ಮೈಸೂರು, ಮೇ ೮ (ಆರ್‌ಕೆಬಿ)- ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇ ಜಿಸುವ ನಿಟ್ಟಿನಲ್ಲಿ ಮೈಸೂರಿನ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾ ಲಯ (ಜೆಎಸ್‌ಎಸ್ ಎಸ್‌ಟಿಯು) ಕಾಲೇಜಿನ ಪ್ರಾಜೆಕ್ಟ್ ರೀಚ್‌ಔಟ್ ಸಹಯೋಗದೊಂ ದಿಗೆ ಭಾನುವಾರ ಮೈಸೂರಿನಲ್ಲಿ ಜೆಸಿಯಾನ ೨೦೨೨- ಸೈಕ್ಲೋಥಾನ್ ನಡೆಸಲಾಯಿತು.
ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಉತ್ಸ ವದ ಅಂಗವಾಗಿ ಏರ್ಪಡಿಸಿದ್ದ `ಗೋ ಗ್ರೀನ್ ಮೈಸೂರು ಸೈಕ್ಲೋಥಾನ್’ನಲ್ಲಿ ಮೈಸೂ ರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ೨೫೦ಕ್ಕೂ ಹೆಚ್ಚು ಮಂದಿ ೧೨ ಕಿ.ಮೀ. ದೂರವನ್ನು ಕ್ರಮಿಸಿ, ಜನರಿಗೆ ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಪ್ರಚುರಪಡಿಸಿದರು.
ಸೈಕ್ಲೋಥಾನ್‌ಗೆ ಜಿಲ್ಲಾ ಪೊಲೀಸ್ ವರಿ ಷ್ಟಾಧಿಕಾರಿ ಆರ್.ಚೇತನ್, ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟಿçÃಯ ಸೈಕ್ಲಿಸ್ಟ್ ಎನ್.ಲೋಕೇಶ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಎಸ್‌ಪಿ ಆರ್. ಚೇತನ್, ಯುವಕರು ಸಾಕಷ್ಟು ಕ್ರಿಯಾ ಶಿಲ ರಾಗಿ ವಿವಿಧ ಕಾರ್ಯಕ್ರಮಗಳನ್ನು ಭಾಗವಹಿಸಲು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು. ಯುವಕರು ದೈಹಿಕ ಹಾಗೂ ಶೈಕ್ಷಣ ಕವಾಗಿ ಸದೃಢರಾಗಬೇಕು ಎಂದು ಕರೆ ನೀಡಿದರು.
ಅಂತಾರಾಷ್ಟಿçÃಯ ಸೈಕ್ಲಿಸ್ಟ್ ಎನ್. ಲೋಕೇಶ್ ಮಾತನಾಡಿ, ನಾವು ದೈಹಿಕ ವಾಗಿ ಸದೃಢರಾಗಿರಲು ವ್ಯಾಯಾಮ ಅತ್ಯು ತ್ತಮ ಮಾರ್ಗವಾಗಿದೆ. ಇಂತಹ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವುದು ಬಹಳ ಅಗತ್ಯ. ಇಂತಹ ಚಟುವಟಿಕೆಗಳನ್ನು ನಡೆ ಸುವ ಮೂಲಕ ಸಂಸ್ಥೆಯು ವಿದ್ಯಾರ್ಥಿಗಳಿಗೆ ನೀಡಿದ ಪ್ರೋತ್ಸಾಹ ಮತ್ತು ಬೆಂಬಲದ ಬಗ್ಗೆ ನನಗೆ ಸಂತೋಷವಾಗಿದೆ ಎಂದರು.
ಜೆಎಸ್‌ಎಸ್ ಎಸ್‌ಟಿಯು ಆವರಣದಿಂದ ಆರಂಭವಾದ ಸೈಕ್ಲೋಥಾನ್ ಸೇಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜು, ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆ, ಆಕಾಶವಾಣ ವೃತ್ತ, ರಾಮಸ್ವಾಮಿ ವೃತ್ತ, ಸರಸ್ವತಿಪುರ ಅಗ್ನಿಶಾಮಕ ಠಾಣೆ ಮೂಲಕ ಸಾಗಿ, ಜೆಎಸ್‌ಎಸ್ ಎಸ್‌ಟಿಯು ಆವರಣಕ್ಕೆ ವಾಪಸಾಯಿತು. ಜೆಎಸ್‌ಎಸ್‌ಐಟಿಯು ಕುಲ ಪತಿ ಪ್ರೊ.ಎ.ಎನ್.ಸಂತೋಷ್‌ಕುಮಾರ್ ಅದ್ಯಕ್ಷತೆ ವಹಿಸಿದ್ದರು. ಎಸ್‌ಜೆಸಿಇ ಎಸ್‌ಟಿ ಇಪಿ ಸಿಇಓ ಬಿ.ಶಿವಶಂಕರ್, ವಿದ್ಯಾರ್ಥಿ ಸಂಘಟಕರಾದ ಎ.ಸಿ.ಶ್ರೇಯಸ್, ಚಿರಾಗ್‌ಗೌಡ, ನಮಿತಾ ಜೈನ್, ರಾಹುಲ್ ಇತಾಪೆ, ಅನಿ ದೇಚಮ್ಮ, ಐಸಿರಿ ಪದಕಿ, ಎನ್.ವರುಣ್ ಇನ್ನಿತರರು ಉಪಸ್ಥಿತರಿದ್ದರು.
ಸೈಕ್ಲೋಥಾನ್ ಮೊದಲ ೧೦ ವಿಜೇತರು: ಆರ್.ವಿನಯ್, ಎಸ್.ಟಿ. ಧನಂಜಯ್, ಮಧು ಕುಮಾರ್, ಕಿರಣ್ ಕುಮಾರ್, ಅನೀಶ್, ಅಮೃತ್ ರಾಜ್, ಜಿ.ಕೆ.ಶ್ರೀಕರ್, ಕರಿನ್ ಮಾರ್ಷಲ್, ಉಮರ್ ಷರೀಫ್ ಮತ್ತು ಸತ್ಯ ಗಣೇಶ್. ವಿಜೇತರಿಗೆ ತಲಾ ಸಾವಿರ ರೂ. ನಗದು ಬಹುಮಾನ ಮತ್ತು ಪ್ರಮಾಣಪತ್ರ ಹಾಗೂ ಭಾಗವಹಿಸಿದ ಎಲ್ಲ ರಿಗೂ ಪ್ರಮಾಣಪತ್ರ ವಿತರಿಸಲಾಯಿತು.