ಸೇವಾ ಕಾರ್ಯಗಳ ಮೂಲಕ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಮಂಜು ಹುಟ್ಟುಹಬ್ಬ ಆಚರಣೆ
ಮೈಸೂರು

ಸೇವಾ ಕಾರ್ಯಗಳ ಮೂಲಕ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಮಂಜು ಹುಟ್ಟುಹಬ್ಬ ಆಚರಣೆ

November 9, 2020

ಮೈಸೂರು,ನ.8(ಪಿಎಂ)-ಮೈಸೂರು ಮತ್ತು ಚಾಮರಾಜ ನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ, ನಗರ ಜೆಡಿಎಸ್ ಉಪಾಧ್ಯಕ್ಷ ಹಾಗೂ ಅಶ್ವಿನಿ ಗೋಲ್ಡ್ ಕಂಪನಿ ಮಾಲೀಕ ಜಿ.ಮಂಜು (ಮಂಜುಗೌಡ) ಭಾನುವಾರ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿ ಕೊಂಡರು. ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಅಶ್ವಿನಿ ಗೋಲ್ಡ್ ಕಂಪನಿ ಕಚೇರಿ ಆವರಣದಲ್ಲಿ ಕೊರೊನಾ ವಾರಿ ಯರ್ಸ್ ಆದ ಪೌರಕಾರ್ಮಿಕರು ಮತ್ತು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಭದ್ರತಾ ಸಿಬ್ಬಂದಿ ಹಾಗೂ ವಿವಿಧ ವಲಯದ ಕಾರ್ಮಿಕರಿಗೆ ಸಿಹಿಯೊಂದಿಗೆ ಬಟ್ಟೆ ಮತ್ತು ಮಾಸ್ಕ್ ವಿತರಿಸಲಾಯಿತು. ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ ಪ್ಯಾಂಟ್-ಶರ್ಟ್ ವಿತರಣೆ ಮಾಡಲಾಯಿತು.

ಇದೇ ವೇಳೆ ಜಿ.ಮಂಜು ಕೇಕ್ ಕತ್ತರಿಸಿ ನೆರೆದವರಿಗೆ ಹಂಚಿದರು. ಅವರ ಅಭಿಮಾನಿಗಳು, ಮುಖಂಡರು ಅವರಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಅಬ್ದುಲ್ ಅಜೀಜ್ (ಅಬ್ದುಲ್ಲಾ), ಮುಖಂಡರಾದ ಪೈ.ಚಂದ್ರ ಶೇಖರ್, ಸಂಪತ್ ಮತ್ತಿತರರು ಹಾಜರಿದ್ದರು. ಅಲ್ಲದೆ, ಅಬ್ದುಲ್ ಬೈ ಸ್ನೇಹ ಬಳಗದ ವತಿಯಿಂದ ಎಎನ್‍ಐ ಸಿಲ್ಕ್ ಅಂಡ್ ಹ್ಯಾಂಡಿಕ್ರಾಫ್ಟ್ ಭಂಡಾರ್‍ನಲ್ಲಿ ಜಿ.ಮಂಜು ಅವರನ್ನು ಸನ್ಮಾನಿಸಿ ಹುಟ್ಟುಹಬ್ಬದ ಶುಭಾಷಯ ಕೋರಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಸಾಜಿದ್, ಸಾಗರ್ ಗೌಡ, ಗುರು ಮತ್ತಿತರರು ಹಾಜರಿದ್ದರು.

ಇದಕ್ಕೂ ಮುನ್ನ ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿದ ಜಿ.ಮಂಜು, ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ, ಶ್ರೀಸೋಮನಾಥನಂದ ಸ್ವಾಮೀಜಿ ಯವರ ಆರ್ಶೀವಾದ ಪಡೆದರು. ಈ ಸಂದರ್ಭದಲ್ಲಿ ಸಾಗರಗೌಡ, ಶರತ್‍ಗೌಡ, ಭರತ್, ಯಶವಂತ್‍ರಾಜ್ ಮತ್ತಿತರರು ಹಾಜರಿದ್ದರು. ಅಲ್ಲದೆ, ಇಟ್ಟಿಗೆಗೂಡಿನಲ್ಲಿ ರುವ ಜಿ.ಮಂಜು ಅವರ ಕಚೇರಿಗೆ ಅವರ ಬಂಧುಗಳು, ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಭೇಟಿ ನೀಡಿ ಸನ್ಮಾನಿಸಿ, ಶುಭ ಕೋರಿದರು.

Translate »