ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಸಿದ್ಧತೆ
ಮೈಸೂರು

ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಸಿದ್ಧತೆ

May 9, 2022

ಕೊನೆಗೂ ಕಾಮಗಾರಿ ಆರಂಭಕ್ಕೆ ವರ್ಕ್ ಆರ್ಡರ್ ನೀಡಲಾಗಿದೆ
ಭಾರತೀಯ ಸೈನ್ಯದ ಶೌರ್ಯದ ಪ್ರತೀಕವಾಗಲಿದೆ ಯುದ್ಧ ಸ್ಮಾರಕ

ಮೈಸೂರು,ಮೇ ೮- ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಮೀಪ ನಿರ್ಮಿಸಲು ಉದ್ದೇಶಿಸಿರುವ `ಯುದ್ಧ ಸ್ಮಾರಕ’ ಕಾಮಗಾರಿ ಆರಂಭ ಕಾಲ ಸನ್ನಿಹಿತವಾಗುತ್ತಿದೆ. ಕಾಮಗಾರಿ ಆರಂಭಿಸಲು ವರ್ಕ್ ಆರ್ಡರ್ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಮಾಡಬೇಕೆಂಬ ೨೦ ವರ್ಷಗಳ ಹೋರಾಟಕ್ಕೆ ಇದೀಗ ಪ್ರತಿಫಲ ದೊರೆಯುತ್ತಿದ್ದು, ವರ್ಷದೊಳಗೆ ಜಿಲ್ಲಾಧಿಕಾರಿ ಕಚೇರಿ ಸಮೀಪದ ಪೆರೇಡ್ ಮೈದಾನದಲ್ಲಿ ಯುದ್ಧ ಸ್ಮಾರಕ ತಲೆ ಎತ್ತಲಿದೆ. ಸ್ಮಾರಕ ನಿರ್ಮಾಣಕ್ಕೆ ಹೆರಿಟೇಜ್ ಕಮಿಟಿಯಿಂದ ಸಮ್ಮತಿ ಪಡೆಯಲಾಗಿದ್ದು, ಸ್ಮಾರಕದ ವಿನ್ಯಾಸಕ್ಕೂ ಅನುಮತಿ ದೊರೆತಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ವಿದೇಶ ಪ್ರವಾಸ ಮುಗಿಸಿ ಬಂದ ಬಳಿಕ ಶಂಕುಸ್ಥಾಪನೆ ನೆರವೇರಲಿದೆ ಎಂದು ಮೂಲಗಳು ಖಚಿತಪಡಿಸಿವೆ.

೨೦೦೦ರಲ್ಲಿ ಯುದ್ದ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ವೀಕೇರ್ ನಿವೃತ್ತ ಸೈನಿಕರ ಟ್ರಸ್ಟ್ನ ಎಂ.ಎನ್.ಸುಬ್ರಹ್ಮಣ ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ೨೦೧೦ರಲ್ಲಿ ಮತ್ತೊಮ್ಮೆ ಮನವಿ ಸಲ್ಲಿಸಿದ ಪರಿಣಾಮ ಯುದ್ದ ಸ್ಮಾರಕ ನಿರ್ಮಾಣಕ್ಕೆ ಸ್ಥಳ ಹುಡುಕುವ ಪ್ರಕ್ರಿಯೆ ನಡೆಸಲಾಗಿತ್ತು. ನಂತರ ಅದು ನೆನೆಗುದಿಗೆ ಬಿದ್ದಿತ್ತು. ಆದರೆ ೨೦೧೨ ರಲ್ಲಿ ಮತ್ತೆ ಸ್ಮಾರಕ ನಿರ್ಮಾಣಕ್ಕೆ ಸಂಬAಧಿಸಿದAತೆ ಪ್ರಕ್ರಿಯೆ ಆರಂಭವಾಗಿತ್ತು. ೨೦೧೬ರಲ್ಲಿ ನಿವೃತ್ತ ಯೋಧರೂ ಆಗಿರುವ ಮೈಸೂರು ಉಪ ವಿಭಾಗಾಧಿಕಾರಿಯಾಗಿದ್ದ ಸಿ.ಎಲ್.ಆನಂದ್(ಹಾಲಿ ಬಿಡಿಎ ಕಾರ್ಯದರ್ಶಿ) ಅವರು ಯುದ್ದ ಸ್ಮಾರಕ ನಿರ್ಮಾಣಕ್ಕೆ ಅಗತ್ಯವಾದ ಪ್ರಕ್ರಿಯೆಗಳನ್ನು ಪೂರ್ಣ ಗೊಳಿಸಿದ್ದು, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಸ್ಮಾರಕ ನಿರ್ಮಾಣದ ಹಾದಿ ಸುಗಮವಾಗಿತ್ತು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯ ಎಡ ಭಾಗದಲ್ಲಿರುವ ಸುಮಾರು ಐದು ಎಕರೆ ವಿಸ್ತೀರ್ಣದ ಎನ್‌ಸಿಸಿ ಪರೇಡ್ ಮೈದಾನವನ್ನು ೪ ಚದರ ಅಡಿ ವಿಸ್ತೀರ್ಣದಲ್ಲಿ ಯುದ್ದಸ್ಮಾರಕ ನಿರ್ಮಿಸಲು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅಲ್ಲದೆ ಅಂದು ಜಿಲ್ಲಾಧಿ ಕಾರಿಯಾಗಿದ್ದ ಡಿ.ರಂದೀಪ್ ಅವರಿಂದ ಆ ಜಾಗವನ್ನು ಮಂಜೂರು ಮಾಡಿಸಿ ಕೊಳ್ಳಲಾಗಿತ್ತು. ಈ ಹಿಂದೆ ಮೇಜರ್ ಜನರಲ್ ಸಿ.ಕೆ.ಕರುಂಬಯ್ಯ ನೇತೃತ್ವದಲ್ಲಿ ರಚಿಸಲಾಗಿದ್ದ ಯುದ್ದಸ್ಮಾರಕ ನಿರ್ಮಾಣ ಸಮಿತಿಯ ಸಭೆಯಲ್ಲಿ ಸಿ.ಎಲ್.ಆನಂದ್ ಅವರು, ಜಿಲ್ಲಾಧಿ ಕಾರಿಗಳ ಕಚೇರಿ ಪಕ್ಕದಲ್ಲಿರುವ ಮೈದಾನÀದಲ್ಲಿ ಸ್ಮಾರಕ ನಿರ್ಮಾಣ ನಕ್ಷೆಯನ್ನು ಹಾಜರು ಪಡಿಸಿದ್ದರು. ಇದಕ್ಕೆ ಯುದ್ದಸ್ಮಾರಕ ಸಮಿತಿ ಒಪ್ಪಿಗೆ ಸೂಚಿಸಿದ್ದರಿಂದ ಜಿಲ್ಲಾಡಳಿತ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಅಂದಿನ ಸರ್ಕಾರ ಯುದ್ದ ಸ್ಮಾರಕ ನಿರ್ಮಾಣಕ್ಕೆ ೧.೪೧ ಕೋಟಿ ರೂ., ಅನುಧಾನ ಬಿಡುಗಡೆ ಮಾಡಲು ಸಮ್ಮತಿಸಿ, ಮುಂಗಡವಾಗಿ ೫೦ ಲಕ್ಷ ರೂ. ಬಿಡುಗಡೆ ಮಾಡಿತ್ತು.

ಒಂದೂವರೆ ಕೋಟಿ ರೂ. ಮೌಲ್ಯದ ಕಲ್ಲು: ಸ್ಮಾರಕ ನಿರ್ಮಾಣಕ್ಕಾಗಿ ಚಾಮರಾಜ ನಗರ ಜಿಲ್ಲೆಯ ಕ್ವಾರಿಯಿಂದ ೩೩ ಕ್ಯೂಬಿಕ್ ಮೀಟರ್ ಉತ್ಕೃಷ್ಟ ಕಲ್ಲುಗಳ ಸ್ಲಾಬ್ ಮೈಸೂರಿಗೆ ತರಲಾಗಿದೆ. ಸ್ಮಾರಕವನ್ನು ಕಾಂಕ್ರಿಟ್ ಕಟ್ಟಡವಾಗಿಸಬಾರದೆಂಬ ಉದ್ದೇಶ ದಿಂದ ಉತ್ಕೃಷ್ಠ ಕಲ್ಲಿನ ಸ್ಲಾಬ್ ಬಳಸಿ ಪಾರಂಪರಿಕ ಶೈಲಿಯಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಚಾಮರಾಜನಗರ ಎಡಿಸಿಯಾಗಿದ್ದ ಸಿ.ಎಲ್.ಆನಂದ್ ಚಾಮರಾಜನರದ ಜಿಲ್ಲೆಯ ಅಮಚವಾಡಿ ನಿವಾಸಿ ಕ್ವಾರಿ ಮಾಲೀಕರಾದ ಹೆಚ್.ಎಂ. ಪುಟ್ಟಮಾದಯ್ಯ ಬಿನ್ ಪಟೇಲ್ ಮಾದಪ್ಪ (೮೦) ಎಂಬುವರು ೩೩ ಕ್ಯೂಬಿಕ್ ಮೀಟರ್ ಕಪ್ಪು ಶಿಲೆ(ಉತ್ಕೃಷ್ಠ ಕಲ್ಲ)ಯನ್ನು ಸರ್ಕಾರಕ್ಕೆ ರಾಜದನ ಹಾಗೂ ವಿವಿಧ ಶುಲ್ಕ ತಾವೇ ಪಾವತಿಸಿ ಉಚಿತವಾಗಿ ಸ್ಮಾರಕ ನಿರ್ಮಾಣಕ್ಕೆ ಕೊಡುಗೆ ಕೊಡಿಸಿದ್ದರು. ಅಲ್ಲದೆ ಕ್ವಾರಿಯಿಂದ ೩೦೦ ಟನ್ ತೂಕದ ಕಚ್ಛಾಶಿಲೆಯನ್ನು ಚಾಮರಾಜನಗರದ ಎಸ್‌ವಿಜಿ ಗ್ರಾನೈಟ್ಸ್ ಮಾಲೀಕ ಎ.ಶ್ರೀನಾಥ್ ಬಿನ್ ಶಿವಶಂಕರ್‌ರೆಡ್ಡಿ ಯಾವುದೇ ಶುಲ್ಕ ಪಡೆಯದೇ ಸ್ಮಾರಕ ನಿರ್ಮಾಣಕ್ಕೆ ಅನುಗುಣಾಗಿ ಬೇಕಾದ ಆಕಾರದಲ್ಲಿ ಕತ್ತರಿಸಿಕೊಟ್ಟಿದ್ದರು. ಕಲ್ಲು ಕತ್ತರಿಸಲು ನೀಡಬೇಕಾಗಿದ್ದ ಶುಲ್ಕ ಸೇರಿದಂತೆ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದ ೩೦೦ ಟನ್ ತೂಕದ ಕಲ್ಲನ್ನು ಸ್ಮಾರಕ ನಿರ್ಮಾಣದ ಸ್ಥಳಕ್ಕೆ ಕಳೆದ ೫ ತಿಂಗಳ ಹಿಂದೇಯೇ ತರಲಾಗಿದೆ.

೪೮ ಅಡಿ ಎತ್ತರ: ಸ್ಮಾರಕ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ೪೫ ಅಡಿ ಎತ್ತರ ಇರಲಿದೆ. ೩೩ ಕ್ಯೂಬಿಕ್ ಮೀಟರ್ ಎತ್ತರ ಕಲ್ಲನ್ನು ಕೂರಿಸಿದರೆ ೩೩ ಅಡಿ ಎತ್ತರ ಆಗಲಿದೆ. ಅದರ ಕೆಳಗೆ ೧೦ ಅಡಿ ಫೌಂಡೇಷನ್ ಇರುತ್ತದೆ. ಕಲ್ಲಿನ ಮೇಲೆ ೫ ಅಡಿ ಎತ್ತರ ಅಶೋಕ ಲಾಂಛನ ಅಳವಡಿಸಲಾಗುತ್ತದೆ. ದೆಹಲಿಯ ನ್ಯಾಷನಲ್ ಮ್ಯೂಸಿಯಂ ನಲ್ಲಿರುವ ಸಾರನಾಥ ಅಶೋಕ್ ಎಂಬ್ಲA ಅನ್ನು ಮೈಸೂರಿನ ಯುದ್ಧ ಸ್ಮಾರಕದಲ್ಲಿ ಅಳವಡಿಸಲಾಗುತ್ತದೆ. ಸ್ಮಾರಕಕ್ಕೆ ಬಳಸುವ ಕಲ್ಲಿಗೆ ಪಾಲಿಶ್ ಮಾಡಿದ ನಂತರ ಅಮೇರಿಕನ್ ವೈಟ್ ಪೇಯಿಂಟ್‌ನಿAದ ಅಕ್ಷರ ಬರೆಯುವುದರಿಂದ ಲೈಫ್ ಲಾಂಗ್ ಅಕ್ಷರ ಮಾಸುವುದಿಲ್ಲ. ಪಾಲಿಶ್ ಮಾಡಿದ ನಂತರ ಜೆಟ್ ಬ್ಲಾಕ್ ಕಲರ್ ಆಗುತ್ತದೆ.

ಎಂ.ಟಿ.ಯೋಗೇಶ್‌ಕುಮಾರ್

Translate »