ಮೈಸೂರು, ಮಾ.21(ಪಿಎಂ)- ಮೈಸೂರಿನ ಯಾದವಗಿರಿ ಕೈಗಾರಿಕಾ ಪ್ರದೇಶ ದಲ್ಲಿರುವ `ಐಡಿಯಲ್ ಆಕ್ವಾ ಶುದ್ಧ ಕುಡಿಯುವ ನೀರು ಘಟಕ’ದಿಂದ ಮೈಸೂರು ನಗರದ ಎಲ್ಲಾ ವೃದ್ಧಾಶ್ರಮಗಳಿಗೆ ಉಚಿತವಾಗಿ ಕುಡಿಯುವ ನೀರು ಪೂರೈಸಲಾಗುವ ಯೋಜನೆ ರೂಪಿಸಲಾಗಿದೆ ಎಂದು ಘಟಕದ ಮಾಲೀಕ ಹಾಗೂ ಚಿತ್ರನಟ ವಿಜಯ್ ಸೂರ್ಯ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾ.22 `ವಿಶ್ವ ಜಲದಿನ’. ನಗರದ ವೃದ್ಧಾಶ್ರಮಗಳಿಗೆ ನಿತ್ಯವೂ ಉಚಿತ ಕುಡಿಯುವ ನೀರು ಪೂರೈಸುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡುತ್ತಿದ್ದೇವೆ. ಈಗಾಗಲೇ 4 ವೃದ್ಧಾಶ್ರಮಗಳನ್ನು ಸಂಪರ್ಕಿಸಲಾಗಿದೆ. ನಮ್ಮ ನೀರಿನ ಘಟಕ ಇರುವವರೆಗೂ ಈ ಉಚಿತ ಸೇವೆ ನಡೆಯಲಿದೆ ಎಂದರು. ಮೈಸೂರು ನಗರದಲ್ಲಿ ಸುಮಾರು 35 ವೃದ್ಧಾಶ್ರಮ ಗಳು ಇವೆ ಎಂಬ ಮಾಹಿತಿ ಸಿಕ್ಕಿದೆ. ಉಚಿತ ಕುಡಿಯುವ ನೀರಿನ ಸೇವೆ ಬಯಸುವವರು ಮೊ.ಸಂ. 98441 63411 ಸಂಪರ್ಕಿಸಬಹುದು ಎಂದರು. ಐಡಿಯಲ್ ಅಕ್ವಾ ಶುದ್ಧ ನೀರಿನ ಘಟಕದ ಮಾರುಕಟ್ಟೆ ವ್ಯವಸ್ಥಾಪಕ ದ್ವಾರಕೀಶ್ ಗೋಷ್ಠಿಯಲ್ಲಿದ್ದರು.