಲಾವಣೆ ಮಾಡಲಾಗುತ್ತದೆ. ದಿನವೂ ಬದ ಲಾವಣೆ ಮಾಡುವ ಸ್ಥಿತಿ ಇದೆ ಎಂದು ತಿಳಿಸಿದರು.

Translate »