ಬಿಜೆಪಿಯ ‘ಜನೋತ್ಸವ’ದ ವಿರುದ್ಧಕಾಂಗ್ರೆಸ್‍ನಿಂದ ‘ಜನಜಾಗೃತಿ’
News

ಬಿಜೆಪಿಯ ‘ಜನೋತ್ಸವ’ದ ವಿರುದ್ಧಕಾಂಗ್ರೆಸ್‍ನಿಂದ ‘ಜನಜಾಗೃತಿ’

August 30, 2022

ಬೆಂಗಳೂರು, ಆ.29 (ಕೆಎಂಶಿ)-ರಾಜ್ಯ ಬಿಜೆಪಿ ಸರ್ಕಾರದ ‘ಜನೋತ್ಸವ’ ಕಾರ್ಯಕ್ರಮಕ್ಕೆ ವಿರುದ್ಧವಾಗಿ ‘ಜನಜಾಗೃತಿ’ ಅಭಿಯಾನಕ್ಕೆ ಕಾಂಗ್ರೆಸ್ ಚಾಲನೆ ನೀಡಿದೆ.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇ ವಾಲಾ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮುಂಬರುವ ಚುನಾ ವಣಾ ಪ್ರವಾಸ ವಿವರಗಳನ್ನು ನೀಡಿದರು. ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ‘ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಇಡೀ ದೇಶದಲ್ಲೇ ಇದು ಅತ್ಯಂತ ಭ್ರಷ್ಟ ಸರ್ಕಾರ. ಬಿಜೆಪಿ ಸುಳ್ಳು ಹೇಳುವ ಪಕ್ಷ. ಬಿಜೆಪಿ ಅಂದರೆ ಬಿಗ್ ಟ್ರೇಡ್ ಜನತಾ ಪಾರ್ಟಿ. ಬಿಜೆಪಿ ಎಂದರೆ ಬೇಕೂಫ್ ಜನತಾ ಪಾರ್ಟಿ‘ ಎಂದು ವ್ಯಂಗ್ಯವಾಡಿದರು. ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ… ಇದು ನಮ್ಮ ಪಕ್ಷದಿಂದ ನಡೆಯಲಿರುವ ಅಭಿಯಾನ. ವಿಧಾನಸಭೆ ಚುನಾವಣೆಗೆ ಇನ್ನು ಏಳೆಂಟು ತಿಂಗಳು ಮಾತ್ರ ಇದೆ. ಅಲ್ಲಿಯವರೆಗೆ ನಾವು ಇದನ್ನೆ ಕೇಳುತ್ತೇವೆ. ಇದೇ ಪ್ರಶ್ನೆ ಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ಬಿಜೆಪಿ ಸರ್ಕಾರದಲ್ಲಿ ಶೇ.30 ಕಮಿಷನ್ ಮಠಗಳಿಗೆ, ಶೇ.40 ಗುತ್ತಿಗೆ ದಾರರಿಗೆ, ಶೇ.50 ಬಿಜೆಪಿ ಕಾರ್ಯಕರ್ತರಿಗೆ ಇದೆ. ಹೀಗೆ ಕಮಿಷನ್‍ನ್ನು ವಿವಿಧ ಹಂತಗಳಲ್ಲಿ ಮಾಡಿಕೊಂಡಿದ್ದಾರೆ ಎಂದು ದೂರಿದರು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದರು. ಆಗ ಭಾಗ್ಯಗಳನ್ನೇ ನಮ್ಮ ಸರ್ಕಾರ ನೀಡಿತ್ತು ಎಂದರು. ಶಿವಕುಮಾರ್ ಮಾತ ನಾಡಿ, ‘ಬಸವಣ್ಣ ಹೇಳಿದ್ದು ನುಡಿದಂತೆ ನಡೆಯ ಬೇಕೆಂದು. ನಾವು ನುಡಿದಂತೆ ನಡೆದಿದ್ದೇವೆ. ನೀವು ನುಡಿದಂತೆ ನಡೆಯುತ್ತಿದ್ದೀರಾ ನಾವು ಬಿಜೆಪಿಯವರಿಗೆ ಪ್ರಶ್ನೆ ಕೇಳು ತ್ತೇವೆ. ಕೊಟ್ಟ ವಚನ ಈಡೇರಿಸಿದ್ದೀರಾ? ನಿಮ್ಮ ಆತ್ಮಸಾಕ್ಷಿ ಮೂಲಕ ಉತ್ತರ ಕೊಡಿ ಎಂದು ಕೇಳುತ್ತಿ ದ್ದೇವೆ ಎಂದರು. ‘ನಿಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಲಿಲ್ಲ, ನೀವು ನುಡಿ ದಂತೆ ನಡೆಯಲಿಲ್ಲ, ವಚನ ಭ್ರಷ್ಟರಾಗಿದ್ದೀರಾ ನಾವು ಪ್ರತಿದಿನ ಒಂದೊಂದು ಪ್ರಶ್ನೆ ಕೇಳು ತ್ತೇವೆ. ರೈತರಿಗೆ ಕೊಟ್ಟ ಮಾತು ಉಳಿಸಿ ಕೊಂಡಿದ್ದೀರಾ, ರೈತರ ಆದಾಯ ಡಬಲ್ ಎಂದ ಪ್ರಧಾನಿಯವರು ಎಲ್ಲಿ ರೈತರಿಗೆ ನೀವು ಸಹಾಯ ಮಾಡಿದ್ದೀರಾ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿ ಸಿದರು. ಸಿದ್ದರಾಮಯ್ಯ ಮಾತನಾಡಿ, ‘2013 ರಲ್ಲಿ ನಾವು ಪ್ರಣಾಳಿಕೆ ಹೊರಡಿಸಿದ್ದೆವು. ಜನ ಆಗ ನಮಗೆ ಅವಕಾಶ ಕೊಟ್ಟಿದ್ದರು. 122 ಸ್ಥಾನಗಳನ್ನು ನಾವು ಗೆದ್ದು ಬಂದಿದ್ದೆವು. 2018ರಲ್ಲೂ ಪ್ರಣಾಳಿಕೆ ಹೊರಡಿಸಿದ್ದೆವು. ಬಿಜೆಪಿಯವರೂ ಪ್ರಣಾಳಿಕೆ ಹೊರಡಿಸಿದ್ದರು.

ನಾವು ಜನರಿಗೆ 165 ಭರವಸೆ ನೀಡಿದ್ದೆವು. ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಬಿಜೆಪಿಯವರು ಪ್ರಣಾಳಿಕೆ ಯಲ್ಲಿ 600 ವಚನಗಳನ್ನು ಕೊಟ್ಟಿದ್ದರು. ಅದರಲ್ಲಿ ಎಷ್ಟು ವಚನಗಳನ್ನು ಈಡೇರಿಸಿ ದ್ದಾರೆ‘ ಎಂದು ಪ್ರಶ್ನಿಸಿದರು. ಕೊಟ್ಟ ಭರವಸೆ ಗಳಲ್ಲಿ ಶೇ. 10ರಷ್ಟೂ ಈಡೇರಿಸಿಲ್ಲ. ಜನರಿಗೆ ಮಾತು ಕೊಟ್ಟ ಮೇಲೆ ಉಳಿಸಿಕೊಳ್ಳಬೇಕ ಲ್ಲವೇ? ಜನರಿಗೆ ಕೊಟ್ಟ ಮಾತಿನಂತೆ ನಡೆದು ಕೊಂಡಿಲ್ಲ. ವಚನಗಳ ವಂಚನೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Translate »