ಅ.5, ರಘುರಾಮ ವಾಜಪೇಯಿ ಅವರಿಗೆ ‘ಗಾಂಧಿಸ್ಮøತಿ’ ಪ್ರಶಸ್ತಿ ಪ್ರದಾನ
ಮೈಸೂರು

ಅ.5, ರಘುರಾಮ ವಾಜಪೇಯಿ ಅವರಿಗೆ ‘ಗಾಂಧಿಸ್ಮøತಿ’ ಪ್ರಶಸ್ತಿ ಪ್ರದಾನ

September 30, 2020

ಮೈಸೂರು, ಸೆ. 29- ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಸಮಾ ರೋಪದ ಸಂದರ್ಭದಲ್ಲಿ ಮೈಸೂರಿನ ಗಾಂಧಿವಾದಿ ಡಾ. ಕೆ. ರಘುರಾಮ ವಾಜ ಪೇಯಿರವರಿಗೆ ಬೆಂಗಳೂರಿನ ಅಮರ ಬಾಪು ಚಿಂತನ ಪತ್ರಿಕೆಯ ವತಿಯಿಂದ ಇದೇ ಅಕ್ಟೋಬರ್ 5ರ ಸೋಮವಾರ ಬೆಳಗ್ಗೆ 10.30ಕ್ಕೆ ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗಾಂಧಿ ಸ್ಮøತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.

ಗಾಂಧಿ ತತ್ವ ಚಿಂತನೆಗಳ ಪ್ರಸರಣಕ್ಕಾಗಿ ಕಳೆದ 8 ವರ್ಷ ಗಳಿಂದ ದ್ವಿಭಾಷಾ -ದ್ವೈಮಾಸಿಕವಾಗಿ ಹೊರಬರುತ್ತಿರುವ ಅಮರ ಬಾಪು ಚಿಂತನ ಪತ್ರಿಕೆಯು ಪ್ರಣವ ಮೀಡಿಯಾ ಹೌಸ್ ಪ್ರಕಾ ಶನದ ಸಹಯೋಗದೊಡನೆ ಈ ಸಮಾರಂಭವನ್ನು ಏರ್ಪಡಿ ಸಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಹೆಚ್.ಚೆನ್ನಪ್ಪ, ಡಿ.ಟಿ.ಎಸ್ ಫೌಂಡೇ ಶನ್ ಸಂಸ್ಥಾಪಕ ಡಿ.ಟಿ.ಪ್ರಕಾಶ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿಕೇರೆ ಗೋಪಾಲ್ ಭಾಗವಹಿಸುವರು. ಅಮರ ಬಾಪು ಚಿಂತನದ ಉಪಸಂಪಾದಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ಉಪಸ್ಥಿತರಿ ರುವರು ಎಂದು ಸಂಪಾದಕ ಜೀರಿಗೆ ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Translate »