ಜಂತಗಳ್ಳಿಯಲ್ಲಿ ಒಂದೇ ವಾರದಲ್ಲಿ ಮತ್ತೊಂದು ಚಿರತೆ ಬೋನಿಗೆ
ಮೈಸೂರು

ಜಂತಗಳ್ಳಿಯಲ್ಲಿ ಒಂದೇ ವಾರದಲ್ಲಿ ಮತ್ತೊಂದು ಚಿರತೆ ಬೋನಿಗೆ

June 28, 2020

ಮೈಸೂರು, ಜೂ.27(ಎಂಟಿವೈ)- ಮೈಸೂರು ತಾಲೂಕು ವರುಣಾ ಹೋಬಳಿ ಜಂತಗಳ್ಳಿಯಲ್ಲಿ 7 ದಿನದ ಅಂತರದಲ್ಲಿ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ. ಮೈಸೂರು ತಾಲೂ ಕಿನ ಜಂತಗಳ್ಳಿ ಸರ್ವೇ ನಂ.98ರ ಡಾ.ಮಧು ಸೂದನ್ ಎಂಬುವರಿಗೆ ಸೇರಿದ ಜಮೀನಿ ನಲ್ಲಿಟ್ಟಿದ್ದ ಬೋನಿಗೆ 4-5 ವರ್ಷದ ಗಂಡು ಚಿರತೆ ಶುಕ್ರವಾರ ರಾತ್ರಿ ಬಿದ್ದಿದೆ.

ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾ ಗಿದ್ದು, ನಾಯಿ ಸೇರಿದಂತೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿವೆ. ಇದರಿಂದ ಆತಂಕಗೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಜೂ.18 ರಂದು ಮಧುಸೂದನ್ ಎಂಬುವರ ಜಮೀನಿ ನಲ್ಲಿ ಬೋನು ಇಟ್ಟಿದ್ದರು. ಜೂ.19ರ ರಾತ್ರಿ 4 ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿತ್ತು. ಅದನ್ನು ಬಂಡೀಪುರ ಅಭ ಯಾರಣ್ಯದ ಮೂಲೆಹೊಳೆ ವಲಯ ದಲ್ಲಿ ಬಿಡಲಾಗಿತ್ತು.

ಆ ಬಳಿಕವೂ ಅದೇ ಜಾಗದಲ್ಲಿ ಮತ್ತೊಂದು ಚಿರತೆ ಓಡಾಡುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿತು. 2 ದಿನದ ಹಿಂದೆ ಅದೇ ಜಾಗದಲ್ಲಿ ಬೋನು ಇಡಲಾಗಿತ್ತು. ಕಳೆದ ರಾತ್ರಿ ಆಹಾರ ಅರಸಿ ಬಂದ ಗಂಡು ಚಿರತೆ ಬೋನಿಗೆ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಡಿಆರ್‍ಎಫ್‍ಓ ಮಾಲೇಗೌಡ, ಸಿಬ್ಬಂದಿ ಜಗದೀಶ್ ಮತ್ತಿತ ರರು ತೆರಳಿ ಬೋನಿನಲ್ಲಿದ್ದ ಚಿರತೆ ಯನ್ನು ಬಂಡೀಪುರ ಅಭಯಾರಣ್ಯದ ಮೂಲೆ ಹೊಳೆ ರೇಂಜ್‍ಗೆ ಬಿಡಲು ಕೊಂಡೊಯ್ದರು.

Translate »