ಮೈಸೂರಲ್ಲಿ ಗುಡ್‌ಫ್ರೈಡೇ ಆಚರಣೆ
ಮೈಸೂರು

ಮೈಸೂರಲ್ಲಿ ಗುಡ್‌ಫ್ರೈಡೇ ಆಚರಣೆ

April 16, 2022

ಮೈಸೂರು, ಏ.೧೫(ಆರ್‌ಕೆ)- ಶುಭ ಶುಕ್ರವಾರ (ಗುಡ್‌ಫ್ರೆöÊಡೇ)ದ (ಏ.೧೫) ಪ್ರಯುಕ್ತ ಮೈಸೂರಿನಎಲ್ಲಾಚರ್ಚ್ ಗಳಲ್ಲಿ ಕ್ರೆöÊಸ್ತ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಮಾಡಿದರು.

ಮೈಸೂರು ಪ್ರಾಂತದ ಬಿಷಪ್‌ರೆವರೆಂಡ್ ಫಾದರ್ ಕೆ.ಎ.ವಿಲಿಯಂ ನೇತೃತ್ವದಲ್ಲಿ ಸೆಂಟ್ ಫಿಲೋಮಿನಾಸ್‌ಚರ್ಚ್ನಲ್ಲಿ ಮುಂಜಾನೆ ೫ ಗಂಟೆಯಿAದಲೇಕನ್ನಡ, ಇಂಗ್ಲಿಷ್, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಯೇಸುಕ್ರಿಸ್ತನ ಮುಂಭಾಗಕ್ಯಾAಡಲ್ ಹಚ್ಚಿ ನಾಡಿನ ಸಮಸ್ತ ಜನರಿಗೆ ಒಳಿತಾಗಲಿ, ಸರ್ವರಲ್ಲಿ ಸೋದರತ್ವ, ಸಹ ಬಾಳ್ವೆ ನೆಲೆಸಲಿ ಎಂದು ಪ್ರಾರ್ಥಿಸಿದರು.

ಇಂದು ಉಪವಾಸ ವ್ರತ ಆಚರಿಸಿದ ಕೆಲ ಕ್ರೆöÊಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಮುಗಿಸಿದ ಬಳಿಕ ಉಪಾ ಹಾರ, ಗಂಜಿ ಸೇವಿಸಿದ ನಂತರವಷ್ಟೇ ಸಂಜೆ ಊಟ ಮಾಡಿದರು. ಭಾನುವಾರಈಸ್ಟರ್ ಸಂಭ್ರಮಾಚರಣೆಆಚರಿಸಲಿದ್ದು, ಎಲ್ಲಾಕ್ರೆöÊಸ್ತ ದೇವಾಲಯಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ,

ಲಷ್ಕರ್ ಮೊಹಲ್ಲಾದ ಸೆಂಟ್ ಫಿಲೋ ಮಿನಾ ಚರ್ಚ್, ಬಿ.ಎನ್.ರಸ್ತೆಯಗ್ರಾಮಾಂತರ ಬಸ್ ನಿಲ್ದಾಣ ಬಳಿಯ ಸೆಂಟ್ ಬಾರ್ತ ಲೋಮಿಯಾ ವೆಸ್ಲಿ ಚರ್ಚ್, ಎಫ್‌ಟಿಎಸ್ ಸರ್ಕಲ್ ಬಳಿಯ ಕರುಣಾಪುರಚರ್ಚ್, ಆರ್.ಎಸ್.ನಾಯ್ಡು ನಗರ, ರಾಜೀವ ನಗರ, ಗಾಯತ್ರಿಪುರಂ, ಹಿನಕಲ್, ಹುಣಸೂರುರಸ್ತೆ, ದಟ್ಟಗಳ್ಳಿ, ರಾಮಕೃಷ್ಣನಗರ ಸೇರಿದಂತೆ ಮೈಸೂರು ನಗರದಾದ್ಯಂತ ವಿವಿಧಕ್ರೆöÊಸ್ತ ದೇವಾಲಯಗಳನ್ನು ವಿದ್ಯುದ್ದೀಪ ಗಳಿಂದ ಅಲಂಕರಿಸಲಾಗಿತ್ತು. ತಳಿರು-ತೋರಣಗಳಿಂದ ಶೃಂಗರಿಸಲಾಗಿತ್ತು.

ಗುಡ್‌ಫ್ರೆöÊಡೇ ಅಂಗವಾಗಿ ಬಿಷಪ್ ಸೇರಿದಂತೆಎಲ್ಲಾ ಚರ್ಚ್ಗಳ ಫಾದರ್ ಗಳನ್ನು ಭೇಟಿ ಮಾಡಿಕ್ರೆöÊಸ್ತ ಸಮು ದಾಯದವರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದುದು ಕಂಡುಬAದಿತು. ಸಾಲು-ಸಾಲು ರಜೆಇರುವುದರಿಂದ ಕೇರಳ, ತಮಿಳುನಾಡು ಸೇರಿದಂತೆ ವಿವಿಧೆಡೆಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುವು ದರಿಂದ ಸೆಂಟ್ ಫಿಲೋಮಿನಾಚರ್ಚ್ಗೆ ಸಾವಿ ರಾರು ಮಂದಿ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ.

ಗುಡ್‌ಫ್ರೆöÊಡೇ ದಿನವಾದಇಂದು ಮೈಸೂರಿನ ಹೋಟೆಲ್‌ಗಳು, ಅರಮನೆ, ಮೃಗಾಲಯ, ಚಾಮುಂಡಿಬೆಟ್ಟಗಳಿಗೆ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಪ್ರವಾಸಿ ತಾಣಗಳಲ್ಲಿ ಭರ್ಜರಿ ವ್ಯಾಪಾರ-ವಹಿವಾಟು ನಡೆದು ವರ್ತಕರಲ್ಲಿ ಸಂತಸ ಮೂಡಿದೆ. ಟರ‍್ಸ್ಅಂಡ್ ಟ್ರಾವೆಲ್ಸ್ಗಳ ವಾಹನ ಬುಕ್ ಮಾಡಿಕೊಂಡು ಮೈಸೂರು ಮತ್ತು ಸುತ್ತಮುತ್ತಲ ಪ್ರವಾಸಿ ಕೇಂದ್ರಗಳಿಗೆ ಟ್ರಿಪ್ ಮಾಡುತ್ತಿದ್ದುದುಇಂದುಕAಡುಬAದಿತ್ತು.

ಆಯಾ ಪೊಲೀಸ್‌ಠಾಣಾಇನ್ಸ್ಪೆಕ್ಟರ್ ಗಳು ತಮ್ಮ ವ್ಯಾಪ್ತಿಯ ಚರ್ಚ್ಗಳಿಗೆ ಸಿಬ್ಬಂದಿ ಗಳನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದರಲ್ಲದೆ, ಯಾವುದೇಅಹಿತಕರಘಟನೆ ನಡೆಯದಂತೆಕಟ್ಟೆಚ್ಚರ ವಹಿಸಿದ್ದರು.
ನಾಳೆ(ಏ.೧೬) ಹೋಲಿ ಶನಿವಾರವೂ, ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಭಾನುವಾರಈಸ್ಟರ್ ಪ್ರಯುಕ್ತಎಲ್ಲಾ ಚರ್ಚ್ಗಳ ಆವರಣದಲ್ಲಿ ಸಂಭ್ರಮದ ಮೆರವಣ ಗೆ ನಂತರ ಭಕ್ತಿ ಭಾವದ ಪೂಜೆ, ಪ್ರೇಯರ್‌ಆಯೋಜಿಸಲಾಗಿದೆ.

Translate »