ರಾಮನಗರ: ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರಿಂದು ರಾಮ ನಗರ ಜಿಲ್ಲೆಯ ಮಳೆ ಬಾಧಿತ ಪ್ರದೇಶ ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ದರು. ರಾಮನಗರದ ಮಾರುತಿ ಬಡಾ ವಣೆಯಲ್ಲಿ ಭಕ್ಷಿಕೆರೆ ಒಡೆದು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವು ದನ್ನು ಪರಿಶೀಲಿಸಿದ ಮುಖ್ಯಮಂತ್ರಿ, ಕೆರೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅಧಿ ಕಾರಿಗಳಿಗೆ ಸೂಚಿಸಿದರು. ಭಕ್ಷಿಕೆರೆ ಒಡೆದು 100 ರಿಂದ 150 ಮನೆಗಳಿಗೆ ಹಾನಿಯಾ ಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಭಕ್ಷಿಕೆರೆ ನಂತರ ರೈತರ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ, ಪರಿ ಹಾರದ ಭರವಸೆ ನೀಡಿದರು. ಮಳೆಯಿಂದ ಕುಸಿದು ಬಿದ್ದಿ ರುವ ಮನೆಗಳಿಗೆ ತಕ್ಷಣ 1 ಲಕ್ಷ ರೂಪಾಯಿ ಹಾಗೂ ಒಟ್ಟಾರೇ 5 ಲಕ್ಷ ರೂ. ಪರಿಹಾರವನ್ನು ಹಂತ ಹಂತವಾಗಿ ನೀಡಲಾ ಗುವುದು ಎಂದು ಅವರು ತಿಳಿ ಸಿದರು. ಮಳೆಯಿಂದ ಬೆಂಗ ಳೂರು-ಮೈಸೂರು ರಸ್ತೆಯಲ್ಲಿ ಸಮಸ್ಯೆಯಾಗಿದೆ. ಹೆದ್ದಾರಿಯ ಹಲವೆಡೆ ಕಾಲುವೆ ಮುಚ್ಚಿರು ವುದರಿಂದ ಈ ಸಮಸ್ಯೆಯಾ ಗಿದೆ. ಕಾಲುವೆ ತೆರವುಗೊಳಿಸು ವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿ ಸಲಾಗಿದೆ. ಅವರು ಕಾಲುವೆ ತೆರವುಗೊಳಿಸುವವರೆಗೂ ನಾವು ಕಾಯುವುದಿಲ್ಲ, ರಾಜ್ಯ ಸರ್ಕಾರವೇ ತೆರವುಗೊಳಿಸ ಲಿದ್ದು, ಮಳೆ ನೀರು ಸರಾಗ ವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು. ಮಳೆಯಿಂದ ರೇಷ್ಮೆ ರೀಲರ್ಸ್‍ಗೆ ಆಗಿರುವ ನಷ್ಟ ವನ್ನು ಸರ್ಕಾರವೇ ಭರಿಸಲಿದೆ. ಸಂಕಷ್ಟದಲ್ಲಿರುವವರಿಗೆ ಶೀಘ್ರದಲ್ಲೇ ತಾತ್ಕಾಲಿಕ ಪರಿ ಹಾರ ಒದಗಿಸಲಾಗುವುದು, ರಾಜ್ಯ ಸರ್ಕಾರದ ವತಿಯಿಂದ ಪಡಿತರ ಕಿಟ್ ವಿತರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ರಾಮನಗರ, ಆ.29-ರಾಮನಗರ ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದು ವರಿದಿದೆ. ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆ ಸೋಮ ವಾರವೂ ಮುಂದುವರೆದಿದ್ದು, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಮೇಲೆ ನಾಲ್ಕು ಅಡಿಗೂ ಹೆಚ್ಚು ನೀರು ನಿಂತಿದ್ದು, ಅಂಡರ್‍ಪಾಸ್‍ಗಳಲ್ಲಿ ವಾಹನಗಳು ತೇಲುತ್ತಿದ್ದ ದೃಶ್ಯ ಕಂಡು ಬಂದಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುತ್ತಿದ್ದು, ಕೆಲ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ರಾಮನಗರ ಸಮೀಪದ ಸಂಗಬಸವನದೊಡ್ಡಿ ಬಳಿ ಅಂಡರ್‍ಪಾಸ್‍ನಲ್ಲಿ ಕೆಲವು ಕಾರುಗಳು ಮುಳುಗಿವೆ. ಪ್ರಯಾಣಿಕರು ನೀರಿನಲ್ಲೇ ಕಾರನ್ನು ಬಿಟ್ಟು ಇಳಿದು ಲಾಕ್ ಮಾಡಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳಿದ ಪರಿಣಾಮ ಹಲವಾರು ಕಾರುಗಳು ನೀರಿನಲ್ಲಿ ತೆಪ್ಪದಂತೆ ತೇಲಾಡುತ್ತಿದ್ದ ದೃಶ್ಯ ಕಂಡು ಬಂದಿದೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಸರ್ವಿಸ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಬಸವನಪುರದ ಮಧುರ ಗಾರ್ಮೆಂಟ್ಸ್ ಬಳಿ ಕಾರೊಂದು ಗುಂಡಿಗೆ ಮಗುಚಿದೆ. ಬೆಂಗಳೂರಿನಿಂದ ಮಳವಳ್ಳಿಗೆ ತೆರಳುತ್ತಿದ್ದ ಉದಯರಂಗ ಖಾಸಗಿ ಬಸ್ ರಾಮನಗರದ ಬಿಳಗುಂಬ ಅಂಡರ್ ಪಾಸ್‍ನಲ್ಲಿ ಸಿಲುಕಿದ್ದು, ಬಸ್‍ನ ಅರ್ಧಭಾಗ ಮುಳುಗಡೆಯಾಗಿದೆ. ಈ ಬಸ್‍ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಕಿಟಕಿಗಳ ಮೂಲಕ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಆರ್ಕೇಶ್ವರ ಕಾಲೋನಿ ಸಂಪೂರ್ಣ ಜಲಾವೃತ: ಧಾರಾಕಾರ ಮಳೆಯಿಂದಾಗಿ ಆರ್ಕೇಶ್ವರ ಕಾಲೋನಿ ಸಂಪೂರ್ಣ ಜಲಾವೃತಗೊಂಡಿದೆ.
ಕಾಲೋನಿಯಲ್ಲಿರುವ ಮನೆಗಳು ಮುಕ್ಕಾಲು ಭಾಗ ಮುಳುಗಡೆಯಾಗಿದ್ದು, ಮನೆಯಲ್ಲಿದ್ದ ದಿನ ಬಳಕೆ ವಸ್ತು, ಬೈಕ್, ಕಾರು ಸಂಪೂರ್ಣ ಜಲಾವೃತಗೊಂಡಿದೆ. ಕಾಲೋನಿ ಮುಳುಗಡೆ ಹಿನ್ನೆಲೆ ಜನರಲ್ಲಿ ಹೆಚ್ಚಿದ ಆತಂಕ ಹೆಚ್ಚಿದೆ.
ಬಿಡದಿ ಬಳಿಯ ಕುಂಬಳಗೋಡಿನ ಸೇತುವೆ ಮತ್ತೆ ಕುಸಿತ ಕಂಡಿದ್ದು, ಅಪಾಯದ ಮುನ್ಸೂಚನೆಯಿಂದ ಮತ್ತೆ ಕುಂಬಳಗೂಡು ಸೇತುವೆಯನ್ನು ಬಂದ್ ಮಾಡಲಾಗಿದೆ. ರಾಮನಗರ ತಾಲೂಕಿನ ಮಾಯಿಗಾನಹಳ್ಳಿ ಗ್ರಾಮದ ಬಳಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತ್ತವಾಗಿ ಕುಸಿತ ಕಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಮಾಯಿಗಾನಹಳ್ಳಿ ಬಳಿ ರಸ್ತೆಯನ್ನು ಬಂದ್‍ಮಾಡಿ ಪೊಲೀಸರು ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದಾರೆ. ಬಸವನಹಳ್ಳಿ ಗ್ರಾಮದ ಬಳಿ ಬೃಹತ್ ಬಂಡೆಯೊಂದು ರಸ್ತೆಗೆ ಉರುಳಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ. ಬಂಡೆ ಉರುಳಿದ ವೇಳೆ ಯಾವುದೇ ವಾಹನ ಸಂಚಾರವಿಲ್ಲದ ಕಾರಣ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ದಶಪಥ ರಸ್ತೆಯಲ್ಲಂತೂ ಸಂಚಾರ ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ರಾಮನಗರ, ಚನ್ನಪಟ್ಟಣದ ಬಹುತೇಕ ಬಡಾವಣೆಗಳು ಮುಳುಗಡೆ ಹಂತ ತಲುಪಿವೆ. ದ್ವೀಪದಂತಾಗಿರುವ ರಾಮನಗರದಿಂದ ಬೆಂಗಳೂರು ಕಡೆಗೆ ಯಾವ ಸಂಚಾರ ವ್ಯವಸ್ಥೆಯು ಇಲ್ಲದಂತಾಗಿದೆ.
ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ಸಾವು: ಬೆಂಗಳೂರು- ಮೈಸೂರು ಹೆದ್ದಾರಿಯ ಕೂಗಳತೆ ದೂರದ ಬಿಡದಿ ಹೋಬಳಿಯ ತೊರೆದೊಡ್ಡಿ ಗ್ರಾಮದ ಬಳಿ ಸಂಚರಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ರಾಮನಗರದ ಇಟ್ಟಮಡು ಗ್ರಾಮದ ಬೋರೇಗೌಡ (56) ಎಂಬುವವರು ಸಾವನ್ನಪ್ಪಿದ್ದಾರೆ.