ಕಾಯ್ದೆ ತಿದ್ದುಪಡಿ ವಿರೋಧಿಸಿ ಸಚಿವ ಎಸ್‍ಟಿಎಸ್‍ಗೆ ಘೆರಾವ್
ಮೈಸೂರು

ಕಾಯ್ದೆ ತಿದ್ದುಪಡಿ ವಿರೋಧಿಸಿ ಸಚಿವ ಎಸ್‍ಟಿಎಸ್‍ಗೆ ಘೆರಾವ್

September 20, 2020

ಮೈಸೂರು, 19(ಎಂಟಿವೈ)- ಭೂ ಸುಧಾ ರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದು ಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಅನು ಷ್ಠಾನಕ್ಕೆ ಮುಂದಾಗಿರುವ ರಾಜ್ಯ ಸರ್ಕಾ ರದ ಕ್ರಮ ಖಂಡಿಸಿ ರೈತ-ದಲಿತ-ಕಾರ್ಮಿಕ ಐಕ್ಯ ಸಮಿತಿ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಘೆರಾವ್ ಹಾಕಿದರು. ರೈತರಿಗೆ ಮರಣ ಶಾಸನವಾಗಿರುವ ತಿದ್ದುಪಡಿ ಕಾಯ್ದೆ ಜಾರಿಗೊಳಿಸದಂತೆ ಆಗ್ರಹಿಸಿದರು.

ಸಚಿವರು ಮೈಸೂರಿನ ಗನ್‍ಹೌಸ್ ವೃತ್ತದ ಶಂಕರಮಠದಲ್ಲಿ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದಾಗ ಘೆರಾವ್ ಹಾಕಿ ಪ್ರತಿಭಟಿಸಲಾಯಿತು.

ಈ ವೇಳೆ ಸಚಿವರು ರೈತ ಮುಖಂಡ ರಿಂದ ಮನವಿ ಸ್ವೀಕರಿಸಲು ಮುಂದಾ ದರು. ಆಗ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೊರೊನಾದಿಂದಾಗಿ ರೈತರು ಹಲವು ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ರೈತರ ಹಿತಕಾಯಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರ ಸಮಸ್ಯೆ ಬಗ್ಗೆ ಚರ್ಚಿ ಸಲು ಸಭೆ ಕರೆದಿಲ್ಲ. ಕಬ್ಬು ಕಟಾವು ಸಾಧ್ಯ ವಾಗಿಲ್ಲ. ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ. ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಿಲ್ಲ. ಸಹ ಕಾರ ಸಂಘ, ಸಹಕಾರ ಬ್ಯಾಂಕ್‍ಗಳÀಲ್ಲಿ ಸಾಲ ಸೌಲಭ್ಯ ಸಿಗುತ್ತಿಲ್ಲ. ನೆರೆ ಹಾವಳಿ ಯಿಂದ ಬೆಳೆ ನಷ್ಟವಾದವರಿಗೆ ಪರಿಹಾರ ಸಿಕ್ಕಿಲ್ಲ. ರಸಗೊಬ್ಬರ ಸಮಸ್ಯೆ ತೀವ್ರ ಗೊಂಡಿದ್ದು, ಕೃಷಿ ಚಟುವಟಿಕೆಗೆ ಹಿನ್ನಡೆ ಯಾಗಿದೆ ಎಂದು ದೂರಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಲ್ಲ ಕ್ಷೇತ್ರಗಳ ಖಾಸಗೀಕರಣಕ್ಕೆ ಹೊರ ಟಿವೆ. ಭೂ ಸುಧಾರಣೆ ಕಾಯ್ದೆಗೆ ತಿದ್ದು ಪಡಿ ತಂದು ಉಳ್ಳವನಿಗೆ ಭೂಮಿ ನೀಡಲು ಹೊರಟಿದೆ. ಸಣ್ಣ ಹಿಡುವಳಿದಾರರು ಭೂಮಿ ಕಳೆದುಕೊಳ್ಳುವಂತಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಣೆ ಹಾಕಲು ಸರ್ಕಾರ ಮುಂದಾಗಿದೆ. ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಗಳಿಗೂ ತಿದ್ದುಪಡಿ ಮಾಡಿ ಸುಗ್ರೀ ವಾಜ್ಞೆ ಮೂಲಕ ಜಾರಿಗೆ ಮುಂದಾಗಿರುವ ಉದ್ದೇಶವೇನು? ಕೂಡಲೇ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಸಚಿವ ಎಸ್‍ಟಿಎಸ್, ಮೊದಲಿಂದಲೂ ರೈತರ ಸಮಸ್ಯೆ ಬಗೆಹರಿ ಸಲು ಶ್ರಮಿಸಿದ್ದೇನೆ. ಮುಂದೆಯೂ ರೈತಪರ ನಿಲುವು ತಾಳುತ್ತೇನೆ. ಸಹಕಾರಿ ಸಚಿವ ನಾದ ಬಳಿಕ ರೈತರೊಂದಿಗೆ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ. ಈಗಿನ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆ ಯುವೆ ಎಂದು ಭರವಸೆ ನೀಡಿದರು.

ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿ ಅತ್ತಳ್ಳಿ ದೇವರಾಜ್, ಕಿರಗಸೂರು ಶಂಕರ್, ಹಾಡ್ಯ ರವಿ, ಕೆ.ಆರ್.ಅರವಿಂದ್, ಅಂಬಳೆ ಮಂಜುನಾಥ್, ಪ್ರಸಾದ್‍ನಾಯಕ, ವರ ಕೋಡು ಕೃಷ್ಣೇಗೌಡ, ಮಹದೇವಸ್ವಾಮಿ, ಅಪ್ಪಣ್ಣ, ಸುಕೇತ್ ರಾಜು, ಕೃಷ್ಣಪ್ಪ, ಜಯ ರಾಮ್, ಶಿವರಾಜು ಪ್ರತಿಭಟನೆಯಲ್ಲಿದ್ದರು.

 

 

Translate »