ಮೈಸೂರು,ಮೇ 8(ಎಂಟಿವೈ)- ಲಾಕ್ ಡೌನ್‍ನಿಂದ ಸಂಕಷ್ಟಕ್ಕೆ ಒಳಗಾಗಿರುವ ಪೌರಕಾರ್ಮಿಕರು, ಟಾಂಗಾ ವಾಲಾಗಳು ಹಾಗೂ ಇನ್ನಿತರ ಶ್ರಮಿಕ ವರ್ಗದವರಿಗೆ ಶುಕ್ರವಾರ ಮೈಸೂರು ನಾಗರಿಕ ವೇದಿಕೆ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದ ಆವರಣದಲ್ಲಿ ಶುಕ್ರ ವಾರ ಬೆಳಿಗ್ಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್ ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದರು.
ಈ ಬಾರಿ 2500 ಕುಟುಂಬ ಗಳಿಗೆ ದಿನಸಿ ಕಿಟ್ ನೀಡಲು ಉದ್ದೇಶಿಸ ಲಾಗಿದ್ದು, ಶುಕ್ರವಾರ ಸಾಂಕೇತಿಕವಾಗಿ ಕೆಲವು ಕುಟುಂಬಗಳವರಿಗೆ ನೀಡಲಾ ಯಿತು. ಈಗಾಗಲೇ ಮೈಸೂರು ಮಹಾನಗರ ಪಾಲಿಕೆಗೆ ಕಿಟ್‍ಗಳನ್ನು ನೀಡಲಾಗಿದೆ. ಫಲಾನುಭವಿ ಗಳ ಪ್ರತಿ ಕುಟುಂಬಕ್ಕೆ 5 ಕೆ.ಜಿ ಅಕ್ಕಿ, ತಲಾ 1 ಕೆ.ಜಿ ಬೇಳೆ, ಸಕ್ಕರೆ, ಉಪ್ಪು ಮತ್ತು 1 ಲೀ. ಎಣ್ಣೆ, ಟೀ ಪುಡಿ ಇರುವ ದಿನಸಿ ಕಿಟ್ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ. ರಾಮದಾಸ್, ಹರ್ಷವರ್ಧನ್, ಮಾಜಿ ಸಚಿವ ಅಡಗೂರು ಹೆಚ್.ವಿಶ್ವ ನಾಥ್, ಮೇಯರ್ ತಸ್ನೀಂ, ಉಪ ಮೇಯರ್ ಸಿ.ಶ್ರೀಧರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಮೈಸೂರು ನಾಗರಿಕ ವೇದಿಕೆಯ ಪದಾಧಿಕಾರಿಗಳಾದ ಆರ್. ವಾಸುದೇವ ಭಟ್, ಡಾ.ಬಾಲಸುಬ್ರಹ್ಮಣ್ಯ, ನರೇಂದ್ರ, ರಶ್ಮಿ ಕೋಟಿ ಹಾಗೂ ಜೆಎಸ್‍ಎಸ್ ಮಹಾವಿದ್ಯಾಪೀಠದ ಅಧಿ ಕಾರಿಗಳು ಉಪಸ್ಥಿತರಿದ್ದರು.