ಜಿ.ಬಿ.ಸರಗೂರು ಶಾಲೆ ವಿದ್ಯಾರ್ಥಿನಿಯರು `ರಾಷ್ಟ್ರೀಯ ಮಟ್ಟದ ಕಲೋತ್ಸವ’ಕ್ಕೆ ಆಯ್ಕೆ
ಮೈಸೂರು

ಜಿ.ಬಿ.ಸರಗೂರು ಶಾಲೆ ವಿದ್ಯಾರ್ಥಿನಿಯರು `ರಾಷ್ಟ್ರೀಯ ಮಟ್ಟದ ಕಲೋತ್ಸವ’ಕ್ಕೆ ಆಯ್ಕೆ

January 6, 2021

ಮೈಸೂರು,ಜ.5(ಎಂಕೆ)-ಕೇಂದ್ರ ಸರ್ಕಾ ರದ ವತಿಯಿಂದ ಜ.15ರಿಂದ ನಡೆಯುವ `ರಾಷ್ಟ್ರೀಯ ಮಟ್ಟದ ಕಲೋತ್ಸವ’ದಲ್ಲಿ ಸ್ಪರ್ಧಿ ಸಲು ಮೈಸೂರು ಜಿಲ್ಲೆಯಿಂದ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ಇವರು ಹೆಚ್.ಡಿ.ಕೋಟೆ ತಾಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆಯ ಪ್ರತಿಭಾವಂತರು. ಶಿಕ್ಷಣದಲ್ಲಿ ವಿವಿಧ ಕಲೆ ಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ದೇಶದ ಶ್ರೀಮಂತ ಸಾಂಸ್ಕøತಿಕ ಪರಂಪರೆ ಮತ್ತು ಅದರ ವೈವಿಧ್ಯದ ಅರಿವನ್ನು ಶಾಲಾ ಮಕ್ಕಳಿಗೆ ಮೂಡಿಸಲು ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಸಚಿವಾಲಯದಿಂದ ಆಯೋ ಜಿಸುವ ರಾಷ್ಟ್ರೀಯ ಮಟ್ಟದ ಕಲೋತ್ಸವ ಸ್ಪರ್ಧೆಗೆ ರಾಜ್ಯ ಸರ್ಕಾರ 18 ವಿದ್ಯಾರ್ಥಿ ಗಳನ್ನು ಕಳುಹಿಸಿಕೊಡÀುತ್ತದೆ. ಈ ಪೈಕಿ ದೃಶ್ಯ ಕಲೆ ವಿಭಾಗದಲ್ಲಿ ಒಟ್ಟು 6 ಮಕ್ಕಳು ಆಯ್ಕೆ ಆಗಿದ್ದಾರೆ. ಅವರಲ್ಲಿ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಜಿ.ಐಶ್ವರ್ಯ(3ಡಿ ಸ್ಪರ್ಧೆ) ಹಾಗೂ 9ನೇ ತರಗತಿ ವಿದ್ಯಾರ್ಥಿನಿ ಎ. ಚಂದನ(ಸ್ಥಳೀಯ ಆಟಿಕೆಗಳು) ಆಯ್ಕೆ ಯಾಗಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದಾರೆ ಎಂದು ಶಾಲೆಯ ಚಿತ್ರಕಲಾ ಶಿಕ್ಷಕಿ ಕೆ.ಸಂಗೀತಾ ತಿಳಿಸಿದ್ದಾರೆ.

`ರಾಷ್ಟ್ರೀಯ ಕಲೋತ್ಸವ’ವು 2015ರಿಂದ ಪ್ರತಿವರ್ಷ ನವದೆಹಲಿಯಲ್ಲಿ ನಡೆಯುತ್ತ್ತಿದೆ. ಒಟ್ಟು 9 ಪ್ರಕಾರದ ಸ್ಪರ್ಧೆಗಳಿವೆ. ಜಿಲ್ಲಾ ಮಟ್ಟ ದಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾದ ಬಳಿಕ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದವರನ್ನು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟಕ್ಕೆ ರಾಜ್ಯ ದಿಂದ ಆಯ್ಕೆಯಾದ ಮಕ್ಕಳ ಪೈಕಿ ನಮ್ಮ ಶಾಲೆಯ ಇಬ್ಬರು ಮಕ್ಕಳು ಆಯ್ಕೆಯಾಗಿರು ವುದಕ್ಕೆ ಖುಷಿಯಾಗುತ್ತಿದೆ ಎಂದು ಶಾಲೆ ಮುಖ್ಯಶಿಕ್ಷಕ ಜಿ.ಹೆಚ್.ಮಲ್ಲೇಶ್ ತಿಳಿಸಿದ್ದಾರೆ.

 

Translate »