ಕೋವಿಡ್-19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ಕೆಪಿಸಿಸಿ ಆರೋಪ
ಮೈಸೂರು

ಕೋವಿಡ್-19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ಕೆಪಿಸಿಸಿ ಆರೋಪ

June 28, 2020

ಬೆಂಗಳೂರು, ಜೂ. 27(ಕೆಎಂಶಿ)- ಕೋವಿಡ್-19 ಪರಿಸ್ಥಿತಿ ನಿರ್ವಹಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರದೇಶ ಕಾಂಗ್ರೆಸ್ ಆರೋಪಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಯ ಕತ್ವದಲ್ಲಿ ಸೇರಿದ್ದ ಮುಖಂಡರ ಸಭೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹರಡುತ್ತಿದ್ದರೂ, ಪರಿಸ್ಥಿತಿಯನ್ನು ನಿಭಾ ಯಿಸುವಲ್ಲಿ ಸರ್ಕಾರ ವೈಫಲ್ಯ ಕಂಡಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದೇ ಈ ಲೋಪಕ್ಕೆ ಕಾರಣ ಎಂದು ದೂರಿದೆ.

ಸೋಂಕು ಹತ್ತಿಕ್ಕಲು ಪ್ರತಿಪಕ್ಷಗಳನ್ನು ವಿಶ್ವಾ ಸಕ್ಕೆ ತೆಗೆದುಕೊಳ್ಳುತ್ತಿಲ್ಲ. ತಕ್ಷಣವೇ ಸರ್ವ ಪಕ್ಷಗಳ ನಾಯಕರ ಸಭೆ ಕರೆಯ ಬೇಕೆಂದು ಸಭೆಯಲ್ಲಿದ್ದ ಡಿ.ಕೆ.ಶಿವಕುಮಾರ್, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರ ಮುಖಂಡರು ಒತ್ತಾಯಿಸಿದ್ದಾರೆ. ಇದಲ್ಲದೇ ಭೂ ಸುಧಾರಣಾ ಕಾಯ್ದೆಯಿಂದ ಜನರಿ ಗಾಗಿರುವ ತೊಂದರೆ, ಅನಾನುಕೂಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸಾರ್ವಜನಿಕರಿಗೆ ಆಗಿರುವ ಅನಾನುಕೂಲ ಗಳ ಬಗ್ಗೆಯು ಚರ್ಚೆ ನಡೆಸಿ, ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದೆ. ಪಂಚಾ ಯತ್ ಚುನಾವಣೆಗಳನ್ನು ಮುಂದೂಡಿರುವ ಬಗ್ಗೆಯು ಆಕ್ರೋಶ ವ್ಯಕ್ತ ಪಡಿಸಿರುವ ಸಭೆ, ಇದೇ ರೀತಿ ಸರ್ಕಾರ ವೈಫಲ್ಯಗಳನ್ನು ಮುಂದು ವರೆಸಿಕೊಂಡು ಹೋದರೆ, ಬೀದಿಗಿಳಿದು ಹೋರಾಟ ನಡೆಸುವ ತೀರ್ಮಾನಕ್ಕೆ ಬಂದಿದೆ.

Translate »