ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಮೈಸೂರಲ್ಲಿ ರೈತರ ಸರಣಿ ಪ್ರತಿಭಟನೆ
ಮೈಸೂರು

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಮೈಸೂರಲ್ಲಿ ರೈತರ ಸರಣಿ ಪ್ರತಿಭಟನೆ

June 25, 2020

ಮೈಸೂರು, ಜೂ.24(ಪಿಎಂ)- ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಕೈಬಿಡುವಂತೆ ಆಗ್ರಹಿಸಿ `ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ಮತ್ತು `ಕರ್ನಾಟಕ ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿ’ ಬುಧವಾರ ಪ್ರತ್ಯೇಕ ಪ್ರತಿಭಟನೆ ನಡೆಸಿ, ಶಾಸಕರಿಗೆ ಮನವಿ ಸಲ್ಲಿಸಿದವು.

ಜಲದರ್ಶಿನಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಆವ ರಣ ಪ್ರತಿಭಟನೆ ನಡೆಸಿತು. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ಕ್ಕೆ ತಿದ್ದುಪಡಿ ತಂದು ಕಲಂ 79 ಎ, ಬಿ, ಸಿ ಮತ್ತು 63 ಹಾಗೂ 80 ಅನ್ನು ತೆಗೆದು ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಕಂದಾಯ ಸಚಿವರು ಸುಗ್ರೀವಾಜ್ಞೆ ಮೂಲಕ ಈ ತಿದ್ದುಪಡಿ ಜಾರಿಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಜನಾಭಿಪ್ರಾಯ ಸಂಗ್ರಹಿಸದೇ ಹಾಗೂ ಅಧಿವೇಶನದಲ್ಲಿ ಚರ್ಚೆ ಮಾಡದೇ ತಿದ್ದುಪಡಿಗೆ ಮುಂದಾಗಿರುವುದು ಖಂಡನೀಯ. ತಿದ್ದುಪಡಿ ಮಾಡಿದ್ದಲ್ಲಿ ಭೂ ಸುಧಾರಣಾ ಕಾಯ್ದೆಯ ಅಸ್ತಿತ್ವವೇ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ಶಾಸಕ ಎಲ್.ನಾಗೇಂದ್ರ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಮನವಿ ಪತ್ರ ತಲುಪಿಸುತ್ತೇನೆಂದು ಭರವಸೆ ನೀಡಿದರು.

ಕಾಡಾ ಕಚೇರಿ: ಶಾಸಕ ಎಸ್.ಎ.ರಾಮದಾಸ್ ಅವರ ಕಾಡಾ ಕಚೇರಿ ಆವರಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದ ರೈತ ಸಂಘ, ಶಾಸಕ ರಾಮದಾಸ್ ಅವರಿಗೆ ಮನವಿ ಸಲ್ಲಿಸಿತು. ರೈತ ಮುಖಂಡರಾದ ಹೊಸಕೋಟೆ ಬಸವ ರಾಜು, ಪಿ.ಮರಂಕಯ್ಯ, ಮಹದೇವನಾಯಕ, ನೇತ್ರಾವತಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹೋರಾಟ ಸಮಿತಿ: ಕರ್ನಾಟಕ ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಜಲದರ್ಶಿನಿ ಅತಿಥಿಗೃಹದ ಮತ್ತೊಂದು ಭಾಗದಲ್ಲಿ ಪ್ರತಿಭಟನೆ ನಡೆಸಿತು.

ರೈತರ ಹಿತದೃಷ್ಟಿಯಿಂದ ತಿದ್ದುಪಡಿ ವಿರೋಧಿಸಬೇಕು. ಯಾವುದೇ ಕಾಯ್ದೆ ಜಾರಿಗೆ ತರಬೇಕಾದರೂ ವಿಧಾನ ಸಭೆಯಲ್ಲಿ ಜನಪ್ರತಿನಿಧಿಗಳ ಸಮ್ಮುಖ ಚರ್ಚೆಯಾಗಬೇಕು. ಆದರೆ ಕೊರೊನಾ ಸಂಕಷ್ಟದಲ್ಲಿ ರೈತರು ನರಳುತ್ತಿರುವಾಗ ಕಂದಾಯ ಸಚಿವರು ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ಶಾಸಕ ಎಲ್.ನಾಗೇಂದ್ರ ಮನವಿ ಸ್ವೀಕರಿಸಿ ತೆರಳಿದರು.

ಬಳಿಕ ಪ್ರತಿಭಟನಾಕಾರರು ಕೆ.ಆರ್.ನಗರ ಶಾಸಕ ಸಾ.ರಾ. ಮಹೇಶ್ ಕಚೇರಿಗೆ ತೆರಳಿ ಮತ್ತು ವರುಣಾ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಮನೆಗೂ ತೆರಳಿ ಮನವಿ ಸಲ್ಲಿಸಿದರು. ರೈತ ಮುಖಂಡರಾದ ವಿದ್ಯಾಸಾಗರ್ ರಾಮೇ ಗೌಡ, ಸುಧೀರ್‍ಕುಮಾರ್, ಸಿ.ಕೆ.ರವೀಂದ್ರ, ಹಿಮ್ಮಾವು ರಘು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಪ್ರಸ್ತಾಪ ತಕ್ಷಣ ಕೈಬಿಡಬೇಕು
ಮೈಸೂರು, ಜೂ.24(ಪಿಎಂ)- ಕೊರೊನಾ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ತಮ್ಮ ಹಳ್ಳಿ ಗಳಿಗೆ ಮರಳುತ್ತಿದ್ದಾರೆ. ಅವರು ತಮ್ಮ ಹಳ್ಳಿಗಳಲ್ಲಿ ಉಳುಮೆ ಮಾಡಲು ಸರ್ಕಾರ ಸಹಾಯ ಮಾಡ ಬೇಕೇ ಹೊರತು, ರೈತರಿಗೆ ಮಾರಕವಾಗುವ ರೀತಿ ಯಲ್ಲಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಪ್ರಸ್ತಾಪ ಸರಿಯಲ್ಲ ಎಂದು ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಆಕ್ಷೇಪ ವ್ಯಕ್ತಪಡಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಆವ ರಣದಲ್ಲಿ ಬುಧವಾರ ಪ್ರತಿಭಟನಾನಿರತ ರೈತ ಸಂಘಟನೆಗಳಿಂದ ಮನವಿ ಸ್ವೀಕರಿಸಿದ ಬಳಿಕ ಮಾಧ್ಯಮದವರಿಗೆ ಅವರು ಪ್ರತಿಕ್ರಿಯೆ ನೀಡಿದರು.

ಈಗಾಗಲೇ ರಾಜ್ಯದಲ್ಲಿ ರೈತರು ಜಮೀನು ಕಳೆದುಕೊಂಡು ಕೂಲಿ ಕಾರ್ಮಿಕರಾಗುತ್ತಿದ್ದಾರೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ಈ ಹಿಂದೆ ತಿದ್ದುಪಡಿ ತಂದು ಕೃಷಿ ಭೂಮಿ ಖರೀದಿಗೆ ಇದ್ದ ವಾರ್ಷಿಕ 2 ಲಕ್ಷ ರೂ. ಕೃಷಿಯೇತರ ಆದಾಯ ಮಿತಿಯನ್ನು 25 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಈಗ ಆದಾಯದ ಮಿತಿಯನ್ನೇ ಮುಕ್ತಗೊಳಿಸಲು ಹೊರಟಿದ್ದು, ಇದು ಸರಿಯಲ್ಲ ಎಂದರು.

ಈ ತಿದ್ದುಪಡಿ ರೈತ ಪರವಾಗಿಲ್ಲ. ಮೊದಲು ಸಾರ್ವಜನಿಕರು ಹಾಗೂ ಸರ್ವ ಪಕ್ಷಗಳ ಸಭೆ ಕರೆದು ಚರ್ಚೆ ಮಾಡಬೇಕಿತ್ತು, ಅಭಿಪ್ರಾಯ ಸಂಗ್ರಹಿಸ ಬೇಕಿತ್ತು. ಅದನ್ನು ಬಿಟ್ಟು ಸರ್ಕಾರ ಏಕಾಏಕಿ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ. ಸರ್ಕಾರಕ್ಕೆ ಇದು ಶೋಭೆ ತರುವುದಿಲ್ಲ. ತಕ್ಷಣ ತಿದ್ದುಪಡಿ ಪ್ರಸ್ತಾಪ ಕೈಬಿಡಬೇಕು ಎಂದು ಒತ್ತಾಯಿಸಿದರು.

ಬರಗಾಲ, ಪ್ರವಾಹ ಸೇರಿದಂತೆ ಅನೇಕ ಸಂದರ್ಭ ದಲ್ಲಿ ರೈತ ಸಂಕಷ್ಟಕ್ಕೆ ಸಿಲುಕುತ್ತಾನೆ. ಆಗ ಜಮೀನು ಮಾರುವತ್ತ ಗಮನ ನೀಡುತ್ತಾನೆ. ಬಳಿಕ ಕೂಲಿ ಕಾರ್ಮಿಕನಾಗುತ್ತಾನೆ. ಇಷ್ಟು ವರ್ಷಗಳ ಕಾಲ ಕೈಗಾರಿಕೆ ಗಳಿಗೆ ಸರ್ಕಾರಿ ಹಾಗೂ ರೈತರ ಜಮೀನು ಕೊಡ ಲಾಗಿದೆ. ವಿದ್ಯುತ್ ಸೇರಿದಂತೆ ಎಲ್ಲಾ ಸೌಲಭ್ಯ ನೀಡ ಲಾಗಿದೆ. ಅವರು ಎಷ್ಟು ಜನ ಕನ್ನಡಿಗರಿಗೆ ಕೆಲಸ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರಲ್ಲದೆ, ಕೈಗಾರಿಕೆ ಉದ್ದೇಶ ಕ್ಕಾಗಿ ಭೂಮಿ ಪಡೆದು ಬಡಾವಣೆ ನಿರ್ಮಿಸಿರು ವುದೂ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೈಗಾರಿಕೆ ಸ್ಥಾಪನೆ ಉದ್ದೇಶಕ್ಕಾಗಿ ತೆಗೆದುಕೊಂಡ ಜಮೀನು ಎಷ್ಟು? ಅವುಗಳಲ್ಲಿ ಎಷ್ಟು ಕೈಗಾರಿಕೆ ಸ್ಥಾಪನೆ ಮಾಡಲಾಗಿದೆ? ಜೊತೆಗೆ ಇದರಿಂದ ನಿರು ದ್ಯೋಗ ಸಮಸ್ಯೆ ಎಷ್ಟು ನಿವಾರಣೆ ಆಗಿದೆ ಎಂಬು ದನ್ನು ಮೊದಲು ಸರ್ಕಾರ ಸರ್ವೇ ಮಾಡಿಸ ಬೇಕು ಎಂದು ಆಗ್ರಹಿಸಿದರು.

ಕೊರೊನಾ ಸೋಂಕು ಗ್ರಾಮೀಣ ಭಾಗದಲ್ಲೂ ಹೆಚ್ಚುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಬೇರೆ ದೇಶ-ರಾಜ್ಯದಿಂದ ಬರುವವರಿಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಳವಾಗು ತ್ತಿದೆ. ಸರ್ಕಾರವೂ ನಿವಾರಣೆಗೆ ಕಠಿಣ ಶ್ರಮ ವಹಿ ಸುತ್ತಿದೆ. ಆದರೆ ಈಗ ಜನತೆ ಜಾಗೃತರಾಗಬೇಕು. ನಮ್ಮ ಜೀವವನ್ನು ನಾವೇ ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಹೊರ ಬಾರದೇ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಲಾಕ್‍ಡೌನ್ ಮಾರ್ಗದ ಹೊರ ತಾಗಿ ಸೋಂಕು ಹರಡದಂತೆ ಪರ್ಯಾಯ ಕ್ರಮ ಕೈಗೊಳ್ಳಲು ಆದ್ಯತೆ ನೀಡಬೇಕು. ಮತ್ತೆ ಲಾಕ್‍ಡೌನ್ ಮಾಡಿದರೆ ಬಡವರು ಮತ್ತಷ್ಟು ಸಂಕಷ್ಟಕ್ಕೆ ಸಿಲು ಕುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

 

Translate »