ಗ.ನಾ.ಭಟ್ಟರದ್ದು ಸದ್ದಿಲ್ಲದ ಸಾಹಿತ್ಯ ಕೃಷಿ ಕಾಯಕ
ಮೈಸೂರು

ಗ.ನಾ.ಭಟ್ಟರದ್ದು ಸದ್ದಿಲ್ಲದ ಸಾಹಿತ್ಯ ಕೃಷಿ ಕಾಯಕ

November 9, 2020

ಮೈಸೂರು, ನ.8(ಆರ್‍ಕೆಬಿ)- ವಿದ್ವಾನ್ ಗ.ನಾ.ಭಟ್ಟರು ಸದ್ದಿಲ್ಲದೆ ಸಾಹಿತ್ಯ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಬಹು ದೊಡ್ಡ ಸಾಹಿತ್ಯ ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಮೈಸೂರು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಧರಣೀದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು.

ಮೈಸೂರಿನ ರಾಮಕೃಷ್ಣನಗರದ ನಟನ ರಂಗಶಾಲೆಯ ರಂಗ ವೇದಿಕೆಯಲ್ಲಿ ಭಾನು ವಾರ ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕøತಿಕ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ.ನಾ.ಭಟ್ಟರ `ನೆಲದ ತಾರೆಗಳು’, `ರಂಗಸ್ಪಂದ’ ಮತ್ತು `ಪ್ರಬೋಧ’ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪುಸ್ತಕದಲ್ಲಿನ ವಿವಿಧ ಲೇಖನಗಳ ಬಗ್ಗೆ ಮಾತನಾಡಿದ ಅವರು, ಇವರ ಪುಸ್ತಕಗಳಲ್ಲಿ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ರಂಗ ಭೂಮಿಗೆ ಸಂಬಂಧಪಟ್ಟ ಸಾಕಷ್ಟು ಅಮೂಲ್ಯ ವಿಚಾರಗಳಿವೆ. ವಿಶೇಷವಾಗಿ ಅಲ್ಲಲ್ಲಿ ಸಂಸ್ಕೃ ತದ ಶ್ಲೋಕಗಳಿವೆ. ಅವರ ಕೃತಿಗಳನ್ನು ಓದುವವರಿಗೆ ಸ್ವಲ್ಪವಾದರೂ ಸಂಸ್ಕøತ ಜ್ಞಾನ ಇರಬೇಕಾಗುತ್ತದೆ ಎಂದು ಹೇಳಿದರು.

ಒಳ್ಳೆಯ ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿರುವ ಅವರು ಇನ್ನಷ್ಟು ಪುಸ್ತಕಗಳನ್ನು ಬರೆಯಬೇಕು. ಸರ್ಕಾರ ಮತ್ತು ಸಮಾಜ ಅವರನ್ನು ಗುರ್ತಿಸು ವಂತಾಗಬೇಕು. ಹೆಚ್ಚಿನ ಪ್ರಶಸ್ತಿಗಳು ದೊರೆ ಯಬೇಕು ಎಂದು ಆಶಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತ ನಾಡಿ, ನಾವು ಏನನ್ನಾದರೂ ಓದುತ್ತಿದ್ದರೆ ಆ ವಿಷಯ ನಮ್ಮ ಮನಸ್ಸಿನ ರಂಗಮಂಟಪ ದೊಳಗೆ ನಾಟಕವಾಗಿ ರೂಪುಗೊಳ್ಳಬೇಕು. ಓದಿದ ನಂತರವೂ ಅದು ನಮ್ಮನ್ನು ಕಾಡು ತ್ತಿರಬೇಕು. ಆಗ ಅದು ಒಳ್ಳೆಯ ಬರ ವಣಿಗೆ ಎನಿಸಿಕೊಳ್ಳುತ್ತದೆ. ಇದರಲ್ಲಿ ಅಂತಹ ಬರವಣಿಗೆ ಇದೆ. ಸಂಸ್ಕೃತಿಯ ಬೆಳವಣಿಗೆಯನ್ನು ದಾಖಲಿಸುವುದು ಸಾಹಿತ್ಯದ ಕೆಲಸ. ನಮ್ಮದೇ ಆಗಿರುವ ಎಷ್ಟೋ ಕಲೆಗಳ ಐತಿಹ್ಯ ನಮಗೆ ಗೊತ್ತಿಲ್ಲ. ಈ ಪುಸ್ತಕದಲ್ಲಿ ನಟನ ರಂಗಶಾಲೆ ನಡೆದುಬಂದ ಹಾದಿ ಇದೆ. ಇದರಿಂದಾಗಿ ನಮ್ಮ ಮುಂದಿನ ಪೀಳಿಗೆಗೆ ಇತಿಹಾಸವನ್ನು ಪರಿಚಯ ಮಾಡಿಕೊಟ್ಟಂತಾಗುತ್ತದೆ ಎಂದರು. ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಸಂವಹನ ಸಲಹೆಗಾರ ಎನ್.ರವಿಶಂಕರ್, ರಂಗಕರ್ಮಿ ಮಂಡ್ಯ ರಮೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »