ಸ್ವಯಂ ಸೇವಕರಿಂದ ಕೋವಿಡ್-19 ಬಗ್ಗೆ ಜಾಗೃತಿ
ಮೈಸೂರು

ಸ್ವಯಂ ಸೇವಕರಿಂದ ಕೋವಿಡ್-19 ಬಗ್ಗೆ ಜಾಗೃತಿ

May 9, 2020

ಮೈಸೂರು, ಮೇ 8- ಮೈಸೂರಿನ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಸ್ವಯಂ ಸೇವಕರಿಂದ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ರಮ್ಮನಹಳ್ಳಿಯ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.

ಹೊಸದಾದ ಟಿಪ್ಪಿ ಟ್ಯಾಪ್ ಮಾದರಿ ಯನ್ನು ಬಳಸಿ ಕೈತೊಳೆಯುವ ವಿಧಾನ ವನ್ನು ಪರಿಚಯಿಸಲಾಯಿತು. ಕಾರ್ಯ ಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈ.ಬಿ.ಈಶಕುಮಾರ್, ಪಂಚಾ ಯಿತಿ ಅಧ್ಯಕ್ಷ ನಾಗರಾಜು, ಜವರೇಗೌಡ, ಗೋವಿಂದ, ಮೈಸೂರು ಗ್ರಾಮಾಂತರ ಪೆÇಲೀಸರು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ರಂಗಮ್ಮ, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಕರಾದ ಕುಮಾರಿ ಶ್ವೇತಾಶ್ರೀ, ಕಿಶೋರ್ ಯಾದವ್, ಲಕ್ಷ್ಮಿಕಾಂತ್ ಎಂ ಆರ್ (ಕೋ-ಆರ್ಡಿನೇಟರ್ ಮಂಡ್ಯ), ಅಮ್ಜದ್ ಖಾನ್, ಕಲೀಲ್ ಉರ್ ರೆಹಮಾನ್ ಹಾಗೂ ಸೂಫಿ ರೋಷನ್ ಭಾಗವಹಿಸಿದ್ದರು.

Translate »