ಮೈಸೂರು, ಜೂ.24- ಕೋವಿಡ್-19 ಹಿನ್ನೆಲೆ ಲಾಕ್‍ಡೌನ್ ಅವಧಿಯಲ್ಲಿ ಮೃಗಾಲಯ ನಿರ್ವಹಣೆಗೆ ಕಷ್ಟವಾದ ನಿಟ್ಟಿನಲ್ಲಿ ಹಲವಾರು ಗಣ್ಯರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆ ಗಳು ಮೃಗಾಲಯದ ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಮೂಲಕ ಮೃಗಾಲಯಕ್ಕೆ ಸಾಕಷ್ಟು ನೆರವು ಹರಿದುಬರುತ್ತಿದೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇ ಶಕ ಅಜಿತ್ ಕುಲಕರ್ಣಿ ಹರ್ಷ ವ್ಯಕ್ತಪಡಿಸಿದ್ದಾರೆ.
ಮೈಸೂರು ಮೃಗಾಲಯದ `ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ’ ಅಡಿಯಲ್ಲಿ ಹಲವಾರು ಪ್ರಾಣಿಪ್ರಿಯರು ಒಂದು ವರ್ಷದ ಅವಧಿಗೆ ಪ್ರಾಣಿಗಳನ್ನು ದತ್ತು ಪಡೆದುಕೊಂಡಿರುತ್ತಾರೆ.
ಮೈಸೂರಿನ ಸಿ.ಚಂದ್ರಕಲಾ 30 ಸಾವಿರ ಪಾವತಿಸಿ ಫ್ಲೆಮಿಂಗೊ ಮತ್ತು ಕಾಮನ್ ಆಸ್ಟ್ರಿಚ್, ಎಚ್.ಎಂ.ಭೋಜರಾಜನ್ 10 ಸಾವಿರ ರೂ. ಪಾವತಿಸಿ ಸಿಂಹ-ಬಾಲದ ಮೆಕಾಕ್, ಸುಧಾ ವಿಜಯ ಸಾರಥಿ 5 ಸಾವಿರ ರೂ. ಪಾವತಿಸಿ ರಿಂಗ್ ಟೈಲಡ್ ಲೆಮುರ್, ಇಡಬ್ಲ್ಯೂಎಸ್ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಮೈಸೂರು ಇವರು 5 ಸಾವಿರ ರೂ. ಪಾವತಿಸಿ ಗ್ರೇಟ್ ಹಾರ್ನ್‍ಬಿ ಲ್, ಬೆಂಗಳೂರಿನ ರಾಜೇಶ್ ಜಿ.ಎಲ್ 5 ಸಾವಿರ ಪಾವತಿಸಿ ರೀಸಸ್ ಮೆಕಾಕ್, ಮೈಸೂರಿನ ಸೌಮಿನಿ ವಿಜಯಸಾರಥಿ 3,500 ರೂ ನೀಡಿ ಕಾಳಿಂಗ ಸರ್ಪ, ಕುಶಿ.ಬಿ.ವಿ ಎಂಬುವರು 2 ಸಾವಿರ ರೂ. ಪಾವತಿಸಿ ರೈನ್‍ಬೊ ಲೋರಿಕೀಟ್, ಬೆಂಗಳೂರಿನ ಬಿ.ಎನ್ ಸುಂದರೇಶ್ ಮೂರ್ತಿ 1 ಸಾವಿರ ರೂ. ಪಾವತಿಸಿ ರೆಡ್ ಅವಡವಿಟ್ ಹಾಗೂ ಮೈಸೂರಿನ ಎಸ್.ನೇಮಿಚಂದ್ ಬರೊಲಾ ಅವರು 1 ಸಾವಿರ ರೂ. ನೀಡಿ ಲವ್‍ಬರ್ಡ್ ಅನ್ನು ದತ್ತು ಪಡೆದು ಕೊಂಡಿದ್ದಾರೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.