ಮೈಸೂರು, ಫೆ.14- ಮೈಸೂರು ಹೇರ್ ಮತ್ತು ಬ್ಯೂಟಿ ಅಸೋಸಿ ಯೇಷನ್ ವತಿಯಿಂದ ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ ನಲ್ಲಿ ವಿನೂತನ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ವಧುವಿನ ಅಲಂಕಾರದ ಬಗ್ಗೆ ಉಚಿತ ಸೆಮಿನಾರ್ ಆಯೋಜಿಸಲಾಗಿತ್ತು.
ಎಐಹೆಚ್‍ಬಿಎ ಮೈಸೂರು ಘಟಕದ ಅಧ್ಯಕ್ಷೆ ಉಮಾ ಜಾಧವ್ ಸೆಮಿನಾರ್ ನಡೆಸಿಕೊಟ್ಟರು. ಸುಮಾರು 125 ಸದಸ್ಯರು ಭಾಗವಹಿ ಸಿದ್ದು, ಸೆಮಿನಾರ್‍ನ ಪ್ರಯೋಜನ ಪಡೆದುಕೊಂಡರು. ರೂಪದರ್ಶಿಯ ರಾದ ಮನುಶ್ರೀ, ರೋಹಿಣಿ, ನೊರೈನ್ ಮತ್ತಿತರರು ಹಾಜರಿದ್ದರು. ಹೊಸ ಸದಸ್ಯತ್ವ ಪಡೆದುಕೊಳ್ಳುವವರು ಅಧ್ಯಕ್ಷೆ (99860-32650), ಕಾರ್ಯದರ್ಶಿ (98804-90664) ಸಂಪರ್ಕಿಸಲು ಕೋರಲಾಗಿದೆ.