ಈಶ್ವರಪ್ಪರಾಜೀನಾಮೆ
ಮೈಸೂರು

ಈಶ್ವರಪ್ಪರಾಜೀನಾಮೆ

April 16, 2022

ಮುಖ್ಯಮಂತ್ರಿ ಬೊಮ್ಮಾಯಿಗೆರಾಜೀನಾಮೆ ಸಲ್ಲಿಕೆ

ಉನ್ನತ ಮಟ್ಟದತನಿಖೆಗೆ ಸಿಎಂಗೆ ಮನವಿ

ಇಂದಿನಿAದ ಹಿಂದುತ್ವದ ಪರ ಹೋರಾಟ

ಬೆಂಗಳೂರು, ಏ.೧೫(ಕೆಎಂಶಿ)- ಬೆಳ ಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್‌ಆತ್ಮಹತ್ಯೆ ಪ್ರಕರಣಕ್ಕೆ ಸಂಬA ಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವಕೆ.ಎಸ್. ಈಶ್ವರಪ್ಪಅವರುತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶಿವಮೊಗ್ಗದಿಂದ ನಗರಕ್ಕೆ ಮರಳು ತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಅವರ ಸರ್ಕಾರಿ ನಿವಾಸಕ್ಕೆ ತೆರಳಿ ತಮ್ಮರಾಜೀನಾಮೆ ಪತ್ರ ಸಲ್ಲಿಸಿ ದರು. ರಾಜೀನಾಮೆ ಪತ್ರ ನೀಡಿದ ನಂತರ ಮುಖ್ಯಮಂತ್ರಿಅವರೊAದಿಗೆ ಕೆಲಕಾಲ ಮುಖಾಮುಖಿ ಚರ್ಚೆ ನಡೆಸಿದರು. ರಾಜೀನಾಮೆ ನೀಡಿದ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದಈಶ್ವರಪ್ಪ, ಪ್ರಕರಣಕ್ಕೆ ಸಂಬAಧಿಸಿದAತೆ ಉನ್ನತ ಮಟ್ಟದತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದೇನೆ. ಇಡೀರಾಜ್ಯದಜನತೆಇದೊಂದು ಷಡ್ಯಂತರವೆAದೇ ಹೇಳುತ್ತೆ. ಸತ್ಯಾಸತ್ಯತೆ ಹೊರಬರಬೇಕು ಎಂಬ ಕಾರಣಕ್ಕೆಸ್ವಯಂಪ್ರೇರಿತವಾಗಿ ಮಂತ್ರಿ ಸ್ಥಾನ ತ್ಯಜಿಸಿ, ತನಿಖೆ ಮುಕ್ತವಾಗಿ ನಡೆಯಲಿ ಎಂದು ಹಾದಿ ಮಾಡಿಕೊಟ್ಟಿದ್ದೇನೆ. ಕಾಂಗ್ರೆಸ್ ಮುಖಂಡರುಕುಡಿದ ಅಮಲಿನಲ್ಲಿ ಆರೋಪಗಳನ್ನು ಮಾಡುತ್ತಿದ್ಧಾರೆ. ಅವರಎಲ್ಲ ಆರೋಪಗಳಿಗೂ ತನಿಖಾ ವರದಿಯೇಅಂತಿಮಉತ್ತರ ನೀಡುತ್ತದೆ. ಪ್ರಕರಣ ಬಯಲಾಗುತ್ತಿದ್ದಂತೆ ನಾನು ರಾಜೀನಾಮೆ ನೀಡಲು ಮುಂದಾಗಿದ್ದೆ. ಆದರೆ, ಮುಖ್ಯಮಂತ್ರಿಅವರೇಒAದೆರಡು ದಿನ ಕಾಯುವಂತೆ ಸಲಹೆ ಮಾಡಿದ್ದರು. ಸಾವಿನ ಹಿಂದೆಯಾರಿದ್ದಾರೆ. ಇದನ್ನು ಏಕೆ ಮಾಡಿಸಿದ್ದಾರೆ ಎಂಬೆಲ್ಲ ಸತ್ಯ ಹೊರಬೀಳಬೇಕು. ನಾನು ಷಡ್ಯಂತರಕ್ಕೆತಾತ್ಕಾಲಿಕವಾಗಿ ಬಲಿಯಾಗಿದ್ದೇನೆ.ಅಧಿಕಾರ ಬಿಟ್ಟಿದ್ದೇನೆ. ಆದರೆ, ಸುಮ್ಮನೆ ನಾನು ಕೂರುವುದಿಲ್ಲ. ನಾಳೆಯಿಂದಲೇ ಹಿಂದುತ್ವದ ಪರ ನನ್ನ ಹೋರಾಟ ಮುಂದುವರೆಯಲಿದೆಎAದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿವಿಧ ಕಾರಣಗಳಿಗೆ ಮೂವರು ಸಚಿವರುತಲೆದಂಡತೆತ್ತಿದ್ದಾರೆ. ಈ ಹಿಂದೆ ಭ್ರಷ್ಟಾಚಾರಆರೋಪದ ಮೇಲೆ ಅಬ್ಕಾರಿ ಸಚಿವರಾಗಿದ್ದಎಚ್.ನಾಗೇಶ್‌ತಮ್ಮ ಸ್ಥಾನ ತೊರೆಯಬೇಕಾಯಿತು. ನಂತರ ಲೈಂಗಿಕ ಸಿಡಿ ಪ್ರಕರಣದಲ್ಲಿರಮೇಶ್ ಜಾರಕಿಹೊಳಿ ಮಂತ್ರಿಸ್ಥಾನ ತ್ಯಜಿಸಿದ್ದರೆ, ಈಗ ಬೊಮ್ಮಾಯಿ ಸಂಪುಟದಲ್ಲಿ ಶೇ. ೪೦ರಷ್ಟು ಕಮಿಷನ್‌ಆರೋಪದಲ್ಲಿಈಶ್ವರಪ್ಪ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.

ಶಿವಮೊಗ್ಗದಿAದ ಹೊರಟಈಶ್ವರಪ್ಪತಿಪಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿವಾಸಕ್ಕೆ ತೆರಳಿ ಸ್ವಲ್ಪಕಾಲ ಅವರೊಂದಿಗೆ ಸಮಾಲೋಚನೆ ನಡೆಸಿ ನಂತರತುಮಕೂರಿನ ಸಿದ್ಧಗಂಗಾಮಠಕ್ಕೆ ಭೇಟಿಕೊಟ್ಟು ಶ್ರೀಗಳ ಆಶೀರ್ವಾದ ಪಡೆದರು. ನಂತರಅಲ್ಲಿAದ ನೇರವಾಗಿ ನಗರಕ್ಕೆ ಬಂದು ಮುಖ್ಯಮಂತ್ರಿ ಭೇಟಿಯಾಗಿರಾಜೀನಾಮೆ ಸಲ್ಲಿಸಿದರು. ಇಂದಿನಿAದ ಮೂರು ದಿನಗಳ ಕಾಲ ಪ್ರವಾಸಕ್ಕೆ ತೆರಳಿದ್ದ ಮುಖ್ಯಮಂತ್ರಿಅವರು, ಈಶ್ವರಪ್ಪಅವರರಾಜೀನಾಮೆ ಪಡೆಯಲೆಂದೇ ಹುಬ್ಬಳ್ಳಿಯಿಂದ ವಿಶೇಷ ವಿಮಾನದಲ್ಲಿ ನಗರಕ್ಕೆ ಧಾವಿಸಿದರು. ನಾಳೆಯಿಂದ ಹೊಸಪೇಟೆಯಲ್ಲಿಎರಡು ದಿನಗಳ ಕಾಲ ಬಿಜೆಪಿ ಕಾರ್ಯಕಾರಿಣ ನಡೆಯಲಿದ್ದು, ಅದರಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ನಾಳೆ ಬೆಳಗ್ಗೆಯೇ ತೆರಳಲಿದ್ದಾರೆ. ಮುಂಬರುವ ವಿಧಾನಸಭೆಚುನಾವಣೆಗಮನದಲ್ಲಿಟ್ಟುಕೊಂಡೆ ನಡೆಯುತ್ತಿರುವರಾಜ್ಯಕಾರ್ಯಕಾರಿಣ ಯಲ್ಲಿ ಬಿಜೆಪಿ ರಾಷ್ಟಿçÃಯಅಧ್ಯಕ್ಷಜೆ.ಪಿ.ನಡ್ಡಾ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಕಾರ್ಯಕಾರಿಣ ಯಲ್ಲಿಗೊಂದಲಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಮುಖ್ಯಮಂತ್ರಿ, ಈಶ್ವರಪ್ಪರಾಜೀನಾಮೆ ಪಡೆದುಕೊಂಡಿದ್ದಾರೆ.
ಸಚಿವಈಶ್ವರಪ್ಪ ಸ್ವಯಂಪ್ರೇರಣೆ ಯಿಂದರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲಿಯೇ ಆರೋಪಗಳಿಂದ ಮುಕ್ತವಾಗುತ್ತಾರೆ. ಸಂತೋಷ್‌ಆತ್ಮಹತ್ಯೆ ಪ್ರಕರಣದಲ್ಲಿ ಹೇಳಿಕೆಗಳನ್ನು, ತೀರ್ಮಾನಗಳನ್ನು ಕೊಡಲು ವಿರೋಧ ಪಕ್ಷದವರೇನು ನ್ಯಾಯಾಧೀಶರೇಅಥವಾ ಪೊಲೀಸರೇ?
-ಬಸವರಾಜ ಬೊಮ್ಮಾಯಿ.

ಕಾಂಗ್ರೆಸ್‌ಕಾಲದ ಪರ್ಸಂಟೇಜ್ ಬಗ್ಗೆ ಯಾರೂ ಮಾತನಾಡಲಿಲ್ಲ

ಹಾಸನ, ಏ.೧೫- ಭ್ರಷ್ಟಾಚಾರಯಾರ್ಯಾರಿಂದಎಲ್ಲೆಲ್ಲಿ ಹುಟ್ಟಿಕೊಂಡಿದೆ. ಪಾಪ ಈಶ್ವರಪ್ಪಅವರ ಬಗ್ಗೆ ನಾನು ಮಾತ ನಾಡಲ್ಲ. ಕಾಂಗ್ರೆಸ್‌ನವರು ಈಗ ಮೇಲೆ ಹತ್ತಿಕುಣ ಯುತ್ತಿದ್ದಾರೆ. ಕಾಂಗ್ರೆಸ್‌ಕಾಲದಲ್ಲಿ ನಡೆದ ಪರ್ಸಂಟೇಜ್ ಬಗ್ಗೆ ಯಾಕೆ ಮಾತನಾಡ ಲಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪ್ರಶ್ನೆ ಮಾಡಿದ್ದಾರೆ. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತ ನಾಡಿದಅವರು, ಕಾಂಗ್ರೆಸ್‌ನವರು ಮೇಲೆ ಹತ್ತಿಕುಣ ಯದು ಬೇಡ, ನಿಮ್ಮಕಾಲದಲ್ಲಿಏನಾಗಿದೆ. ಈಶ್ವರಪ್ಪತಪುö್ಪ ಮಾಡಿದ್ದರೆತಪ್ಪೇ. ತನಿಖೆ ನಂತರ ಸತ್ಯಾಂಶ ತಿಳಿಯಲಿದೆ. ವರ್ಕ್ಆರ್ಡರ್‌ಇಲ್ಲದೆ ಕೆಲಸ ಮಾಡಿದ್ದರೆ ಸರ್ಕಾರ ಆ ಕುಟುಂಬಕ್ಕೆ ಪರಿಹಾರಕೊಡಬೇಕು.

Translate »