ಬೀಜೋಪಚಾರದಿಂದ ಭತ್ತಕ್ಕೆ  ತಗುಲುವ ರೋಗ ತಡೆಗಟ್ಟಬಹುದು
ಮೈಸೂರು

ಬೀಜೋಪಚಾರದಿಂದ ಭತ್ತಕ್ಕೆ ತಗುಲುವ ರೋಗ ತಡೆಗಟ್ಟಬಹುದು

July 12, 2021

ಮೈಸೂರು,ಜು.11(ಪಿಎಂ)- ಭತ್ತಕ್ಕೆ ತಗುಲುವ ರೋಗಗಳನ್ನು ಬೀಜೋಪಚಾರದಿಂದ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ರೈತರು ಬೇಸಾಯ ಕ್ರಮದಲ್ಲಿ ಬೀಜೋಪಚಾರ ಅಳ ವಡಿಸಿಕೊಳ್ಳಬೇಕೆಂದು ಸುತ್ತೂರಿನ ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಹೆಚ್.ವಿ.ದಿವ್ಯಾ ತಿಳಿಸಿದರು.

ಹೆಚ್‍ಡಿ ಕೋಟೆ ತಾಲೂಕಿನ ನಿಲು ವಾಗಿಲು ಗುಚ್ಛದ ಮಾಗೊಡ್ಲು ಗ್ರಾಮ ದಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಭತ್ತದ ತಳಿ ಕೆಎಂಪಿ-220 ತಳಿಯ ಪ್ರಾತ್ಯ ಕ್ಷಿಕೆ ಹಾಗೂ ಬೀಜೋಪಚಾರ ಕುರಿತ ತರಬೇತಿಯಲ್ಲಿ ಮಾತನಾಡಿದರು.
ಬೀಜೋಪಚಾರದ ವಿಧಾನಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿದ ಅವರು, ಭತ್ತಕ್ಕೆ ಬರುವ ಹಲವು ರೋಗಗಳು ಬೀಜ ಹಾಗೂ ಮಣ್ಣಿನಿಂದ ಹರಡುತ್ತದೆ. ಬೀಜೋಪಚಾರ ದಿಂದ ರೋಗಗಳನ್ನು ತಡೆಗಟ್ಟಬಹುದು. ಇದಕ್ಕಾಗಿ ಕೇವಲ 50ರಿಂದ 100 ರೂ. ವಿನಿ ಯೋಗಿಸಬೇಕಾಗುತ್ತದೆ. ಕೆಎಂಪಿ-220 ತಳಿಯ ಅಕ್ಕಿಯು ಜ್ಯೋತಿ ತಳಿ ರೀತಿಯಲ್ಲೇ ಇದ್ದು, ಜ್ಯೋತಿ ತಳಿಗಿಂತ ಹೆಚ್ಚಿನ ಇಳುವರಿ ನೀಡುವುದಲ್ಲದೆ, ರೋಗ ಬಾಧೆ ಕಡಿಮೆ ಇರುವುದು ಇದರ ವಿಶೇಷ. ಇದನ್ನು ಕೃಷಿ ವಿವಿಯಿಂದ ಬಿಡುಗಡೆ ಮಾಡಲಾಗಿದೆ ಎಂದರು. ಬೇಸಾಯ ಕ್ರಮದ ಕುರಿತು ಕೇಂದ್ರದ ಬೇಸಾಯಶಾಸ್ತ್ರದ ವಿಜ್ಞಾನಿ ಶಾಮರಾಜ್, ಭತ್ತದಲ್ಲಿ ಯಾಂತ್ರೀಕರಣದ ಕುರಿತು ಧರ್ಮಸ್ಥಳ ಸಂಸ್ಥೆಯ ಅಧಿಕಾರಿ ಜಯರಾಂ ರೈತರಿಗೆ ಮಾಹಿತಿ ನೀಡಿದರು. ಗ್ರಾಮದ 34 ರೈತರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Translate »