ಇಂದಿನಿಂದ ವಸ್ತ್ರಾಭರಣ, ಕರಕುಶಲ ವಸ್ತುಪ್ರದರ್ಶನ
ಮೈಸೂರು

ಇಂದಿನಿಂದ ವಸ್ತ್ರಾಭರಣ, ಕರಕುಶಲ ವಸ್ತುಪ್ರದರ್ಶನ

July 26, 2018

ಮೈಸೂರು: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಕುವೆಂಪು ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಜು.26ರಿಂದ ಆ.7 ರವರೆಗೆ ನಬನ್ಯೂ ರಿಚ್ ವಸ್ತ್ರಾಭರಣ, ಕರಕುಶಲ ವಸ್ತು ಪ್ರದರ್ಶನವನ್ನು ಏರ್ಪಡಿ ಸಲಾಗಿದೆ ಎಂದು ವಸ್ತು ಪ್ರದರ್ಶನದ ಸಂಚಾಲಕ ಎಸ್.ಎಂ.ಹಾದಿ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜು.26ರಂದು ಸಂಜೆ 4.30ಕ್ಕೆ ಶಾಸಕ ಎಸ್.ಎ.ರಾಮದಾಸ್ ಪ್ರದ ರ್ಶನಕ್ಕೆ ಚಾಲನೆ ನೀಡುವರು, ಮೇಯರ್ ಬಿ.ಭಾಗ್ಯವತಿ ಹಾಗೂ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಮೇಳದಲ್ಲಿ ಜಯಪುರ್, ಕಾಶ್ಮೀರ್, ಬನಾರಸ್‍ನ ವಿಶೇಷ ಪ್ರಿಂಟೆಂಡ್ ಸೀರೆಗಳು, ಶಾಲ್‍ಗಳು, ರಾಜಸ್ಥಾನಿ, ಬಂಗಾಳಿಯ ಕಾಟನ್ ಸೀರೆಗಳು, ರಜಾಯಿ, ಕುರ್ತಿಗಳು, ಉತ್ತರ ಪ್ರದೇಶದ ಬೆಡ್‍ಶೀಟ್, ದಿವಾನ್ ಸೆಟ್‍ಗಳು, ತಮಿಳುನಾಡಿನ ಸುಮಂಗಲಿ, ಹುಬ್ಬಳ್ಳಿಯ ಪಾರಂಪರಿಕ ಕಾಟನ್ ಸೀರೆಗಳು ದೊರೆಯುತ್ತವೆ ಎಂದರು. ಸುದ್ದಿಗೋಷ್ಠಿಯಲ್ಲಿ ವಸ್ತು ಪ್ರದರ್ಶನದ ಸಂಯೋಜಕರಾದ ದಿನೇಶ್ ಶರ್ಮಾ ಹಾಗೂ ಅವಿಲ್ ಶರ್ಮಾ ಉಪಸ್ಥಿತರಿದ್ದರು.

Translate »