ಗಾವಡಗೆರೆ ಸ್ವಾಮೀಜಿ ಶಾಂತಿ-ಸೌಹಾರ್ದ-ಸದ್ಭಾವನಾ ಪಾದಯಾತ್ರೆ
ಮೈಸೂರು

ಗಾವಡಗೆರೆ ಸ್ವಾಮೀಜಿ ಶಾಂತಿ-ಸೌಹಾರ್ದ-ಸದ್ಭಾವನಾ ಪಾದಯಾತ್ರೆ

December 30, 2020

ಮೈಸೂರು, ಡಿ.29(ಎಂಕೆ)- ನೂರಾರು ಭಕ್ತರೊಂದಿಗೆ ಹುಣಸೂರು ತಾಲೂಕಿನ ಗಾವಡ ಗೆರೆ ಶ್ರೀ ಗುರುಲಿಂಗ ಜಂಗಮ ದೇವರ ಮಠ ದಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ ಶಾಂತಿ-ಸೌಹಾರ್ದ-ಸದ್ಭಾವನಾ ಪಾದಯಾತ್ರೆ ಹಮ್ಮಿ ಕೊಂಡಿರುವ ಶ್ರೀ ನಟರಾಜ ಮಹಾಸ್ವಾಮೀಜಿ ಅವರನ್ನು ಮೈಸೂರು ವೀರವನಿತೆ ರಾಣಿ ಚೆನ್ನಮ್ಮ ಸ್ವಯಂಸೇವಾ ಸಂಘದ ಸದಸ್ಯರು ಭಕ್ತಿಯಿಂದ ಸ್ವಾಗತಿಸಿ ಗೌರವ ಸಮರ್ಪಿಸಿದರು.

ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಸಿಐಟಿಬಿ ಛತ್ರಕ್ಕೆ ಮಂಗಳವಾರ ಸಂಜೆ ಆಗಮಿಸಿದ ಶ್ರೀ ನಟರಾಜ ಮಹಾಸ್ವಾಮೀಜಿ ಮತ್ತು ಭಕ್ತ ಸಮೂಹಕ್ಕೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ವಂದಿಸಿ, ಕಾಣಿಕೆ ನೀಡಿ, ಗೌರವ ಸಲ್ಲಿಸಿದರು. ವೀರವನಿತೆ ರಾಣಿ ಚೆನ್ನಮ್ಮ ಸ್ವಯಂಸೇವಾ ಸಂಘ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ನಟರಾಜ ಮಹಾಸ್ವಾಮೀಜಿ, ಇಂದು ನಾವೆಲ್ಲಾ ವ್ಯಸನಮಯ ಸಮಾಜದಲ್ಲಿದ್ದೇವೆ. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ವ್ಯಸನ ವಿದೆ. ಇಂಥ ವ್ಯಸನಗಳಿಂದ ದೂರವಾಗಲು ದೇಹ ಒಪ್ಪಿದರೂ ಮನಸ್ಸು ಒಪ್ಪುವುದಿಲ್ಲ. ಮನಸ್ಸು ಒಪ್ಪಿದರೂ ದೇಹ ಸಹಕರಿಸುವು ದಿಲ್ಲ. ಇಂತಹವರನ್ನು ಸರಿದಾರಿಗೆ ತರುವ ಕೆಲಸ ಅಗಬೇಕಿದೆ. ಇರುವಷ್ಟು ದಿನಗಳಲ್ಲಿ ಸ್ವಲ್ಪ ಸಮಯವಾದರೂ ಮನುಷ್ಯರಾಗಿ ಬದುಕ ಬೇಕಿದೆ. ಅದಕ್ಕಾಗಿ ಮೌಲ್ಯಗಳನ್ನು ರೂಢಿಸಿ ಕೊಳ್ಳಬೇಕಿದೆ ಎಂದು ಬೋಧಿಸಿದರು.

ಮಲೆಮಾದಪ್ಪ ಮನುಕುಲದ ಕಲ್ಯಾಣ ಕ್ಕಾಗಿ ಜಾತಿ, ಜನಾಂಗ ಎಲ್ಲವನ್ನೂ ಮೀರಿ ಎಲ್ಲರಲ್ಲೂ ಮನೆ ಮಾಡಿದ್ದಾರೆ. ನಮ್ಮೊಳಗಿನ ಅಧ್ಯಯನಕ್ಕೆ ಅವಲೋಕನಬೇಕು, ನಮ್ಮ ತಪ್ಪನ್ನು ಅರ್ಥ ಮಾಡಿಕೊಂಡು ಬದಲಾಗ ಬೇಕು. ಎಲ್ಲರೊಂದಿಗೆ ಸಹನೆಯಿಂದ ಜೀವನ ಸಾಗಿಸಬೇಕು ಎಂದು ಮಾರ್ಗದರ್ಶನ ಮಾಡಿ ದರು. ಈ ಸಂದರ್ಭ ವೀರವನಿತೆ ರಾಣಿ ಚೆನ್ನಮ್ಮ ಸ್ವಯಂಸೇವಾ ಸಂಘದ ಅಧ್ಯಕ್ಷ ಎಲ್.ವಿ.ಲೋಕೇಶ್‍ಕುಮಾರ್, ಉಪಾಧ್ಯಕ್ಷ ಕೆ.ವಿ.ಮಲ್ಲೇಶ್, ಕಾರ್ಯದರ್ಶಿ ಎ.ಪಿ.ವಿರೂ ಪಾಕ್ಷ, ಶಿವಮೂರ್ತಿ, ವಚನ ಕುಮಾರಸ್ವಾಮಿ ಎಂ.ಡಿ.ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Translate »