ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಸ್ಥಾನಕ್ಕೆ ಗೀತಾ ಗೋಪಿನಾಥ್ ರಾಜೀನಾಮೆ
News

ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಸ್ಥಾನಕ್ಕೆ ಗೀತಾ ಗೋಪಿನಾಥ್ ರಾಜೀನಾಮೆ

October 21, 2021

ನ್ಯೂಯಾರ್ಕ್: ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರ ಸ್ಥಾನಕ್ಕೆ ಗೀತಾ ಗೋಪಿನಾಥ್ ರಾಜೀನಾಮೆ ನೀಡಿದ್ದು ತಮ್ಮ ಮೂಲ ವೃತ್ತಿಗೆ ಮರ ಳಲಿದ್ದಾರೆ. ಐಎಂಎಫ್ ಈ ಮಾಹಿತಿಯನ್ನು ಅಧಿಕೃತ ವಾಗಿ ಪ್ರಕಟಿಸಿದ್ದು, ಗೀತಾ ಗೋಪಿನಾಥ್ ಐಎಂಎಫ್‍ನ ಮುಖ್ಯ ಅರ್ಥಶಾಸ್ತ್ರಜ್ಞೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಹಾರ್ವರ್ಡ್ ವಿವಿಯ ಅರ್ಥಶಾಸ್ತ್ರ ವಿಭಾಗಕ್ಕೆ ವಾಪಸ್ಸಾಗಲಿದ್ದಾರೆ ಎಂದು ಐಎಂಎಫ್ ಹೇಳಿದೆ.
ಹಾರ್ವರ್ಡ್ ವಿವಿ ಗೀತಾ ಗೋಪಿನಾಥ್ ಅವರಿಗೆ ಗೈರುಹಾಜರಿಯ ರಜೆಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಿತ್ತು. ಈ ಮೂಲಕ ಗೀತಾ ಗೋಪಿನಾಥ್‍ಗೆ ಐಎಂಎಫ್‍ನಲ್ಲಿ 3 ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಪ್ರತಿ ತ್ರೈಮಾಸಿಕದಲ್ಲಿ ಜಾಗತಿಕ ಆರ್ಥಿಕ ಮುನ್ನೋಟ ವರದಿಯನ್ನು ತಯಾರಿಸುವ ಐಎಂಎಫ್ ನ ಸಂಶೋಧಕ ವಿಭಾಗದ ನೇತೃತ್ವವನ್ನು ವಹಿಸಿರುವ ಗೀತಾ ಗೋಪಿನಾಥ್ ಅವರ ಕಾರ್ಯನಿರ್ವಹಣೆಗೆ ಐಎಂಎಫ್ ನ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಲಿನಾ ಜಾರ್ಜೀವಾ ಮೆಚ್ಚುಗೆ ವ್ಯಕ್ತಪಡಿಸಿದ್ದು ಆರ್ಥಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ ಮೊದಲ ಮಹಿಳೆಯಾಗಿದ್ದು ಇತಿಹಾಸ ನಿರ್ಮಿಸಿದ್ದಾರೆ ಎಂದು ಬಣ್ಣಿಸಿದ್ದಾರೆ. ಐಎಂಎಫ್ ಹಾಗೂ ನಮ್ಮ ಸದಸ್ಯರಿಗೆ ಗೀತಾ ಗೋಪಿನಾಥ್ ಅವರ ಕೊಡುಗೆ ನಿಜವಾಗಿಯೂ ಗಮನಾರ್ಹ ಹಾಗೂ ಐಎಂಎಫ್‍ನ ಕೆಲಸಗಳೆಡೆಗೆ ಆಕೆಯ ಪ್ರಭಾವ ಅದ್ಭುತವಾಗಿದೆ ಎಂದು ಜಾರ್ಜೀವಾ ಹೇಳಿದ್ದಾರೆ.

Translate »