ವರುಣ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ
ಮೈಸೂರು

ವರುಣ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

October 21, 2021

ಮೈಸೂರು, ಅ.20(ಎಸ್‍ಪಿಎನ್)- ಜನ ಪ್ರತಿನಿಧಿಗಳು ಹಾಗೂ ಜಿಲ್ಲಾ ಹಂತದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವರುಣ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾ ಕಾರ ಎದುರಾಗಿದ್ದು, ಗ್ರಾಮಸ್ಥರು ಪರದಾಡು ತ್ತಿದ್ದಾರೆ. ಕಳೆದ 3 ವರ್ಷಗಳ ಹಿಂದೆ ವರುಣ ಗ್ರಾಪಂ ಆವರಣದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಚಾಲನೆ ನೀಡಲಾಗಿತ್ತು. ಆದರೆ, ನೀರಿನ ಘಟಕದ ವಿದ್ಯುತ್ ಬಿಲ್ ಪಾವತಿಸದ ಕಾರಣ ಕಳೆದ ಒಂದು ತಿಂಗ ಳಿಂದ ನೀರಿನ ಘಟಕ ಸ್ಥಗಿತಗೊಂಡಿದೆ.

ಇಲ್ಲಿಯವರೆಗೆ 56 ಸಾವಿರ ರೂ. ವಿದ್ಯುತ್ ಬಿಲ್ ಬಂದಿದ್ದು, ಇದನ್ನು ಭರಿಸದ ಹಿನ್ನೆಲೆಯಲ್ಲಿ ಸೆಸ್ಕ್ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಹಣ ಪಾವತಿ ಮಾಡಲು ವರುಣಾ ಗ್ರಾಪಂಗೆ ಅನುದಾನ ಇಲ್ಲದಿರುವುದರಿಂದ ಗ್ರಾಮ ದಲ್ಲಿ ಕಳೆದೊಂದು ತಿಂಗಳಿಂದ ಕುಡಿ ಯುವ ನೀರು ಪೂರೈಕೆಯಾಗುತ್ತಿಲ್ಲ. ಇದರ ಬಗ್ಗೆ ಜಿಪಂ ಸಿಇಓ ಹಾಗೂ ಮೈಸೂರು ತಾಲೂಕು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿ ಹಾಗೂ ಜೆಡಿಎಸ್ ಮುಖಂಡ ವರುಣಾ ಪ್ರಶಾಂತ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕುಡಿಯವ ನೀರಿಗೆ ಈ ಘಟಕಗಳನ್ನೇ ಅವಲಂಬಿಸಿ ದ್ದಾರೆ. ಈ ಕೂಡಲೇ ಜಿಲ್ಲಾಡಳಿತ ವಿದ್ಯುತ್ ಬಿಲ್ ಪಾವತಿಸಿ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಲು ಅನುವು ಮಾಡಿ ಕೊಡುವಂತೆ ಮನವಿ ಮಾಡಿದ್ದಾರೆ.

Translate »