ಕಾರ್ಖಾನೆಗಳ ರಾಸಾಯನಿಕಯುಕ್ತ, ಕೊಳಚೆ ನೀರಿನಿಂದಾಗಿ ಮೀನುಗಳ ಮಾರಣಹೋಮ; ದುರ್ವಾಸನೆ ಬೀರುತ್ತಿರುವಕೆರೆ
ಮೈಸೂರು

ಕಾರ್ಖಾನೆಗಳ ರಾಸಾಯನಿಕಯುಕ್ತ, ಕೊಳಚೆ ನೀರಿನಿಂದಾಗಿ ಮೀನುಗಳ ಮಾರಣಹೋಮ; ದುರ್ವಾಸನೆ ಬೀರುತ್ತಿರುವಕೆರೆ

April 16, 2022

ಮತ್ತೆಕೊಚ್ಚೆಗುಂಡಿಯಾಗುತ್ತಿರುವ ಹೆಬ್ಬಾಳ ಕೆರೆ

ಮೈಸೂರು,ಏ.೧೫-ಇನ್ಫೋಸಿಸ್ ಪ್ರತಿಷ್ಠಾನದಿಂದ ಪುನರುಜ್ಜೀವನಗೊಂಡ ಮೈಸೂರಿನ ಹೆಬ್ಬಾಳ ಕೆರೆಯನ್ನು ಮತ್ತೆ ಹಾಳು ಮಾಡಲಾಗಿದೆ. ಕೆರೆಕೊಚ್ಚೆಗುಂಡಿಯAತಾಗಿ ಲಕ್ಷಾಂತರ ಮೀನುಗಳ ಮಾರಣಹೋಮವೇ ನಡೆದಿದೆ.

ಬರೋಬ್ಬರಿ ೧೦೮ ಕೋಟಿರೂ.ವೆಚ್ಚದಲ್ಲಿಅಭಿವೃದ್ಧಿಯಾಗಿ, ಅಂದದಿAದ ಕಂಗೊಳಿಸುತ್ತಿರುವ ಹೆಬ್ಬಾಳ ಕೆರೆಯ ಸುಂದರ ವಾತಾವರಣ ಈಗ ಸತ್ತ ಮೀನುಗಳ ದುರ್ವಾ ಸನೆಯತಾಣವಾಗಿ ಬದಲಾಗಿದೆ. ಕೆರೆಯಲ್ಲಿದ್ದ ಕಸ-ಕಡ್ಡಿ, ಪಾಚಿತಿಂದು ನೀರನ್ನು ಶುಚಿಯಾಗಿಡಬೇಕಾಗಿದ್ದ ಹಲವು ಬಗೆಯ ಮೀನುಗಳು, ಒಳಚರಂಡಿ ಹಾಗೂ ಕಾರ್ಖಾನೆಗಳ ರಾಸಾಯನಿಕ ಮಿಶ್ರಿತ ನೀರು ಸೇವಿಸಿ ಸತ್ತುತೇಲಾಡುತ್ತಿವೆ.

ಸುಮಾರು ೫೧ ಎಕರೆ ವಿಸ್ತೀರ್ಣದ ಹೆಬ್ಬಾಳ ಕೆರೆಯು ೩೬ ಎಕರೆಜಲಾವೃತ ಪ್ರದೇಶ, ೮ ಎಕರೆ ಹಸಿರು ಪ್ರದೇಶ ಹಾಗೂ ೨.೧ ಕಿ.ಮೀ ಉದ್ದ ವಾಕಿಂಗ್ ಪಾಥ್ ಹೊಂದಿದ್ದು, ೨.೧ ಎಕರೆ ಪ್ರದೇಶದಲ್ಲಿತ್ಯಾಜ್ಯ ನೀರಿನ ಸಂಸ್ಕರಣಾಘಟಕವಿದ್ದರೂ ಶುದ್ಧ ನೀರಿಗಿಂತಕಲುಷಿತ ನೀರೇ ಹೆಚ್ಚಾಗಿ ಕೆರೆಯನ್ನು ಆವರಿಸಿರು ವುದು ಜಲಚರಗಳಿಗೆ ಮಾರಕವಾಗಿದೆ.

ಕೆಐಎಡಿಬಿ ಅಧಿಕಾರಿಗಳು ನೇರ ಹೊಣೆ: ಕಳೆದ ಎರಡ್ಮೂರು ದಿನಗಳಿಂದ ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿದ್ದು, ಕೆರೆ ಸುತ್ತಲಿನ ಕಾರ್ಖಾನೆಗಳು ಹಾಗೂ ಬಡಾವಣೆಗಳಿಂದ ಹರಿದು ಬರುವಕಲುಷಿತ ನೀರುಇಷ್ಟೆಲ್ಲಾಅನಾಹುತಕ್ಕೆಕಾರಣ ವಾಗಿದೆ. ಕರ್ನಾಟಕ ಇಂಡಸ್ಟಿçಯಲ್
ಏರಿಯಾಡೆವಲಪ್‌ಮೆAಟ್ ಬೋರ್ಡ್(ಕೆಐಎಡಿಬಿ) ಅಧಿಕಾರಿಗಳ ಬೇಜಾವಾಬ್ದಾರಿಯೇಇದಕ್ಕೆ ಮೂಲ ಕಾರಣಎಂದು ಹೆಬ್ಬಾಳ ಕೆರೆ ಹಿತರಕ್ಷಣಾ ಸಮಿತಿದೂರಿದೆ. ಹೆಬ್ಬಾಳ ಕೆರೆ ಮತ್ತೆ ಕೊಚ್ಚೆ ಗುಂಡಿಯAತಾಗುತ್ತಿರುವುದಕ್ಕೆ ಹಾಗೂ ಲಕ್ಷಾಂತರ ಮೀನುಗಳ ಸಾವಿಗೆ ಕೆಐಎಡಿಬಿ ಅಧಿಕಾರಿಗಳು ನೇರ ಹೊಣೆಯಾಗಿದ್ದಾರೆ. ಕೆರೆ ಸುತ್ತಲಿನ ಕಾರ್ಖಾನೆಗಳಿಂದ ಬರುವರಾಸಾಯನಿಕಯುಕ್ತ ನೀರನ್ನುತಡೆಯುವಂತೆ ಹತ್ತಾರು ಬಾರೀ ಮನವಿ ಮಾಡಿದರುಯಾವುದೇ ಪ್ರಯೋಜನವಾಗಿಲ್ಲ. ಕಾರ್ಖಾನೆ ಮಾಲೀಕರ ವಿರುದ್ಧಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದಾರೆ. ಕೆರೆಯಲ್ಲಿನ ಪ್ರಾಣ -ಪಕ್ಷಿಗಳು ಹಾಗೂ ವಾಯುವಿಹಾರಿಗಳ ಬಗ್ಗೆ ಕನಿಷ್ಟ ಕಾಳಜಿ ಇವರಿಗಿಲ್ಲಎಂದುಕೆರೆ ಹಿತರಕ್ಷಣಾ ಸಮಿತಿಅಧ್ಯಕ್ಷಎಂ.ಆರ್.ರವಿಕುಮಾರ್‌ಕಿಡಿಕಾರಿದರು.

ಪ್ರತಿಫಲವಿಲ್ಲ: ಸಂಪೂರ್ಣವಾಗಿ ಹೂಳು ತುಂಬಿಕೊAಡಿದ್ದಕೆರೆಯನ್ನು ಸರ್ಕಾರದಜೊತೆಗೂಡಿ ಇನ್ಫೋಸಿಸ್ ಪ್ರತಿಷ್ಠಾನ ಕೊಟ್ಯಾಂತರರೂ. ಹಣಖರ್ಚು ಮಾಡಿಅಭಿವೃದ್ಧಿ ಮಾಡಿದೆ. ಕೆರೆಯ ಸುತ್ತಲೂ ೮ ಸಾವಿರ ಸಸಿಗಳ ನೆಟ್ಟು ಪೋಷಣೆಜೊತೆಗೆಕೆರೆಗೆ ಭದ್ರತೆಯನ್ನು ನೀಡುತ್ತಿದೆ. ಇನ್ಫೋಸಿಸ್ ಕೆರೆಯನ್ನು ಮುತುವರ್ಜಿ ವಹಿಸಿ ಸುಂದರತಾಣವನ್ನಾಗಿ ಮಾಡಿದ್ದಕ್ಕೂ ಸಾರ್ಥಕತೆಇಲ್ಲದಂತಾಗಿದೆ.

ಒಂದೆಡೆ ಸುತ್ತ-ಮುತ್ತಲಿನ ಬಡಾವಣೆ ನಿವಾಸಿಗಳು ತ್ಯಾಜ್ಯತಂದು ಸುರಿದರೆ, ಕಾರ್ಖಾನೆಗಳ ಮಾಲೀಕರುಕಲುಷಿತ ನೀರನ್ನು ಬಿಡುತ್ತಿದ್ದಾರೆ. ಹಿರಿಯರು, ಮಹಿಳೆ ಯರು, ಮಕ್ಕಳು ವಾಯುವಿಹಾರಕ್ಕೆ ಹೋಗಲು ಈಗ ಹಿಂದೆಮುAದೆ ನೋಡುತ್ತಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ಫೋಸಿಸ್‌ನ ಕೊಡುಗೆಯನ್ನು ಕಾಪಾಡಿಕೊಳ್ಳುವ ಯೋಗ್ಯತೆ ನಮಗೆ ಇಲ್ಲದಾಯಿತಲ್ಲಎಂದುಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆರೆ ಕೊಚ್ಚೆ ನೀರಿನಿಂದದುರ್ವಾಸನೆ ಬೀರುತ್ತಾ, ಸತ್ತು ಬಿದ್ದಿರುವ ಲಕ್ಷಾಂತರ ಮೀನು ಗಳನ್ನು ನೋಡಿದರೆ, ಸಮಾಜಕ್ಕೆ ಏನು ಮಾಡಿದರೇನು ಪ್ರಯೋಜನಎಂಬAತಾಗಿದೆಎAದು ಸಮಿತಿ ಪದಾಧಿಕಾರಿಗಳಾದ ರಾಘವೇಂದ್ರ(ಡೈರಿ), ಪ್ರಸನ್ನ, ಕೃಷ್ಣ, ರವಿ ಭೂಪತಿ ಹಾಗೂ ವಾಯು ವಿಹಾರಕ್ಕೆ ಬಂದ ಹಲವರು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆ:ಅಭಿವೃದ್ಧಿಯಾಗಿದ್ದಕೆರೆಯ ವಿನಾಶಕ್ಕೆ ಕಾರಣವಾಗಿರುವ ಕಾರ್ಖಾನೆಗಳು ಹಾಗೂ ಇದರ ಬಗ್ಗೆ ಬೇಜವಬ್ದಾರಿಯುತವಾಗಿ ವರ್ತಿಸುತ್ತಿರುವಕೆಐಎಡಿಬಿ ಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಕೆರೆಯ ದುಸ್ಥಿತಿಯನ್ನು ನೋಡಿದರೆ ಸಂಕಟ ವಾಗುತ್ತದೆ. ಕೆರೆಯ ೬ ಕಡೆಕಲುಷಿತ ನೀರಿನ ಶುದ್ಧೀಕರಣ ಯಂತ್ರಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದರೂ, ಕಲುಷಿತ ನೀರು ಹರಿವಿನ ಪ್ರಮಾಣವೇ ಹೆಚ್ಚಾಗಿದೆ. ಯುಜಿಡಿ ನೀರಿನ ಪೈಪ್‌ಲೈನ್‌ಗಳನ್ನು ಕೆರೆಗೆ ಬಿಡಲಾಗಿದೆ. ದುರ್ವಾಸನೆಯಿಂದ ಸುತ್ತ-ಮುತ್ತಲ ವಸತಿ ಬಡಾವಣೆಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡಬಹುದಾದ ಭೀತಿಎದುರಾಗಿದೆ.

ಮೋಹನ್‌ಕಾಯಕ

Translate »