ವಿಜಯನಗರ 4ನೇ ಹಂತಕ್ಕೊಂದು ಹೆಬ್ಬಾಗಿಲು!
ಮೈಸೂರು

ವಿಜಯನಗರ 4ನೇ ಹಂತಕ್ಕೊಂದು ಹೆಬ್ಬಾಗಿಲು!

June 28, 2020

ಮೈಸೂರು, ಜೂ.27- ನಗರದ ರಿಂಗ್ ರಸ್ತೆ ಮಗ್ಗಲಲ್ಲಿ ಅಭಿವೃದ್ಧಿಪಡಿಸಲಾದ ವಿಜಯನಗರ 4ನೇ ಹಂತ ಬಡಾ ವಣೆಯೂ ಸಹ ಸದ್ಯದಲ್ಲೇ ದೊಡ್ಡದಾದ ಪ್ರವೇಶ ದ್ವಾರವನ್ನು ಹೊಂದಲಿದೆ. 4 ದಿನಗಳ ಹಿಂದೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಕಾಂಕ್ರೀಟ್‍ನಿಂದ ಅಡಿಪಾಯ ನಿರ್ಮಿಸಲಾಗುತ್ತಿದೆ.

ವಿಜಯನಗರ 4ನೇ ಹಂತಕ್ಕೆ ಪ್ರವೇ ಶಿಸಲು ದೊಡ್ಡದಾಗಿ ನಿರ್ಮಾಣಗೊಂಡಿ ರುವ `80 ಅಡಿ ರಸ್ತೆ’ಗೆ ಇನ್ನೂ ನಾಮ ಕರಣವಾಗಿಲ್ಲ. ಸದ್ಯಕ್ಕೆ ಇಲ್ಲಿನ ನಿವಾಸಿಗಳು ಇದನ್ನು `ಮರಿಮಲ್ಲಪ್ಪ ಕಾಂಪೌಂಡ್ ರಸ್ತೆ’ ಎಂದೇ ಕರೆಯುತ್ತಿದ್ದಾರೆ. 80 ಅಡಿ ಅಗಲ ವಾಗಿರುವ ಈ ವಿಶಾಲ ರಸ್ತೆ ರಿಂಗ್ ರಸ್ತೆ ಯಿಂದ ಆರಂಭಗೊಂಡು ಬಸವನಹಳ್ಳಿ ಗಡಿಯಲ್ಲಿ ಕೊನೆಗೊಳ್ಳುತ್ತದೆ. ನಗರ ಸಾರಿಗೆ ಬಸ್ (ನಂ 95ಡಿ) ಈ ರಸ್ತೆಯಲ್ಲೇ ಸಂಚರಿಸುತ್ತಿದ್ದು, ಸದ್ಯಕ್ಕೆ 4 ನಿಲ್ದಾಣ ಗಳನ್ನು ಸ್ಥಾಪಿಸಲಾಗಿದೆ.

ವಿಜಯನಗರ ನಾಲ್ಕನೇ ಹಂತ 2ನೇ ಘಟ್ಟದ ಈ ರಸ್ತೆ 2 ಕಿ.ಮೀ.ಗೂ ಹೆಚ್ಚು ಉದ್ದವಿದೆ. ಕರ್ಣಾಟಕ ಬ್ಯಾಂಕ್ ಅದಾ ಗಲೇ ತನ್ನ `ವಿಜಯನಗರ 4ನೇ ಹಂತ’ ಶಾಖೆಯನ್ನು ಈ ರಸ್ತೆಯಲ್ಲೇ 6 ತಿಂಗಳ ಹಿಂದೆ ತೆರೆದಿದೆ. ಇದರ ಎದುರಿಗೇ ಭಾರ ತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ಸಹ ಹೊಸ ಶಾಖೆ ಆರಂಭಿಸಲು ಸಿದ್ಧತೆ ನಡೆಸಿದೆ. ಇದೇ ರಸ್ತೆಯ ತೇಜು ಕಾರ್ನರ್ ಬಳಿ, ಅಂಜನಾದ್ರಿ ಮುಖ್ಯ ರಸ್ತೆಯಲ್ಲಿ ಕೆನರಾ ಬ್ಯಾಂಕ್ 3 ವರ್ಷಗಳ ಹಿಂದೆಯೇ ಶಾಖೆ ತೆರೆದಿದೆ. ಕಾರ್ಪೊರೇಷನ್ ಬ್ಯಾಂಕ್, ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆಗಳೂ ಈ ಮುಖ್ಯರಸ್ತೆಗೆ ಸಮೀಪವಾಗಿಯೇ ಅಡ್ಡರಸ್ತೆಗಳಲ್ಲಿ ನೆಲೆ ಕಂಡುಕೊಂಡಿವೆ.

ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯು ಇಲ್ಲಿ ಸುವಿಶಾಲ ಜಾಗದಲ್ಲಿ ತನ್ನ ಶಾಖೆಯನ್ನು ಆರಂಭಿಸಿ 2 ವರ್ಷಗಳೇ ಕಳೆದಿವೆ. ಮೈಸೂರು ಮಾರ್ಟ್, ಹೋಟೆಲ್‍ಗಳು, ದಿನಸಿ ಮತ್ತು ತರಕಾರಿ ಅಂಗಡಿಗಳು, ಹಾರ್ಡ್‍ವೇರ್ ಮತ್ತು ಪೇಂಟ್ ಮಳಿಗೆಗಳು, ಆಟೊ ಮೊಬೈಲ್ ಗ್ಯಾರೇಜ್‍ಗಳು, ಮೆಡಿಕಲ್ ಸ್ಟೋರ್‍ಗಳು, ನಂದಿನಿ ಹಾಲಿನ ಬೂತ್ ಗಳು ಈ ಮುಖ್ಯ ರಸ್ತೆಯಲ್ಲಿವೆ. ಎಂಆರ್‍ಪಿ ಮದ್ಯದಂಗಡಿಯೂ ಇದೇ ರಸ್ತೆಯಲ್ಲಿದ್ದು, ಸಂಜೆ ವೇಳೆ ಜನ ಜಂಗುಳಿಗೆ ಕಾರಣವಾಗುತ್ತಿದೆ.

ಬಡಾವಣೆಯ ವಾಣಿಜ್ಯ ಚಟುವಟಿಕೆ ಗಳ ಪ್ರಧಾನ ಮಾರ್ಗವಾಗಲಿರುವ ಈ ಮುಖ್ಯರಸ್ತೆ ಕೆಲ ತಿಂಗಳ ಹಿಂದೆಯಷ್ಟೇ ಜೋಡಿ ರಸ್ತೆಯಾಗಿ ಪರಿವರ್ತನೆಯಾಗಿದೆ. ಭವಿಷ್ಯದಲ್ಲಿ ಪ್ರಮುಖ ವಾಣಿಜ್ಯ ರಸ್ತೆ ಯಾಗಿ ಗುರುತಿಸಿಕೊಳ್ಳುವುದರಿಂದ ಈ ರಸ್ತೆಯಲ್ಲಿ ನಿವೇಶನಗಳ ಬೆಲೆಯೂ ಗಗನಕ್ಕೇರಿದೆ. 1 ಅಡಿಗೆ ಅಂದಾಜು 5 ಸಾವಿರ ರೂ.ಗೂ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ ಎಂದು ರಿಯಲ್ ಎಸ್ಟೇಟ್ ಮಧ್ಯವರ್ತಿಗಳು ಹೇಳುತ್ತಾರೆ.

12 ಸಾವಿರಕ್ಕೂ ಅಧಿಕ ನಿವೇಶನಗಳಿ ರುವ, ಅತ್ಯಂತ ದೊಡ್ಡ ನಾಗರಿಕ ಬಡಾ ವಣೆ ಎನಿಸಿಕೊಂಡಿರುವ `ವಿಜಯ ನಗರ 4ನೇ ಹಂತ’ ಕೆಲ ತಿಂಗಳಲ್ಲೇ ದೊಡ್ಡ ಹೆಬ್ಬಾಗಿಲನ್ನು ಹೊಂದಲಿದೆ. ರಸ್ತೆ ಸೇರಿದಂತೆ 4.35 ಕೋಟಿ ರೂ. ಅಂದಾಜು ಮೊತ್ತದಲ್ಲಿ ಲೋಕೋಪ ಯೋಗಿ ಇಲಾಖೆ ಕೈಗೊಂಡಿರುವ ಹಲವು ಅಭಿವೃದ್ಧಿ ಕಾಮಗಾರಿಗಳಲ್ಲಿ ಹೆಬ್ಬಾಗಿಲು ನಿರ್ಮಾಣವೂ ಒಂದಾಗಿದೆ.

ಹುಣಸೂರು ರಸ್ತೆ ಹಾಗೂ ಬೋಗಾದಿ ಕಡೆಯಿಂದ ರಿಂಗ್ ರಸ್ತೆ ಮೂಲಕ ಬರು ವವರಿಗೆ ಬಡಾವಣೆ ಸಂಪರ್ಕ ಮಾರ್ಗದ ಬಗ್ಗೆ ಗೊಂದಲವಾಗಬಾರದು ಎಂಬ ಉದ್ದೇಶದಿಂದ `ವಿಜಯನಗರ ಹೆಬ್ಬಾಗಿಲು’ ನಿರ್ಮಿಸಲಾಗುತ್ತಿದೆ. ಇದಕ್ಕೆ ಪ್ರತ್ಯೇಕ ಹೆಸ ರನ್ನು ನಾಮಕರಣ ಮಾಡುವ ಚಿಂತನೆಯಿಲ್ಲ ಎಂದು ಲೋಕೋಪಯೋಗಿ ಇಲಾಖೆ ಎಇಇ ರಾಜು `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »