ಗಲ್ವಾನ್ ಸಂಘರ್ಷ: ಚೀನಾ ಸಂಸ್ಥೆಗಳೊಂದಿಗಿನ 5,000 ಕೋಟಿ ಮೊತ್ತದ 3 ಒಪ್ಪಂದಕ್ಕೆ ‘ಮಹಾ’ ಸರ್ಕಾರ ತಡೆ!
ಮೈಸೂರು

ಗಲ್ವಾನ್ ಸಂಘರ್ಷ: ಚೀನಾ ಸಂಸ್ಥೆಗಳೊಂದಿಗಿನ 5,000 ಕೋಟಿ ಮೊತ್ತದ 3 ಒಪ್ಪಂದಕ್ಕೆ ‘ಮಹಾ’ ಸರ್ಕಾರ ತಡೆ!

June 23, 2020

ಮುಂಬೈ: 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಗಲ್ವಾನ್ ಸಂಘರ್ಷದ ನಡುವೆಯೂ ಚೀನಾ ಮೂಲದ ಸಂಸ್ಥೆ ಗಳೊಂದಿಗೆ 5 ಸಾವಿರ ಕೋಟಿ ರೂ.ಗಳ ಹೂಡಿಕೆ ಒಪ್ಪಂದ ಮಾಡಿ ಕೊಂಡು ಟೀಕೆ ಎದುರಿಸುತ್ತಿದ್ದ ಮಹಾರಾಷ್ಟ್ರ ಸರ್ಕಾರ ಕೊನೆಗೂ ಎಚ್ಚೆತ್ತಿದ್ದು, ಯೋಜನೆಗಳಿಗೆ ತಡೆ ನೀಡಿದೆ. ಮಹಾರಾಷ್ಟ್ರ ಸರ್ಕಾರ ಚೀನಾದ ಸಂಸ್ಥೆಗಳ ಜೊತೆ ಮಾಡಿಕೊಂಡಿದ್ದ ಸುಮಾರು 5000 ಕೋಟಿಯ 3 ಒಪ್ಪಂದಗಳಿಗೆ ತಡೆ ನೀಡಿದೆ. ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ತಿಳಿಸಿದ್ದಾರೆ.

ಅಲ್ಲದೇ ವಿದೇಶಾಂಗ ಸಚಿವಾಲಯ, ಚೀನಾದ ಸಂಸ್ಥೆಗಳೊಂ ದಿಗೆ ಮುಂದಿನ ದಿನಗಳಲ್ಲಿ ಯಾವುದೇ ಒಡಂಬಡಿಕೆ ಮಾಡಿ ಕೊಳ್ಳಬೇಡಿ ಎಂದು ಸಲಹೆ ನೀಡಿದೆ ಎಂದೂ ಸಚಿವರು ತಿಳಿಸಿದ್ದಾರೆ. ಕೊರೊನಾ ಬಳಿಕದ ಆರ್ಥಿಕ ಪುನಶ್ಚೇತನಕ್ಕಾಗಿ ಮಹಾರಾಷ್ಟ್ರ ಸರ್ಕಾರ ಮ್ಯಾಗ್ನೇಟಿಕ್ ಮಹಾರಾಷ್ಟ್ರ 2.0 ಅಭಿಯಾನ ಆರಂಭಿಸಿತ್ತು. ಇದರ ಅಡಿಯಲ್ಲಿ ಚೀನಾದ ಹೆಂಗ್ಲಿ ಇಂಜಿನಿಯರಿಂಗ್, ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಸೊಲ್ಯೂಷನ್ ಜೆವಿ ಮತ್ತು ಫೆÇೀಟಾನ್, ಗ್ರೇಟ್ ಮೋಟಾರ್‍ನೊಂದಿಗೆ ಜೂ.17ರಂದು ಪುಣೆಯ ತಲೆಗಾಂವ್‍ನಲ್ಲಿ ಹೂಡಿಕೆ ಸಂಬಂಧ 3 ಒಪ್ಪಂದಗಳನ್ನ ಮಾಡಿಕೊಂಡಿತ್ತು. ಇದೀಗ ಈ ಒಪ್ಪಂದಕ್ಕೆ ಮಹಾ ವಿಕಾಸ ಅಘಾಡಿ ಸರ್ಕಾರ ತಡೆ ನೀಡಿದೆ.

Translate »