ಪಾಲಿಕೆ ವ್ಯಾಪ್ತಿ ಗೋವುಗಳಿಗೆ ಉಚಿತ ಥೈಲೇರಿಯಾ ಚುಚ್ಚುಮದ್ದು
ಮೈಸೂರು

ಪಾಲಿಕೆ ವ್ಯಾಪ್ತಿ ಗೋವುಗಳಿಗೆ ಉಚಿತ ಥೈಲೇರಿಯಾ ಚುಚ್ಚುಮದ್ದು

November 1, 2020

ಮೈಸೂರು,ಅ.31(ಎಂಟಿವೈ)-ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿ ಯಲ್ಲಿರುವ ಜಾನುವಾರುಗಳನ್ನು ಥೈಲೇ ರಿಯಾ ಖಾಯಿಲೆಯಿಂದ ರಕ್ಷಿಸಲು ಇದೇ ಮೊದಲ ಬಾರಿಗೆ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯು 10 ಲಕ್ಷ ರೂ. ಮೌಲ್ಯದ ಚುಚ್ಚುಮದ್ದು ನೀಡುವ ಮೂಲಕ ಗೋಪಾಲಕರ ಮೆಚ್ಚುಗೆಗೆ ಪಾತ್ರವಾಗಿದೆ.

ರಾಜ್ಯದಲ್ಲಿ ಇತ್ತೀಚೆಗೆ ಜಾನುವಾರು ಗಳನ್ನು ಥೈಲೇರಿಯಾ ಹೆಚ್ಚು ಕಾಡಲಾ ರಂಭಿಸಿದೆ. ಕಾಲು-ಬಾಯಿ ಜ್ವರದೊಂದಿಗೆ ಥೈಲೇರಿಯಾ ಖಾಯಿಲೆಯೂ ಸೇರಿಕೊಂಡು ಗೋಪಾಲಕರನ್ನು ಚಿಂತೆಗೀಡು ಮಾಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಕಾರಣ ಬಹುತೇಕ ಗೋಪಾಲಕರು ದುಬಾರಿ ವೆಚ್ಚದ ಚುಚ್ಚುಮದ್ದು ಕೊಡಿಸಲಾಗದೇ ಪರದಾಡು ತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ 10 ಲಕ್ಷ ರೂ. ಮೌಲ್ಯದ ಚುಚ್ಚುಮದ್ದನ್ನು ಪಶುಸಂಗೋ ಪನಾ ಇಲಾಖೆಗೆ ಕೊಡುಗೆಯಾಗಿ ನೀಡಿದೆ.

ಶನಿವಾರ ಚುಚ್ಚುಮದ್ದು ಹಸ್ತಾಂತರಿಸಿದ ಬಳಿಕ ಗೋಪಾಲಕರ ಸಂಘದ ಉಪಾ ಧ್ಯಕ್ಷರೂ ಆಗಿರುವ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಗೋಪಿ ಮಾತ ನಾಡಿ, ಪ್ರಸ್ತುತ ಮೇವಿನ ಬೆಲೆ ಗಗನಕ್ಕೇ ರಿದೆ. ಜಾನುವಾರು ಸಾಕಾಣಿಕೆಯೇ ದೊಡ್ಡ ಸವಾಲಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಗೋಪಾಲಕರು ದುಬಾರಿ ಚುಚ್ಚುಮದ್ದನ್ನು ಖರೀದಿಸಲು, ಥೈಲೇರಿಯಾದಿಂದ ಜಾನು ವಾರು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದನ್ನು ಮನಗಂಡು ಪಾಲಿಕೆಯ ಸ್ಥಾಯಿ ಸಮಿತಿ ಚರ್ಚಿಸಿ ಜಾನುವಾರುಗಳ ರಕ್ಷಣೆ ಗಾಗಿ 10 ಲಕ್ಷ ರೂ. ಮೀಸಲಿಟ್ಟಿದೆ. ಮೊದಲ ಹಂತದಲ್ಲಿ 5 ಲಕ್ಷ ರೂ. ಮೌಲ್ಯದ ಚುಚ್ಚು ಮದ್ದು ಖರೀದಿಸಿ, ಪಶು ಸಂಗೋಪನಾ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದರು. ಉಳಿದ 5 ಲಕ್ಷ ರೂ. ಬಿಡು ಗಡೆಗೆ ಆಯುಕ್ತರಲ್ಲಿ ಚರ್ಚಿಸಲಾಗಿದೆ. ಶೀಘ್ರವೇ ಚುಚ್ಚುಮದ್ದು ಖರೀದಿಸಲಾಗು ವುದು. ಸರ್ಕಾರಿ ಪಶು ಚಿಕಿತ್ಸೆ ಆಸ್ಪತ್ರೆಯಲ್ಲಿ ಥೈಲೇರಿಯಾಗೆ ನೀಡುವ ಚುಚ್ಚುಮದ್ದು ಲಭ್ಯವಿಲ್ಲ. ಬೂಟಲೆಕ್ಸ್ ಹೆಸರಿನ ಇಂಜೆಕ್ಷನ್‍ಗೆ ಮೆಡಿಕಲ್ ಶಾಪ್‍ಗಳಲ್ಲಿ 1600ರಿಂದ 1700 ರೂ. ದರವಿದೆ. ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆಗೆ ಜಾನುವಾರು ಕರೆದೊಯ್ದರೆ ಚುಚ್ಚು ಮದ್ದು ತರುವಂತೆ ಚೀಟಿ ಬರೆದುಕೊಡು ತ್ತಾರೆ. ಹಸು ಸಾಕಾಣಿಕೆಯೇ ಸವಾಲಾ ಗಿದ್ದು, ದುಬಾರಿ ಇಂಜೆಕ್ಷನ್ ಖರೀದಿಸಲಾಗದೇ ಹಲವರು ಹಾಗೇ ವಾಪಸಾಗುತ್ತಿದ್ದರು. ಈಗ ಏಜೆನ್ಸಿ ಮೂಲಕ ಸಗಟು ದರದಲ್ಲಿ ಚುಚ್ಚುಮದ್ದು ಖರೀದಿಸಲಾಗಿದೆ. ಗೋಪಾ ಲಕರು ಆಧಾರ್ ಕಾರ್ಡ್ ಮತ್ತು ಖಾಯಿಲೆ ದೃಢಪಟ್ಟ ವರದಿಯೊಂದಿಗೆ ಪಾಲಿಕೆ ವ್ಯಾಪ್ತಿಯ ಪಶು ಆಸ್ಪತ್ರೆಗಳಿಗೆ ಜಾನುವಾರು ಗಳನ್ನು ಕರೆತಂದರೆ ಉಚಿತವಾಗಿ ಚುಚ್ಚು ಮದ್ದು ನೀಡಲಾಗುತ್ತದೆ. 1 ಇಂಜೆಕ್ಷನ್ 2 ಡೋಸ್ ಇರುತ್ತದೆ. ಎರಡು ದಿನ ಚುಚ್ಚು ಮದ್ದು ಕೊಡಲಾಗುತ್ತದೆ ಎಂದರು. ಗೋಪಾಲಕರ ಸಂಘದ ಅಧ್ಯಕ್ಷ ಡಿ.ನಾಗ ಭೂಷಣ್, ಉಪ ಮೇಯರ್ ಶ್ರೀಧರ್, ಪಾಲಿಕೆ ಸದಸ್ಯ ಎಂ.ಡಿ.ನಾಗರಾಜು, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಎಸ್.ಸಿ. ಸುರೇಶ್, ಪಾಲಿಕೆ ಪಶು ವೈದ್ಯಾಧಿಕಾರಿ ಡಾ.ತಿರುಮಲೇಗೌಡ ಇನ್ನಿ ತರರು ಕಾರ್ಯಕ್ರಮದಲ್ಲಿದ್ದರು.

 

 

Translate »