ಧರ್ಮ ಕಾಲಂನಲ್ಲಿ `ಲಿಂಗಾಯತ’ ಎಂದು ನಮೂದಿಸುವಂತೆ ಮನವಿ
ಮೈಸೂರು

ಧರ್ಮ ಕಾಲಂನಲ್ಲಿ `ಲಿಂಗಾಯತ’ ಎಂದು ನಮೂದಿಸುವಂತೆ ಮನವಿ

February 15, 2021

ಮೈಸೂರು, ಫೆ.14-ಸರ್ಕಾರಿ ನೇಮಕಾತಿ ಮತ್ತು ಹುದ್ದೆಗಳಲ್ಲಿ ಬಡ್ತಿ ಹೊಂದುವುದರ ಜೊತೆಗೆ ವಿಶೇಷ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಲಿಂಗಾಯತ ಸಮುದಾಯದವರು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸುವಂತೆ ಕರ್ನಾಟಕ ಲಿಂಗಾಯತ ಗೌಡ ಮಹಾಸಭಾದ ಸಂಚಾಲಕ ಆಲನಹಳ್ಳಿ ಪುಟ್ಟಸ್ವಾಮಿ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ ನಡೆಸುವ ಜಾತಿಗಣತಿ ಸೇರಿದಂತೆ ಎಲ್ಲಾ ಕಾಲಂಗಳಲ್ಲಿ ಕಡ್ಡಾಯವಾಗಿ ಲಿಂಗಾಯತ ಎಂದು ನಮೂದಿಸಬೇಕು. ಇಲ್ಲವಾದಲ್ಲಿ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ಪಡೆಯಲು ಆಗುವುದಿಲ್ಲ. ಲಿಂಗಾಯತ ಸಮಾಜದವರು ರಾಜಕೀಯವಾಗಿ ಮೈಸೂರು ಹಳೇ ಭಾಗದ 13 ಜಿಲ್ಲೆಯಲ್ಲಿ ಲಿಂಗಾಯತ ಗೌಡರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈಗಿರುವ ಬಿಜೆಪಿ ಸೇರಿದಂತೆ ಯಾವುದೇ ಪಕ್ಷದಲ್ಲೂ ಸಮಾಜದವ ರಿಗೆ ಅವಕಾಶ ನೀಡಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ರಾಜಕೀಯ ಶಕ್ತಿ ಪಡೆಯಲು ನಿಟ್ಟಿನಲ್ಲಿ ಮೈಸೂರು ಹಳೇ ಭಾಗದಲ್ಲಿರುವ ಲಿಂಗಾಯತ ಗೌಡ ಸಮಾಜವನ್ನು (ಒಬಿಸಿ) ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Translate »