ನಂಜನಗೂಡು: ಮಹಿಳೆ ಮೇಲೆ ಅತ್ಯಾಚಾರ
ಮೈಸೂರು

ನಂಜನಗೂಡು: ಮಹಿಳೆ ಮೇಲೆ ಅತ್ಯಾಚಾರ

April 16, 2022

ನಂಜನಗೂಡು, ಏ.೧೫- ಜಮೀನಿನಲ್ಲಿಕುರಿ ಮೇಯಿಸುತ್ತಿದ್ದ ಮಹಿಳೆ ಮೇಲೆ ವ್ಯಕ್ತಿಯೋರ್ವಅತ್ಯಾಚಾರವೆಸಗಿದಘಟನೆ ನಂಜನಗೂಡುತಾಲೂಕಿನತಗಡೂರುಗ್ರಾಮದಲ್ಲಿ ನಡೆದಿರುವುದಾಗಿತಡವಾಗಿ ವರದಿಯಾಗಿದೆ.

ಈ ಘಟನೆಯು ಏ.೧೧ರಂದು ನಡೆಯಿತುಎಂದು ಹೇಳಲಾಗಿದ್ದು, ಮೈಸೂರಿನಕೆ.ಆರ್.ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಇAದು ನೀಡಿದ ಹೇಳಿಕೆಯಂತೆ ದೊಡ್ಡಕವಲಂದೆಠಾಣೆ ಪೊಲೀಸರುತಗಡೂರುಗ್ರಾಮದವನೇಆದರಾಜುಎಂಬಾತನ ವಿರುದ್ಧಅತ್ಯಾಚಾರ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ವಿವರ:ತಗಡೂರುಗ್ರಾಮದ ೪೫ ವರ್ಷ ವಯಸ್ಸಿನ ಮಹಿಳೆ ಏ.೧೧ರಂದು ಜಮೀನಿನಲ್ಲಿಕುರಿ ಮೇಯಿಸುತ್ತಿದ್ದ ವೇಳೆ ಅಲ್ಲಿಗೆ ತೆರಳಿದ ಅದೇಗ್ರಾಮದರಾಜು(೫೫) ಎಂಬಾತ ಮಹಿಳೆ ಮೇಲೆ ಅತ್ಯಾಚಾರ ವೆಸಗಿದನೆಂದುದೂರಿನಲ್ಲಿ ಹೇಳಲಾಗಿದೆ. ಸಂಜೆ ಕುರಿಗಳು ಮಾತ್ರ ಮನೆಗೆ ವಾಪಸ್ಸಾಗಿದ್ದು, ಮಹಿಳೆ ಬಾರದ ಹಿನ್ನಲೆಯಲ್ಲಿಆಕೆಯ ಪತಿಜಮೀನಿಗೆ ತೆರಳಿ ಹುಡುಕಾಡಿದಾಗ ಮಹಿಳೆ ಅಸ್ವಸ್ಥಳಾಗಿ ಬಿದ್ದಿದ್ದಳು ಎನ್ನಲಾಗಿದ್ದು, ನಂಜನಗೂಡು ಸರ್ಕಾರಿಆಸ್ಪತ್ರೆಯಲ್ಲಿ ಪ್ರಥಮಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನಚಿಕಿತ್ಸೆಗಾಗಿ ಮೈಸೂರಿನಕೆ.ಆರ್.ಆಸ್ಪತ್ರೆಗೆಆಕೆಯನ್ನುದಾಖಲಿಸಲಾಗಿದೆ. ಸಂತ್ರಸ್ಥ ಮಹಿಳೆ ಇಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »