ವಿಶ್ವದ ಸಮಸ್ಯೆಗಳಿಗೆ ಗಾಂಧಿ ಮಾರ್ಗವೇ ಪರಿಹಾರ
ಮೈಸೂರು

ವಿಶ್ವದ ಸಮಸ್ಯೆಗಳಿಗೆ ಗಾಂಧಿ ಮಾರ್ಗವೇ ಪರಿಹಾರ

March 31, 2021

ಮೈಸೂರು,ಮಾ.30(ಆರ್‍ಕೆಬಿ)-ವಿಶ್ವದ ಎಲ್ಲಾ ಸಮಸ್ಯೆ ಗಳಿಗೂ ಗಾಂಧಿ ಮಾರ್ಗವೇ ಸೂಕ್ತ. ವಿಶ್ವ ಎದುರಿಸುತ್ತಿ ರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಗಾಂಧಿ ತತ್ವ, ಚಿಂತನೆ ಗಳು ಎಂದು ಹಿರಿಯ ಗಾಂಧೀವಾದಿ, ಅರಸೀಕರೆ ಕಸ್ತೂರಬಾ ಟ್ರಸ್ಟ್‍ನ ಟ್ರಸ್ಟಿ ಪ್ರೊ.ಜಿ.ಬಿ.ಶಿವರಾಜ್ ಅಭಿಪ್ರಾಯಪಟ್ಟರು.
ಮೈಸೂರಿನ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಕೆನಡಿಯನ್ ಅಧ್ಯ ಯನ ಕೇಂದ್ರ, ಇಂಗ್ಲಿಷ್ ವಿಭಾಗ ಮತ್ತು ಗಾಂಧಿ ಭವನ ಗಾಂಧಿ ಅಧ್ಯಯನ ಕೇಂದ್ರ ಆಯೋಜಿಸಿದ್ದ `ವಿಶ್ವದ ಬದಲಾವಣೆಯಲ್ಲಿ ಗಾಂಧಿ ಮತ್ತು ಅವರ ಚಿಂತನೆಗಳು’ ಎರಡು ದಿನಗಳ ರಾಷ್ಟ್ರೀಯ ವೆಬಿನಾರ್‍ನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪ್ರಕೃತಿ ನೀಡಿರುವ ಕೊಡುಗೆಗಳನ್ನು ನಾವು ಸಮ ರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಪ್ರಕೃತಿಯನ್ನು ದುರುಪ ಯೋಗಪಡಿಸಿಕೊಳ್ಳುತ್ತಿದ್ದೇವೆ. ನಾವು ಗಾಂಧಿ ತತ್ವಗಳಿಗೆ ಮನ್ನಣೆ ನೀಡುತ್ತಿಲ್ಲ. ಯುವಜನಾಂಗವನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಕೇವಲ ಉದ್ಯೋಗ, ಪಠ್ಯ ಆಧಾರಿತ ಶಿಕ್ಷಣ ವ್ಯವಸ್ಥೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇಡೀ ವಿಶ್ವ ಕೋವಿಡ್ ಸಾಂಕ್ರಾಮಿಕ ದಿಂದ ಬಳಲುತ್ತಿರುವ ಇಂತಹ ಸಂದರ್ಭದಲ್ಲಿ ಗಾಂಧಿ ಮತ್ತು ಅವರ ಚಿಂತನೆಗಳು’ ಒಂದು ಉತ್ತಮ ಕಾರ್ಯ ಕ್ರಮವಾಗಿದೆ. ವಿದ್ಯಾವಂತರು ಯುವಕರನ್ನು ಗಾಂಧಿ ತತ್ವ, ಚಿಂತನೆಗಳತ್ತ ಕೊಂಡೊಯ್ಯುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಂ.ಎಸ್. ಶೇಖರ್, ಮೈಸೂರು ವಿವಿ ಕೆನಡಿಯನ್ ಅಧ್ಯಯನ ಕೇಂದ್ರದ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಸಂಯೋಜಕ ಪ್ರೊ.ವಿಜಯ್ ಶೇಷಾದ್ರಿ, ಇಂಗ್ಲಿಷ್ ವಿಭಾಗದ ಅಧ್ಯಕ್ಷೆ ಪ್ರೊ.ಎಲ್.ದೇವಿಕಾರಾಣಿ ಇನ್ನಿತರರು ಉಪಸ್ಥಿತರಿದ್ದರು.

Translate »