ಕೊರೊನಾ ಕಷ್ಟ ಕಾಲದಲ್ಲೇ `ಜೆನರಿಕ್’ ಮೆಡಿಕಲ್ಸ್ ಬಂದ್..!
ಮಂಡ್ಯ

ಕೊರೊನಾ ಕಷ್ಟ ಕಾಲದಲ್ಲೇ `ಜೆನರಿಕ್’ ಮೆಡಿಕಲ್ಸ್ ಬಂದ್..!

April 20, 2020
  •  ಮಂಡ್ಯದಲ್ಲಿ ಕಳೆದ 10 ದಿನಗಳಿಂದ ಬಂದ್ ಆಗಿರುವ ಜೆನರಿಕ್ ಔಷಧ ಮಳಿಗೆ
  • ಮೋದಿ ಜನೌಷಧü ಕೇಂದ್ರಕ್ಕೂ ಸಮಯ ನಿಗದಿ: ಸಾರ್ವಜನಿಕರ ಪರದಾಟ

ಮಂಡ್ಯ, ಏ.19(ನಾಗಯ್ಯ)- ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನ ಸಂಜೀ ವಿನಿ ಜೆನರಿಕ್ ಔಷಧಿ ಮಳಿಗೆ ಕಳೆದ 10 ದಿನಗಳಿಂದಲೂ ಬಾಗಿಲು ಮುಚ್ಚಿದ್ದು, ರಿಯಾಯಿತಿ ದರದಲ್ಲಿ ಔಷಧಿ ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಖಾಸಗಿ ಔಷಧಿ ಅಂಗಡಿಗಳು ನಿತ್ಯವೂ ಬೆಳಿಗ್ಗೆಯಿಂದ ರಾತ್ರಿವರೆಗೂ ರೋಗಿಗಳಿಗೆ ಬೇಕಾದ ಅಗತ್ಯ ಔಷಧಿಗಳನ್ನು ಪೂರೈಸು ತ್ತಿವೆ. ಆದರೆ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿ ತೆರೆಯಲಾಗಿ ರುವ ಜೆನರಿಕ್ ಔಷಧಿ ಮಳಿಗೆ ಬಂದ್ ಆಗಿರುವುದರಿಂದ ರೋಗಿಗಳಿಗೆ ಬೇಕಾದ ಅಗತ್ಯ ಔಷಧಿಗಳು ರಿಯಾಯಿತಿ ದರದಲ್ಲಿ ದೊರೆಯದೆ ಪರಿತಪಿಸುವಂತಾಗಿದೆ.

ಕಳೆದ 10 ದಿನಗಳಿಂದ ಜೆನರಿಕ್ ಬಾಗಿಲು ತೆಗೆಯದೇ ಇರುವುದರಿಂದ ವಿಧಿಯಿಲ್ಲದೆ ರೋಗಿಗಳು ಹಾಗೂ ಸಾರ್ವಜನಿಕರು ಹೆಚ್ಚು ಹಣ ನೀಡಿ ಖಾಸಗಿ ಅಂಗಡಿಗಳಿಂದ ಔಷಧಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಪಾಲಿಗೆ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಜೆನರಿಕ್ ಯಾವುದೇ ಕಾರಣವನ್ನು ನೀಡದೆ ಬಂದ್ ಆಗಿದೆ. ಕೊರೊನಾ ಭೀತಿಯಿಂದಾಗಿ ಜೆನರಿಕ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕೆಲಸಕ್ಕೆ ಬರುತ್ತಿಲ್ಲ. ಹೀಗಾಗಿ ಮಳಿಗೆಯನ್ನು ಬಂದ್ ಮಾಡಲಾಗಿದೆ ಎಂದು ಆಸ್ಪತ್ರೆ ಆವರಣದಲ್ಲಿದ್ದ ರೋಗಿಯ ಸಂಬಂಧಿಯೊಬ್ಬರು ದೂರಿದರು.

ಇನ್ನು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ಮಳಿಗೆಗಳು ಸಹ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ. ಮಂಡ್ಯ ನಗರ ದಲ್ಲಿ ಸುಮಾರು 6 ಜನೌಷಧಿ ಕೇಂದ್ರ ಗಳಿವೆ. ಈ ಪೈಕಿ ಗುತ್ತಲು, ಕಲ್ಲಹಳ್ಳಿ, ಕಾರಸವಾಡಿ ರಸ್ತೆಯಲ್ಲಿರುವ ಮಳಿಗೆಗಳು ಬಂದ್ ಆಗಿದ್ದು ಹೊಳಲು ವೃತ್ತ, ಮೂರನೇ ಮುಖ್ಯ ರಸ್ತೆಯಲ್ಲಿರುವ ಕೇಂದ್ರ ಗಳು ಮಾತ್ರ ಬಾಗಿಲು ತೆರೆದು ರೋಗಿ ಗಳಿಗೆ ರಿಯಾಯಿತಿ ದರದಲ್ಲಿ ಔಷಧಿ ಪೂರೈ ಸುತ್ತಿವೆ. ರೈತರ ಸೊಸೈಟಿ ಕಟ್ಟಡದಲ್ಲಿರುವ ಜನೌಷಧಿ ಕೇಂದ್ರ ಸಮಯ ನಿಗದಿ ಮಾಡಿಕೊಂಡಿದ್ದು, ಬೆಳಿಗ್ಗೆ 7.15ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದೆÉ. ಈ ಮಳಿಗೆ ಯಲ್ಲಿ ಔಷಧಿ ಪಡೆಯಲು ನಗರ ಹಾಗೂ ಗ್ರಾಮೀಣ ಪ್ರದೇಶದ ನೂರಾರು ಮಂದಿ ಸಾರ್ವಜನಿಕರು ಪ್ರತಿನಿತ್ಯವೂ ಬರು ತ್ತಿದ್ದು, ಸಮಯ ನಿಗದಿಯ ಬಗ್ಗೆ ಗೊತ್ತಿ ಲ್ಲದೆ ವಾಪಸ್ಸಾಗುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸಮಯ ನಿಗದಿ ಮಾಡಲಾ ಗಿದೆ ಎಂದು ಫಲಕದಲ್ಲಿ ಪ್ರಕಟಿಸಲಾಗಿದ್ದು, ಶೇ.30 ರಿಂದ 70 ರಷ್ಟು ರಿಯಾಯಿತಿ ದರ ದಲ್ಲಿ ಔಷಧಿ ಮಾರುವ ಈ ಕೇಂದ್ರ ಈ ರೀತಿ ಸಮಯ ನಿಗದಿ ಮಾಡಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತೆರೆಯಲ್ಪಟ್ಟಿರುವ ಔಷಧಿ ಮಳಿಗೆಗಳು ಸಾರ್ವಜನಿಕರ ಹಿತ ಕಾಪಾಡದೆ ಬಾಗಿಲು ಮುಚ್ಚಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ವಾಗಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಇಲಾಖೆ ವತಿಯಿಂದ ತೆರೆಯಲಾಗಿರುವ ಈ ಜನೌಷಧಿ ಕೇಂದ್ರ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಿ ರೋಗಿಗಳು ಮತ್ತು ಸಾರ್ವಜನಿಕರ ಹಿತ ಕಾಪಾಡಲು ಸಂಬಂಧಪಟ್ಟ ಇಲಾಖಾ ಧಿಕಾರಿಗಳು ಮುಂದಾಗಬೇಕೆಂದು ಸಾರ್ವ ಜನಿಕರು ಒತ್ತಾಯಿಸಿದ್ದಾರೆ.

Translate »