ಮೈಸೂರಿನ ಶಂಕರ ಮಠದಲ್ಲಿ ಯಶಸ್ವಿ ಅತಿರುದ್ರ ಮಹಾಯಾಗ
ಮೈಸೂರು

ಮೈಸೂರಿನ ಶಂಕರ ಮಠದಲ್ಲಿ ಯಶಸ್ವಿ ಅತಿರುದ್ರ ಮಹಾಯಾಗ

May 9, 2022

ಮೈಸೂರು, ಮೇ ೮- ಎಪ್ಪತ್ತು ವರ್ಷಗಳ ನಂತರ ಮೈಸೂರಿನ ಶಂಕರ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಅತಿರುದ್ರ ಮಹಾಯಾಗ ಅತ್ಯಂತ ವೈಭವದಿಂದ ನಡೆಯಿತು. ಶೃಂಗೇರಿಯ ಶಾರದ ಪೀಠದ ೩೪ನೇ ಆಚಾರ್ಯರಾಗಿದ್ದ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು ಮೈಸೂರಿನ ಖಿಲ್ಲೆ ಮೊಹಲ್ಲಾದಲ್ಲಿರುವ ಶ್ರೀ ಶಂಕರ ಮಠದಲ್ಲಿ ೭೦ ವರ್ಷಗಳ ಹಿಂದೆ ಅತಿರುದ್ರ ಮಹಾಯಾಗ ನಡೆಸಿದ್ದರು.

ಇದೀಗ ಮೈಸೂರಿನ ವಿಷ್ಣು ಪಾರಾಯಣ ಟ್ರಸ್ಟ್ ಮತ್ತು ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕಳೆದ ಐದು ದಿನಗಳಿಂದ ನಡೆದ ಅತಿರುದ್ರ ಮಹಾಯಾಗವು ಶುಕ್ರವಾರ ೧೧ ಹೋಮಗಳು ಮತ್ತು ಪೂರ್ಣಾಹುತಿಯೊಂದಿಗೆ ಇದೇ ಶಂಕರ ಮಠದಲ್ಲಿ ಯಶಸ್ವಿ ಯಾಗಿ ಸಂಪನ್ನಗೊAಡಿತು.

ಮAತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾ ಧಿಪತಿಗಳಾದ ಶ್ರೀ ಸುಬುದೇಂದ್ರತೀರ್ಥ ಶ್ರೀಪಾದಂಗಳವರು ಮತ್ತು ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಮತ್ತು ಶ್ರೀ ಅರ್ಜುನ ಅವಧೂತರ ಸಾನ್ನಿಧ್ಯದಲ್ಲಿ ಪ್ರತಿನಿತ್ಯ ಗಣಪತಿ ಹೋಮ, ಪುಣ್ಯಾಹವಾಚನ, ಸುಹಾಸಿನಿ ಪೂಜೆ, ಲಲಿತಾ ಸಹಸ್ರನಾಮ ದೊಂದಿಗೆ ೧೨೫ ಋತ್ವಿಕರು ಪ್ರಧಾನ ಅರ್ಚಕರಾದ ವೇ.ಬ್ರ. ಶ್ರೀ ಶ್ರೀನಿವಾಸನ್ ಅವರ ನೇತೃತ್ವದಲ್ಲಿ ಮಹಾಯಾಗ ನಡೆಸಿಕೊಟ್ಟರು. ಶುಕ್ರವಾರ ನಡೆದ ಕೊನೆ ದಿನದ ಕಾರ್ಯ ಕ್ರಮದಲ್ಲಿ ಬೆಲಗೂರು ಮಠದ ಶ್ರೀ ವಿಜಯ ಮಾರುತಿ ಸ್ವಾಮಿಗಳು, ಕೇಂದ್ರದ ಮಾಜಿ ಸಚಿವ ಸದಾನಂದಗೌಡ, ನಿರ್ಮಾಪಕ ಉಮಾಪತಿಗೌಡ, ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಮೈಲಾಕ್ ಅಧ್ಯಕ್ಷ ಎನ್.ವಿ.ಫಣ Ãಶ್, ವಸ್ತುಪ್ರರ್ದಶನ ಪ್ರಾಧಿಕಾರ್ ಅಧ್ಯಕ್ಷ ಹೇಮಂತ್‌ಕುಮಾರ್ ಗೌಡ, ಕಾಂಗ್ರೆಸ್ ಮುಖಂಡರಾದ ಬಿ.ಎಲ್.ಶಂಕರ್, ಹರೀಶ್‌ಗೌಡ, ಮಾಜಿ ಸಂಸದ ವಿಜಯ ಶಂಕರ್, ಬಾಡಿ ಬಿಲ್ಡರ್ ಪಾನಿಪುರಿ ಕಿಟ್ಟಿ, ಮುಕ್ತ ವಿವಿ ಕುಲಪತಿ ವಿದ್ಯಾ ಶಂಕರ್, ಕಾಡ ಅಧ್ಯಕ್ಷ ಶಿವಲಿಂಗಯ್ಯ, ನಿರೂಪಕಿ ದಿವ್ಯಾ ಆಲೂರು ಸೇರಿದಂತೆ ಗಣ್ಯಾತೀತರು, ಚಲನಚಿತ್ರ ನಟರು, ಕಿರು ತೆರೆ ನಟ-ನಟಿಯರು ಪಾಲ್ಗೊಂಡು ಸಾವಿರಾರೂ ಗುರು ಭಕ್ತರ ಸಮ್ಮುಖದಲ್ಲಿ ಗುರುಗಳ ಜೊತೆ ತಮ್ಮ ಬಾಂಧವ್ಯ ಮತ್ತು ಅನುಭವವನ್ನು ಹಂಚಿಕೊAಡರು.

ಶ್ರೀ ವಿಜಯ ಮಾರುತಿ ಸ್ವಾಮಿಗಳು ಮತ್ತು ಪರಮಪೂಜ್ಯ ಶ್ರೀ ಅರ್ಜುನ ಅವಧೂತರು ಆಶೀರ್ವಚನ ನೀಡಿದರು. ನಂತರ ಶ್ರೀ ಅರ್ಜುನ ಅವಧೂತರು ಕಳೆದ ಐದು ದಿನ ಗಳಿಂದ ಸ್ವಚ್ಚತಾ ಕಾರ್ಯ ನಡೆಸಿದ ಮಹಿಳೆಯರ ಪಾದ ಪೂಜೆ ನೆರವೇರಿಸಿದರು. ಪ್ರತಿದಿನ ಸಂಜೆ ಭಜನೆ, ಭರತನಾಟ್ಯ ಸೇರಿದಂತೆ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆಯಿತು. ಪ್ರತಿದಿನ ಎಲ್ಲಾ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

Translate »