ಮೈಸೂರು, ಅ.19- ದೇಶದ ಅತಿ ದೊಡ್ಡ ಚಿನ್ನ ಮತ್ತು ವಜ್ರದ ಮಾರಾಟ ಸಂಸ್ಥೆ ಯಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತಮಿಳು ಚಿತ್ರರಂಗದ ಸೂಪರ್‍ಸ್ಟಾರ್ ಕಾರ್ತಿ ಅವರನ್ನು ತನ್ನ ಬ್ರ್ಯಾಂಡ್ ಅಂಬಾಸಿಡರ್ ಅನ್ನಾಗಿ ನೇಮಕ ಮಾಡಿಕೊಂಡಿದೆ.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಡೆಸಿದ ಆಂತರಿಕ ಸಮೀಕ್ಷೆಯ ನಂತರ ಕಾರ್ತಿ ಅವರನ್ನು ಬ್ರ್ಯಾಂಡ್ ಅಂಬಾ ಸಿಡರ್ ಆ ನೇಮಿಸಿದ್ದು, ಅವರು ಮಲ ಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‍ನ ಮೌಲ್ಯಗಳನ್ನು ಸಂಪೂರ್ಣವಾಗಿ ಸಾಕಾರ ಗೊಳಿಸಲಿದ್ದಾರೆ. ಈ ಸಹಭಾಗಿತ್ವದ ಅಂಗವಾಗಿ ತಮಿಳುನಾಡಿನ ಅನನ್ಯ ಕಲೆ ಮತ್ತು ಸಂಸ್ಕøತಿಯನ್ನು ಬಿಂಬಿಸುವ ನೂತನವಾದ ಪ್ರಚಾರ ಫಿಲಂಗಳನ್ನು ಮಲಬಾರ್ ಗೋಲ್ಡ್ ಸಿದ್ಧಪಡಿಸಲಿದೆ. ಇದರಿಂದ ತಮಿಳುನಾಡಿನ ಹೊರಗೆ ಮತ್ತು ವಿದೇಶಗಳಲ್ಲಿ ನೆಲೆಸಿರುವ ತಮಿಳು ಭಾಷಿಗರನ್ನು ಈ ಜಾಹೀರಾತು ಚಿತ್ರಗಳು ಆಕರ್ಷಿಸಲಿವೆ.
ನೇಮಕದ ಬಗ್ಗೆ ಮಾತನಾಡಿದ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಮಹಮದ್ ಅವರು, ಪ್ರತಿಭಾವಂತ ನಟ ಮತ್ತು ಸೂಪರ್ ಸ್ಟಾರ್ ಕಾರ್ತಿ ಅವರೊಂದಿಗಿನ ಸಹಭಾಗಿತ್ವ ದಿಂದ ಬ್ರಾಂಡ್‍ನ ನೈತಿಕತೆಯನ್ನು ಅತ್ಯಂತ ವಿಶ್ವಾಸಾರ್ಹ ಧ್ವನಿಯ ಮೂಲಕ ತಿಳಿಸಲಾಗುತ್ತದೆ. ತಮಿಳುನಾಡಿನ ಜನತೆಯನ್ನು ಇನ್ನೂ ಶಕ್ತಿಯುತವಾಗಿ ಸಂಪರ್ಕಿಸಲು ಕಾರ್ತಿ ಅವರ ಹೊರತಾಗಿ ಇನ್ನೊಂದು ಆಯ್ಕೆ ಇಲ್ಲ. ಈ ಸಹಭಾಗಿತ್ವದ ಮೂಲಕ ಜನರು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮೂಲಕ ತಮ್ಮ ನೆಚ್ಚಿನ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಚಿತ್ರ ನಟ ಕಾರ್ತಿ ಮಾತನಾಡಿ, 10 ದೇಶಗಳಲ್ಲಿ ಅಸ್ತಿತ್ವ ಹೊಂದಿರುವ ಮತ್ತು ಭಾರತ ದಲ್ಲಿ ಮುಂಚೂಣಿಯಲ್ಲಿರುವ ಆಭರಣ ಬ್ರ್ಯಾಂಡ್‍ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‍ನೊಂದಿಗೆ ಸಹಭಾಗಿತ್ವ ಮಾಡಿಕೊಳ್ಳಲು ನನಗೆ ಅತೀವ ಸಂತಸವೆನಿಸುತ್ತದೆ. ಸಂಸ್ಥೆಯ ನಂಬಲರ್ಹವಾದ ಬ್ರ್ಯಾಂಡ್‍ನ ವಿಭಿನ್ನ ಅಂಶಗಳು ಮತ್ತು ಅಂತರ್ಗತವಾದ ಸಾಮಥ್ರ್ಯಗಳು ನನ್ನ ಮೇಲೆ ಪ್ರಭಾವ ಬೀರಿವೆ ಎಂದರು.